ನಮಸ್ಕಾರ ಸ್ನೇಹಿತರೆ ಸರ್ಕಾರವು ದೇಶ ಜನತೆಗೆ ತುಂಬಾ ಮಹತ್ವದ ಯೋಜನೆಗಳನ್ನು ಹೊರಹಾಕಿದೆ ಅನೇಕ ಯೋಜನೆಗಳು ಸಹ ಇವೆ ಈ ಲೇಖನದಲ್ಲಿ ನಾವು ಕಾರ್ಮಿಕರ ಮಕ್ಕಳಿಗೆ ಓದಲು ಕೆಲವು ಯೋಜನೆಯ ಮಾಹಿತಿ ನೀಡಲಿದ್ದೇವೆ. ಇದರಿಂದ ಈ ಲೆಕ್ಕವನ್ನು ನೀವು ಗಮನವಿಟ್ಟು ಓದಿ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಈಗಾಗಲೇ ಸರಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿಮೆ ಸೌಲಭ್ಯ ವಿತರಣೆಯಿಂದ ಹೆಚ್ಚುವರಿ ಸಹಾಯಧನದವರೆಗೂ ಅನೇಕ ಸೇವಾ ಸೌಲಭ್ಯ ನೀಡಿದೆ. ಇದೀಗ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾಯುವ ಹಿನ್ನಲೆಯಲ್ಲಿ ಈಗಾಗಲೇ ಬೇರೆ ಬೇರೆ ಯೋಜನೆಯನ್ನು ಸರ್ಕಾರ ಪರಿಚಯಿಸಿದ್ದು ಅವರ ಮಕ್ಕಳಿಗೂ ವಿದ್ಯಾಭ್ಯಾಸ ಸಿಗಬೇಕು ಎಂಬ ಉದ್ದೇಶಕ್ಕೆ ವಿದ್ಯಾರ್ಥಿ ವೇತನ ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು ಇದಕ್ಕಾಗಿ ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿ ವೇತನವು ಬಡವರ್ಗದ ಮಕ್ಕಳಿಗೆ ಹಣಕಾಸಿನ ನೆರವು ನೀಡುತ್ತದೆ.
ಕಾರ್ಮಿಕರ ಕಾರ್ಡ್ ಅಗತ್ಯ:
ಈ ವಿದ್ಯಾರ್ಥಿ ವೇತನವು ಎಲ್ಲ ಕಾರ್ಮಿಕರ ಮಕ್ಕಳಿಗೆ ಸಿಗುವುದಿಲ್ಲ ಬದಲಿಗೆ ಕಾರ್ಮಿಕರ ಕಾರ್ಡ್ ಹೊಂದಿದ್ದ ಪೋಷಕರ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು. ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಕಾರ್ಮಿಕರ ಕಾರ್ಡ್ ಅಗತ್ಯವಾಗಿ ಬೇಕೆ ಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಾರ್ಷಿಕ 1100 ನಿಂದ 11,000 ದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ಈ ಯೋಜನೆಗೆ ಅಗತ್ಯವಿರುವ ಅರ್ಹತೆ ಏನು?
- ಸಾಮಾನ್ಯವಾಗಿ ಲೇಬರ್ ಕಾರ್ಡ್ ಹೊಂದಿರುವವರ ಮಕ್ಕಳು ಕಳೆದ ಸಾಲಿನಲ್ಲಿ 50% ಪಡೆದಿರಬೇಕು. ST/SC ನವರು 45%ನಷ್ಟು ಪಡೆಯಬೇಕು.
- ಪೋಷಕರ ಆದಾಯ ತಿಂಗಳಿಗೆ 35,000ಕ್ಕಿಂತ ಕಡಿಮೆ ಇರಬೇಕು. ಹಾಗೂ ವಿದ್ಯಾರ್ಥಿಗಳ ಪೋಷಕರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿರಬೇಕು.
- 1ನೇ ತರಗತಿಯಿಂದ ಪದವಿವರೆಗೆ 1,100 ರೂಪಾಯಿಂದ 6000 ದವರೆಗೆ ಸ್ಕಾಲರ್ ಶಿಪ್ ಹಣ ಸಿಗಲಿದೆ.
- ಸ್ನಾತಕೋತ್ತರ ಪದವಿ ಯಲ್ಲಿ 10,000 ಸ್ಕಾಲರ್ ಶಿಪ್ ಪಡೆಯಬಹುದು.
- PHD ಮಾಡುವವರಿಗೆ ವಾರ್ಷಿಕ 11,000 ದವರೆಗ ವಿದ್ಯಾರ್ಥಿವೇತನವು ಸಿಗಲಿದೆ.
ಎಲ್ಲಿ ಹೇಗೆ ಅರ್ಜಿ ಸಲ್ಲಿಸುವುದು?
ಅರ್ಜಿ ಸಲ್ಲಿಸಲು ಕೆಲವು ದಾಖಲಾತಿಗಳ ಅಗತ್ಯವಾಗಿದೆ. ವಿದ್ಯಾರ್ಥಿಗಳ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಲೇಬರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಶಾಲೆ ಅಥವಾ ಕಾಲೇಜಿನ ದಾಖಲಾತಿ ಪಡೆದರೆ ಅದಕ್ಕೆ ಸಂಬಂಧ ಪಟ್ಟ ರಿಸಿಪ್ಟ್ ಅಗತ್ಯವಾಗಿದೆ. ನೀವು http://klwbapp.Karnataka.gov.in ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಏನೇ ಇರಲಿ ಫ್ರೆಂಡ್ಸ್ ಈಗ ಈ ಪ್ರಪಂಚದಲ್ಲಿ ಜನರು ನಾನಾ ಕಷ್ಟಗಳಿಗೆ ಗುರಿಯಾಗಿದ್ದಾರೆ ಆದ್ದರಿಂದ ಸರ್ಕಾರವು ಬಡದಕ್ಕೆ ಹಿಡಿದ ಕಡಿಮೆ ಇರುವ ಜನರಿಗೆ ಅಂದರೆ ಕಟ್ಟಡ ಕಾರ್ಮಿಕ ಅವರ ಮಕ್ಕಳಿಗೆ ಯೋಜನೆಗಳು ತುಂಬಾ ಅನುಕೂಲಕರವಾಗಿದೆ ಮಕ್ಕಳು ಈ ಯೋಜನೆಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲಕರವಾಗಿದೆ.