rtgh

Gruha Lakshmi: ಗೃಹಲಕ್ಷ್ಮಿ ಯೋಜನೆ ಮತ್ತೆ 4 ಹೊಸ ರೂಲ್ಸ್. ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಮಹಿಳೆಯರಿಗೆ ಬಿಗ್ ಅಪ್ಡೇಟ್.


Gruha Lakshmi New 4 Rules

Gruha Lakshmi: ಮಹಿಳಾ ಸಬಲೀಕರಣದ ಉಪಕ್ರಮವಾದ ಗೃಹಲಕ್ಷ್ಮಿ ಯೋಜನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಕಾರ್ಯಕ್ರಮದ ಅಡಿಯಲ್ಲಿ ಹಣಕಾಸಿನ ನೆರವು ಪಡೆಯುವ ಮಹಿಳಾ ಫಲಾನುಭವಿಗಳಿಗೆ ಸರ್ಕಾರವು ನಾಲ್ಕು ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳು ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿವೆ, ಉದ್ದೇಶಿತ ಸಹಾಯವನ್ನು ಖಚಿತಪಡಿಸುತ್ತವೆ ಮತ್ತು ಮಹಿಳೆಯರಲ್ಲಿ ದೀರ್ಘಕಾಲೀನ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುತ್ತವೆ. ನವೀಕರಿಸಿದ ಮಾರ್ಗಸೂಚಿಗಳ ವಿವರಗಳನ್ನು ಪರಿಶೀಲಿಸೋಣ.

Gruha Lakshmi New 4 Rules
Gruha Lakshmi New 4 Rules

ರಾಜ್ಯ ಸರ್ಕಾರ ಮಹಿಳಾ ಸಬಲೀಕರರಣಕ್ಕಾಗಿ ಜಾರಿಗೊಳಿಸಿದ ಯೋಜನೆಗಳಲ್ಲಿ Gruha Lakshmi ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಅರ್ಹ ಫಲಾನುಭವಿಗಳು ಮಾಸಿಕ 2000 ರೂ ಹಣವನ್ನು ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳು ಈಗಾಗಲೇ 5 ಕಂತಿನ ಹಣವನ್ನು ಪಡೆದಿದ್ದಾರೆ. ಗೃಹಿಣಿಯರು ಒಟ್ಟಾಗಿ ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 10 ಸಾವಿರ ರೂ ಹಣವನ್ನು ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಮಹಿಳೆಯರಿಗೆ ಬಿಗ್ ಅಪ್ಡೇಟ್

ಇನ್ನು ಫೆಬ್ರವರಿ ಮೊದಲ ವಾರದಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಯಾಗುವುದಾಗಿ ಮಾಹಿತಿ ಲಭಿಸಿದೆ. ಈಗಾಗಲೇ ಕೆಲ ಮಹಿಳೆಯರ ಖಾತೆಗೆ ಆರನೇ ಕಂತಿನ ಹಣ ಜಮಾ ಆಗಿರಬಹದು. ಸದ್ಯ ರಾಜ್ಯ ಸರ್ಕಾರ 6 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಹೊಸ ರೂಲ್ಸ್ ಜಾರಿಗೊಳಿಸಿದೆ. ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳು ನಿಯಮವನ್ನು ಪಾಲಿಸಿದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಇನ್ನು ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಡಿಲೀಟ್‌ ಆಗಿದ್ದರೆ ಸೇರಿಸುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನಾಲ್ಕು ಹೊಸ ರೂಲ್ಸ್

•ಗೃಹ ಲಕ್ಷ್ಮಿ ಪಾಲನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. National Payment Corporation of India (NPCI) ಇನ್ನು ಮುಂದೆ ಪ್ರತಿಯೊಬ್ಬರೂ NPCI ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ.

•ಇನ್ನು ಗೃಹ ಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

•ಇನ್ನು ನಿಮ್ಮ Ration Card ಗೆ ನಿಮ್ಮ Aadhar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಆಧಾರ್ ಲಿಂಕ್ ಆಗದೆ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕಿದೆ.

•ಇನ್ನು ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದೆ. ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗೇ ಹಣ ಜಮಾ ಮಾಡಲು ಸಾದ್ಯವಾಗುವಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಈ ನಾಲ್ಕು ಹೊಸ ನಿಯಮಗಳ ಪರಿಚಯವು ಮಹಿಳೆಯರನ್ನು ಸಮಗ್ರ ರೀತಿಯಲ್ಲಿ ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಾಕ್ಷರತೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯೊಂದಿಗೆ ಹಣಕಾಸಿನ ನೆರವನ್ನು ಸಂಯೋಜಿಸುವ ಮೂಲಕ, ಮಹಿಳಾ ಫಲಾನುಭವಿಗಳ ಜೀವನದ ಮೇಲೆ ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಮಾರ್ಗಸೂಚಿಗಳು ಜಾರಿಗೆ ಬರುತ್ತಿದ್ದಂತೆ, ಈ ಮಹಿಳಾ ಸಬಲೀಕರಣ ಉಪಕ್ರಮದ ಒಟ್ಟಾರೆ ಯಶಸ್ಸು ಮತ್ತು ಸುಸ್ಥಿರತೆಗೆ ಅವು ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ನೋಡಬೇಕಾಗಿದೆ.


Leave a Reply

Your email address will not be published. Required fields are marked *