ಸಾಮಾನ್ಯವಾಗಿ ಕೂದಲುದುರುವ ಸಮಸ್ಯೆಯಿಂದ ಮಹಿಳೆಯರು ಮಾತ್ರ ತೊಂದರೆಗೆ ಒಳಗಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರೂ ಕೂಡ ಕಳಪೆ ಆಹಾರ, ಒತ್ತಡದಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಕೂದಲು ಉದುರುವಿಕೆ

ಹೀಗಿರುವಾಗ, ಪುರುಷರು ಕೂದಲು ಉದುರುವಿಕೆಯನ್ನು ತಡೆಯಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಆದರೂ ಕೂಡ ಅವರಿಗೆ ಸಿಗಬೇಕಾದ ಪರಿಣಾಮ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿನಿತಿಸುವ ಅವಶ್ಯಕತೆ ಇಲ್ಲ, ನೀವೂ ಕೂಡ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
how to stop hair fall immediately at home
ಕೂದಲು ಉದುರುವಿಕೆಯನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ
ಪುದೀನಾ ಎಣ್ಣೆ
ನಿಮ್ಮ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ನೀವು ಪುದೀನಾ ಎಣ್ಣೆಯನ್ನು ಬಳಸಬಹುದು. ಪುದೀನಾ ಎಣ್ಣೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೆಪ್ಪರ್ ಮಿಂಟ್ ಎಣ್ಣೆಯು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ . ಅಷ್ಟೇ ಅಲ್ಲ ಅದು ಕೂದಲು ಬೆಳವಣಿಗೆಗೂ ಕೂಡ ಸಹಕಾರಿಯಾಗಿದೆ. ಇದಲ್ಲದೆ, ಪುರುಷರು ತೆಂಗಿನ ಎಣ್ಣೆ, ಆಲಿವ್ ಎಣ್ಣೆಯನ್ನು ಸಹ ಬಳಸಬಹುದು.
ಈರುಳ್ಳಿ ರಸ
ಕೂದಲು ಬೆಳವಣಿಗೆಗೆ ಈರುಳ್ಳಿ ರಸವು ಅತ್ಯಂತ ಪರಿಣಾಮಕಾರಿ ಮನೆಮದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲುಗಳ ಬುಡಭಾಗ ಬಲಗೊಳ್ಳುತ್ತವೆ. ಇದರಿಂದ ಕೂದಲು ಉದುರುವುದು ಬಹುತೇಕ ನಿಲ್ಲುತ್ತದೆ. ಅಷ್ಟೇ ಅಲ್ಲ ಇದರಿಂದ ಹೊಸ ಕೂದಲು ಬೆಳೆಯಲು ಕೂಡ ಈರುಳ್ಳಿ ರಸವೂ ಸಹಾಯ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡುತ್ತದೆ
ಪುರುಷರಲ್ಲಿ ಕೂದಲು ಉದುರಲು ಒತ್ತಡವೂ ಒಂದು ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಉದುರುತ್ತಿದ್ದರೆ, ಮೊದಲನೆಯದಾಗಿ ಒತ್ತಡವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಒತ್ತಡವನ್ನು ಕಡಿಮೆ ಮಾಡಲು ನೀವು ನಿತ್ಯ ವ್ಯಾಯಾಮ ಮಾಡಿ. ಇದಲ್ಲದೆ, ಉತ್ತಮ ನಿದ್ರೆ ಮಾಡುವುದು ಕೂಡ ಒತ್ತಡವನ್ನು ಕಡಿಮೆ ಮಾಡುವ ಒಂದು ಉತ್ತಮ ಮಾರ್ಗವಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
- Bele Parihara 2025: ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್ - August 30, 2025
- NextGen Edu Scholarship – ಪಿಯುಸಿ ವಿದ್ಯಾರ್ಥಿಗಳಿಗೆ ನೆಕ್ಸ್ಟ್ಜೆನ್ ₹15,000 ವಿದ್ಯಾರ್ಥಿವೇತನ ಪಡೆಯಲು ಅವಕಾಶ! - August 30, 2025
- SSP Scholarship Aadhar Link-ವಿದ್ಯಾರ್ಥಿವೇತನ ಪಡೆಯಲು ಆಧಾರ್ ಸೀಡಿಂಗ್ ಕಡ್ಡಾಯ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ! - August 30, 2025