ಗಾಝಾ ಪಟ್ಟಿಯ ನಾಗರಿಕರ ಮೇಲೆ ಯಾವುದೇ ಎಚ್ಚರಿಕೆ ನೀಡದೆ ದಾಳಿ ನಡೆಸಿದಾಗ ಹಮಾಸ್ ಭಯೋತ್ಪಾದಕರು ಇಸ್ರೇಲಿ ನಾಗರಿಕನನ್ನು ಒತ್ತೆಯಾಳಾಗಿ ಕೊಲ್ಲುತ್ತಾರೆ ಎಂದು ಹಮಾಸ್ ಮಿಲಿಟರಿ ವಕ್ತಾರ ಅಬು ಉಬೈದಾ ಬೆದರಿಕೆ ಹಾಕಿದ್ದಾರೆ.
ಒತ್ತೆಯಾಳುಗಳ ಸಂಘರ್ಷದ ಸ್ಥಳವಾಗಿದ್ದ ಸಣ್ಣ ಕೃಷಿ ಸಮುದಾಯದಲ್ಲಿ ಬಿದ್ದಿದ್ದ 100 ಶವಗಳನ್ನು ಇಸ್ರೇಲಿ ಪಡೆಗಳು ವಶಪಡಿಸಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ಗಾಝಾ ಆರೋಗ್ಯ ಸಚಿವಾಲಯದ ಪ್ರಕಾರ, ನಾಲ್ಕು ದಿನಗಳ ಬಿಕ್ಕಟ್ಟಿನ ಅವಧಿಯಲ್ಲಿ ಇಸ್ರೇಲ್ ದಾಳಿಯಲ್ಲಿ 143 ಮಕ್ಕಳು ಮತ್ತು 105 ಮಹಿಳೆಯರು ಸೇರಿದಂತೆ 704 ಜನರು ಸಾವನ್ನಪ್ಪಿದ್ದಾರೆ ಮತ್ತು 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದಲ್ಲದೆ, ಹಮಾಸ್ ದಾಳಿಯಿಂದಾಗಿ ಇಸ್ರೇಲ್ನಲ್ಲಿ ಕನಿಷ್ಠ 900 ಜನರು ಸಾವನ್ನಪ್ಪಿದ್ದಾರೆ ಮತ್ತು 2,600 ಜನರು ಗಾಯಗೊಂಡಿದ್ದಾರೆ ಅಂತ ತಿಳಿಸಿದೆ.
ಸಂಧಾನ ಮಾತುಕತೆಗೆ ಸಿದ್ಧ ಎಂದ ಹಮಾಸ್!
ಹಮಾಸ್ ಬಂಡುಕೋರ ವಿರುದ್ಧ ಇಸ್ರೇಲ್ ತಿರುಗಿಬಿದಿದ್ದು , ಇದರ ಬೆನ್ನಲ್ಲೇ ಸಂಧಾನ ಮಾತುಕತೆಗೆ ಸಿದ್ಧ ಎಂದು ಹಮಾಸ್ ಹೇಳಿದೆ.
ಹಮಾಸ್ ಈಗಾಗಲೇ ತನ್ನ ಗುರಿಗಳನ್ನು ಸಾಧಿಸಿದೆ. ಹಾಗಾಗಿ ಇಸ್ರೇಲ್ ವಿರುದ್ಧ ಸಂಭವನೀಯ ಕದನವಿರಾಮದ ಬಗ್ಗೆ ಮಾತುಕತೆಗಳನ್ನು ನಡೆಸಲು ನಾವು ಸಿದ್ಧ ಎಂದು ಹಮಾಸ್ ನಾಯಕ ಹೇಳಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.
ಅಲ್ ಜಜೀರಾ ಜೊತೆಗಿನ ಫೋನ್ ಸಂದರ್ಶನದಲ್ಲಿ ಪತ್ರಕರ್ತರೊಬ್ಬರು ಇಸ್ಲಾಮಿಸ್ಟ್ ಗುಂಪು ಸಂಭವನೀಯ ಕದನ ವಿರಾಮವನ್ನು ಚರ್ಚಿಸಲು ಸಿದ್ಧವಾಗಿದೆಯೇ ಎಂದು ಕೇಳಿದಾಗ ಹಮಾಸ್ ಆ ರೀತಿಯ ಏನಾದರೂ ಮತ್ತು ಎಲ್ಲಾ ರಾಜಕೀಯ ಸಂಭಾಷಣೆಗಳಿಗೆ ಮುಕ್ತವಾಗಿದೆ ಎಂದು ಮೌಸಾ ಅಬು ಮರ್ಜೌಕ್ ತಿಳಿಸಿದ್ದಾರೆ.
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಯುದ್ಧದಲ್ಲಿ ಈವರೆಗೂ 1400ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ.