ಮುಂದಿನ ದಿನಗಳಲ್ಲಿ, ಹಲವಾರು ಜಿಲ್ಲೆಗಳು ಗಣನೀಯ ಪ್ರಮಾಣದ ಮಳೆಯನ್ನು ಅನುಭವಿಸುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ, ಅಕ್ಟೋಬರ್ 20 ರ ಸುಮಾರಿಗೆ ಭಾರೀ ಮಳೆ ಪ್ರಾರಂಭವಾಗುವ ಮುನ್ಸೂಚನೆಯೊಂದಿಗೆ ಕೆಲವು ಜಿಲ್ಲೆಗಳು ಹವಾಮಾನದಲ್ಲಿ ಬದಲಾವಣೆಯನ್ನು ಅನುಭವಿಸಲಿವೆ.
ಕಳೆದ ವಾರ ಒಂದೆರಡು ದಿನ ಮಳೆರಾಯ ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಬ್ಬರಿಸಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಇದೀಗ ಮತ್ತೆ ಆಡಿದ್ದೇ ಆಟ ಎಂಬಂತೆ ಆಗಸ್ಟ್ ತಿಂಗಳಿನ ರೀತಿ ಮಳೆರಾಯ ಕೈಕೊಟ್ಟಿದ್ದು, ಇದರಿಂದ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ.
ಮತ್ತೊಂದೆಡೆ ಬೆಳೆದ ಬೆಳೆಗಳು ಫಸಲು ಬರುವ ಮುನ್ನವೇ ನೆಲಕ್ಕಚ್ಚಿದ್ದು, ರೈತರು ದಿಕ್ಕು ತೋಚದಂತಹ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಅಕ್ಟೋಬರ್ 20ರಿಂದ ಮಳೆರಾಯ ಕರುಣೆ ತೋರಲಿದ್ದಾನೆ ಎನ್ನುವ ಮುನ್ಸೂಚನೆ ಇದೆ.
ಈಗಾಗಲೇ ಕಳೆದ ವಾರ ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ಹಲವೆವೆಡೆ ಸಾಧಾರಣ ಮಳೆಯಾಗಿದೆ. ಹಾಗೆಯೇ ಅಕ್ಟೋಬರ್ 20ರಿಂದ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ಇದೆ. ಈ ವೇಳೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.
ಈಗಾಗಗಲೇ ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಇನ್ನು ಹಿಂಗಾರು ಮಳೆ ಏನಾದರೂ ಕೈಹಿಡಿಯುತ್ತಾ ಕಾದುನೋಡಬೇಕಿದೆ. ಅಕ್ಟೋಬರ್ 20ರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಕೊಡಗು, ಮೈಸೂರು, ಹಾವೇರಿ, ಬೆಳಗಾವಿ, ಚಿತ್ರದುರ್ಗ, ಚಾಮರಾಜನಗರ, ತುಮಕೂರು, ರಾಮನಗರ, ಕೋಲಾರ, ದಾವಣಗೆರೆ, ಮೈಸೂರು, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ.
ಭಾರತೀಯ ಹವಾಮಾನ ಇಲಾಖೆಯವ ಪ್ರಕಾರ, ತೀವ್ರವಾದ ಪಶ್ಚಿಮದ ಅಡಚಣೆಯಿಂದಾಗಿ, ಮುಂದಿನ 4 ದಿನಗಳಲ್ಲಿ ದೇಶದ ವಾಯುವ್ಯ ಮತ್ತು ಮಧ್ಯ ಪ್ರದೇಶದಲ್ಲಿ ಮಳೆ ಸುರಿಯುವ ನಿರೀಕ್ಷೆ ಇದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಹಿಮಪಾತವನ್ನು ಉಂಟುಮಾಡುತ್ತದೆ ಎಂದು ತಿಳಿಸಿದೆ. ಇನ್ನು ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ನವದೆಹಲಿಯಲ್ಲಿ ಸೋಮವಾರ (ಅಕ್ಟೋಬರ್ 16) ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ.