rtgh

ಹೆಣ್ಣು ಮಕ್ಕಳ ಮದುವೆಯ ವಯಸ್ಸಿನ ಮಿತಿಯಲ್ಲಿ ಹೆಚ್ಚಳ, ಮದುವೆಯಾಗುವ ಹೆಣ್ಣು ಮಕ್ಕಳಿಗೆ ಹೊಸ ನಿಯಮ


ಭಾರತವೂ ಸೇರಿದಂತೆ ಪ್ರಪಂಚದ ಅನೇಕ ಭಾಗಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸಿನ ಮಿತಿಯನ್ನು ಹೆಚ್ಚಿಸುವ ಚರ್ಚೆಯು ಗಮನಾರ್ಹ ಗಮನವನ್ನು ಗಳಿಸಿದೆ. ಒಬ್ಬ ವ್ಯಕ್ತಿಯು ಕಾನೂನುಬದ್ಧವಾಗಿ ಮದುವೆಯಾಗಬಹುದಾದ ಕನಿಷ್ಠ ವಯಸ್ಸನ್ನು ಸೂಚಿಸುವ ಮದುವೆಯ ವಯಸ್ಸು, ವಿವಿಧ ಕಾರಣಗಳಿಗಾಗಿ ದೀರ್ಘಕಾಲ ಚರ್ಚೆಯ ವಿಷಯವಾಗಿದೆ. ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ವೈಯಕ್ತಿಕ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ದೂರಗಾಮಿ ಪ್ರಯೋಜನಗಳನ್ನು ಪಡೆಯಬಹುದು ಎಂದು ವಕೀಲರು ವಾದಿಸುತ್ತಾರೆ.

Increase in marriageable age limit for girls
Increase in marriageable age limit for girls

ಸದ್ಯ ದೇಶದಲ್ಲಿ ಈ ಹಿಂದೆ ಬಾಲ್ಯ ವಿವಾಹದಂತಹ ನಿಯಮವಿತ್ತು. ಅತಿ ಸಣ್ಣ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಶಿಕ್ಷಣ ನೀಡದೆ ಅವರ ಭವಿಷ್ಯವನು ಸಣ್ಣ ವಯಸ್ಸಿನಲ್ಲೇ ಕಷ್ಟಕ್ಕೆ ಒಡ್ಡಲಾಗುತ್ತಿತ್ತು. ಆದರೆ 2006 ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದು, ಹೊಸ ಕಾಯ್ದೆಯ ಅಡಿಯಲ್ಲಿ ಯಾರು ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿರಲಿಲ್ಲ.

ಕಾಯ್ದೆಯನ್ನು ಉಲ್ಲಂಘಿಸಿ ಬಾಲ್ಯ ವಿವಾಹ ಮಾಡಿದರೆ ಅಂತವರಿಗೆ ಕಠಿಣ ಶಿಕ್ಷೆಯನ್ನು ಕೂಡ ಭಾರತೀಯ ಕಾನೂನು ವಿಧಿಸಿತ್ತು. ದೇಶದಲ್ಲಿ ಬಾಲ್ಯ ವಿವಾಹ ನಿಷೇಧವಾದ ಬಳಿಕ ಭಾರತೀಯ ಕಾನೂನು ಹುಡುಗ ಹಾಗೂ ಹುಡುಗಿಗೆ ಮದುವೆಯ ವಯಸ್ಸನ್ನು ನಿಗದಿಪಡಿಸಿತ್ತು. ಇದೀಗ ಈ ರಾಜ್ಯದಲ್ಲಿ ಯುವಕ ಯುವತಿಯರ ಮದುವೆಯ ವಯಸ್ಸಿನ ಮಿತಿಯ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮದುವೆಯಾಗುವ ಎಲ್ಲಾ ಯುವತಿಯರಿಗೆ ಹೊಸ ನಿಯಮ
ಸದ್ಯ ದೇಶದಲ್ಲಿ ಯುವಕರಿಗೆ 21 ವರ್ಷ ಹಾಗೂ ಯುವತಿಯರಿಗೆ ಮದುವೆಯ ವಯಸ್ಸನ್ನು ಭಾರತೀಯ ಕಾನೂನು ನಿಗದಿಪಡಿಸಿದೆ. ಆದರೆ ಇದೀಗ ಈ ರಾಜ್ಯದಲ್ಲಿ ಮದುವೆಯಾಗುವ ಎಲ್ಲಾ ಯುವತಿಯರಿಗೆ ಹೊಸ ನಿಯಮ ಅನ್ವಯವಾಗಲಿದೆ. ಯುವಕ ಯುವತಿಯರ ಮದುವೆಯ ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಈ ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೆಚ್ಚಾಗಲಿದೆ ಮದುವೆಯ ವಯಸ್ಸಿನ ಮಿತಿ
ರಾಜ್ಯದಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಬಲಪಡಿಸುವ ಉದ್ದೇಶದಿಂದ ಮದುವೆಯ ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅವರು ನಿರ್ಧರಿಸಿದ್ದಾರೆ.

ವಯಸ್ಸಿನ ಮಿತಿಯ ಹೆಚ್ಚಳಕ್ಕಾಗಿ ರಾಜ್ಯದಲ್ಲಿ ಹೊಸ ಸರ್ಕಾರ ಸಮಿತಿ ರಚಿಸಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸಿನ ಮಿತಿಯನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಇನ್ನುಮುಂದೆ ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಮದುವೆಯಾಗಲು 21 ವರ್ಷ ತುಂಬಿರಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯ ಸಿಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ಹೆಣ್ಣು ಮಕ್ಕಳ ಭವಿಷ್ಯ ಉದ್ದೇಶದಿಂದ ಈ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಡಿಮೆ ವಯಸ್ಸಿಗೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದ್ದು ಈ ಹಿನ್ನಲೆಯಲ್ಲಿ ಈ ತೀರ್ಮಾನವನ್ನ ತಗೆದುಕೊಳ್ಳಲಾಗಿದೆ.


Leave a Reply

Your email address will not be published. Required fields are marked *