ರಾಷ್ಟ್ರದಾದ್ಯಂತ ಗ್ರಾಹಕರು ಅಗತ್ಯ ಡೈರಿ ಉತ್ಪನ್ನಗಳ, ವಿಶೇಷವಾಗಿ ಹಾಲು ಮತ್ತು ಮೊಸರುಗಳ ಬೆಲೆಗಳಲ್ಲಿ ಹಠಾತ್ ಏರಿಕೆಯನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸವಾಲುಗಳಿಂದ ಈಗಾಗಲೇ ಹೊರೆಯಾಗಿರುವ ಕುಟುಂಬಗಳು, ಈ ಪ್ರಮುಖ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದ್ದಂತೆ ತಮ್ಮ ಬಜೆಟ್ ಅನ್ನು ನಿರ್ವಹಿಸುವ ಬೆದರಿಸುವ ಕೆಲಸವನ್ನು ಎದುರಿಸುತ್ತಿದೆ. ಬೆಲೆಗಳ ಏರಿಕೆಯ ಸುತ್ತಲಿನ ವಿವಾದವು ಕುದಿಯುವ ಹಂತವನ್ನು ತಲುಪಿದೆ, ನಾಗರಿಕರು ಸರ್ಕಾರದಿಂದ ಉತ್ತರ ಮತ್ತು ಉತ್ತರದಾಯಿತ್ವವನ್ನು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಸ್ವಲ್ಪ ದಿನಗಳ ಹಿಂದೆ ಹಾಲು ಹಾಗು ಮೊಸರಿನ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಹೊಸ ವರ್ಷದಿಂದ ಹಾಲು ಹಾಗು ಮೊಸರಿನ ದರ ಏರಿಕೆ ಆಗಲಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗ ಎರಡನೇ ಬಾರಿಗೆ ಹಾಲು ಹಾಗು ಮೊಸರಿನ ಬೆಲೆಯಲ್ಲಿ ಏರಿಕೆ ಆಗುತ್ತಿರುವುದನ್ನು ಕಾಣಬಹುದು. ಹಾಲಿನ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದು, ಹಾಲು ಒಕ್ಕೂಟಗಳ ಮನವಿಯ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹಾಲು ಹಾಗೂ ಮೊಸರಿನ ದರದಲ್ಲಿ ಏರಿಕೆ ಆಗಲಿದೆ.
ಹಾಲು ಹಾಗು ಮೊಸರಿನ ಬೆಲೆ ಏರಿಕೆ
ಹಾಲು ಹಾಗು ಮೊಸರಿನ ಬೆಲೆ ಏರಿಕೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸುಳಿವು ನೀಡಲಾಗಿದ್ದು . ಹಾಲಿನ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲನೆಯಲ್ಲಿದ್ದೇವೆ ಎಂದು ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್, ಶಾಸಕ ನಂಜೇಗೌಡ ಹೇಳಿಕೆ ನೀಡಿದ್ದಾರೆ.
ಇನ್ನು ಓದಿ: ರಾಜ್ಯದ ಮಹಿಳೆಯರಿಗೆ ಪ್ರೇರಣಾ ಯೋಜನೆಯಲ್ಲಿ ಸಿಗಲಿದೆ ರೂ.2,50,000 ರೂ.ವರೆಗೆ ಸಹಾಯಧನ.
ರಾಜ್ಯದ 14 ಹಾಲು ಒಕ್ಕೂಟಗಳು ಹಾಲಿನ ದರ ಲೀಟರ್ಗೆ 5 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದ್ರೆ ಸರ್ಕಾರ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಅದೂ ಕೂಡ ಆ ಮೂರು ರೂಪಾಯಿ ನೇರವಾಗಿ ರೈತರಿಗೆ ನೀಡಲಾಗಿತ್ತು. ಹೀಗಾಗಿ ನಷ್ಟದಲ್ಲಿರುವುದರಿಂದ ದರ ಏರಿಕೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ.
ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ
ಹಲವು ಖಾಸಗಿ ಬ್ರಾಂಡ್ ಗಳಲ್ಲಿ ನಂದಿನಿ ಹಾಲು ಉತ್ಪದನಾ ಬ್ರಾಂಡ್ ಕೂಡ ಒಂದಾಗಿದೆ. ಇನ್ನಿತರ ಖಾಸಗಿ ಬ್ರಾಂಡ್ ಗೆ ಹೋಲಿಸಿದರೆ ನಂದಿನಿ ಹಾಲಿನ ದರ 10-12 ರೂಪಾಯಿ ಕಡಿಮೆ ಇದೆ. ಇದರಿಂದಾಗಿ ಹಾಲು ಉತ್ಪಾದನೆ ಮಾಡುವವರು ಹಾಗೂ ಒಕ್ಕೂಟಗಳು ನಷ್ಟದಲ್ಲಿವೆ. ಇದನ್ನು ಮನಗಂಡು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ದರ ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸದನಕ್ಕೆ ಉತ್ತರ ಕೊಟ್ಟಿದ್ದಾರೆ.
ಹೀಗಾಗಿ ಹೊಸ ವರ್ಷದಲ್ಲಿ ನಂದಿನಿ ಉತ್ಪನ್ನಗಳ ದರ ಏರಿಕೆಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಹೊಸ ವರ್ಷದಲ್ಲಿ ನಂದಿನಿ ಹಾಲಿನ ದರ ಎಷ್ಟು ಏರಿಕೆ ಆಗುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಇನ್ನೂ ಕೂಡ ಲಭಿಸಿಲ್ಲ. ಸದ್ಯ ಹಾಲಿನ ದರ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ ಎಂದು ಹೇಳಬಹುದು. ಮೂರೂ ತಿಂಗಳ ಹಿಂದೆ ಹಾಲು ಮತ್ತು ಮೊಸರಿನ ದರ ಏರಿಕೆ ಆಗಿದ್ದು ಹೊಸ ವರ್ಷದಲ್ಲಿ ಮತ್ತೆ ದರ ಏರಿಕೆ ಆಗಲಿದೆ.