Job openings in the Department of Rural Development and Panchayat Raj 2025
ಪದವಿ ಪೂರೈಸಿ, ಮೈಸೂರು, ದಕ್ಷಿಣ ಕನ್ನಡ, ಕೋಲಾರದಲ್ಲಿ ಡೀಸೆಂಟ್ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ನಿಮಗೆ ಭರ್ಜರಿ ಅವಕಾಶ! ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (MGNREGA) ಅನುಷ್ಠಾನ ಸಂಬಂಧ ಒಂಬುಡ್ಸ್‌ಪರ್ಸನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ಮುಖ್ಯಾಂಶಗಳು
- ನೇಮಕಾತಿ ಇಲಾಖೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
- ಹುದ್ದೆ ಹೆಸರು: ಓಂಬುಡ್ಸ್‌ಪರ್ಸನ್.
- ಹುದ್ದೆಗಳ ಸ್ಥಳಗಳು: ಮೈಸೂರು, ಕೋಲಾರ, ದಕ್ಷಿಣ ಕನ್ನಡ.
- ಹುದ್ದೆಯ ಸ್ವರೂಪ: ಅರೆಕಾಲಿಕ ಹುದ್ದೆ.
- ಸಂಬಳ: ಮಾಸಿಕ ₹10,000 ಗೌರವಧನ, ಪ್ರತಿ ಸಿಟ್ಟಿಂಗ್ ₹2,250 (ಗರಿಷ್ಠ ₹45,000).
ಅರ್ಹತೆಗಳು
- ಮಾನ್ಯ ವಿವಿಯ ಪದವಿ ಪಾಸಾಗಿರಬೇಕು.
- ಸಾರ್ವಜನಿಕ ಆಡಳಿತ, ಕಾನೂನು, ಶಿಕ್ಷಣ, ಸಮಾಜ ಸೇವೆ, ಅಥವಾ ಮ್ಯಾನೇಜ್ಮೆಂಟ್‌ನಲ್ಲಿ ಕನಿಷ್ಠ 10 ವರ್ಷಗಳ ಅನುಭವ.
- ಸಾರ್ವಜನಿಕರೊಂದಿಗೆ ಅಥವಾ ಸಮುದಾಯದ ಕೆಲಸದಲ್ಲಿ ಕೆಲಸ ಮಾಡಿದ ಅನುಭವ.
- ಯಾವುದೇ ರಾಜಕೀಯ ಅಥವಾ ನಿಷೇಧಿತ ಸಂಘಟನೆಗಳ ಸದಸ್ಯರಾಗಿರಬಾರದು.
- ದೈಹಿಕವಾಗಿ ಸಮರ್ಥರಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣಿಸಲು ಸಿದ್ಧರಾಗಿರಬೇಕು.
- ಗರಿಷ್ಠ ವಯೋಮಿತಿಯು 66 ವರ್ಷ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಅಧಿಕೃತ ವೆಬ್‌ಸೈಟ್: www.rdpr.karnataka.gov.in
ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. - ನಿಮ್ಮ ಶೈಕ್ಷಣಿಕ ಅರ್ಹತೆ, ಅನುಭವದ ದಾಖಲೆ, ಇತರೆ ಪೂರಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ಇಳಿಸಿದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಫೆಬ್ರವರಿ 2025.
ಅರ್ಜಿ ಸಲ್ಲಿಸಲು ವಿಳಾಸ
ಆಯುಕ್ತರು,
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,
5ನೇ ಮಹಡಿ, ಪ್ಲಾನ್ ನಂ:1243,
ಕೆ.ಎಸ್.ಐ.ಐ.ಡಿ.ಸಿ ಕಟ್ಟಡ,
ಐಟಿ ಪಾರ್ಕ್, ಸೌತ್ ಬ್ಲಾಕ್,
ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್,
ಬೆಂಗಳೂರು – 560010.
ಸೂಚನೆ
- ನಿಗದಿತ ದಿನಾಂಕದ ನಂತರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
- ಹೆಚ್ಚಿನ ಮಾಹಿತಿಗಾಗಿ 080-22342163 ಗೆ ಕರೆ ಮಾಡಿ.
ಈ ಅವಕಾಶವನ್ನು ಕೈಚೆಲ್ಲದೆ, ಶೀಘ್ರದಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಹೊಸ ಕರಿಯರ್ ಆರಂಭಿಸಿ!