rtgh

ಕಾರ್ಗಿಲ್ ವಿಜಯ್ ದಿವಸ್: ಪಾಕಿಸ್ತಾನದ ಹುಟ್ಟಡಗಿಸಿದ ಭಾರತೀಯ ಯೋಧರ ರೋಚಕ ಕತೆ. ಭಾರತೀಯರು ಎಂದು ಮರೆಯದ ಈ ದಿನದ ಇತಿಹಾಸ ಇಲ್ಲಿದೆ.


kargil vijay diwas information in kannada
kargil vijay diwas information in kannada

1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿತ್ತು. ಈ ಯುದ್ದದಲ್ಲಿ ಅನೇಕ ವಿರ ಯೋಧರು ಹುತಾತ್ಮರಾದರು.

“ಕಾರ್ಗಿಲ್ ವಿಜಯ್ ದಿವಸ್”. ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯರಿಗೆ ಇದು ಎಂದು ಮರೆಯದ ದಿವಾಗಿದೆ. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಹೌದು. ಕಾರ್ಗಿಲ್‌ ಯುದ್ಧ ಭಾರತೀಯ ಪ್ರತಿಯೋಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.

ಯುದ್ಧ ಆರಂಭವಾಗಿದ್ದು ಏಕೆ?

ಯುದ್ಧ ಆರಂಭವಾಗಿದ್ದು ಏಕೆ?

ಈ ಯುದ್ಧ ನಡೆಯಲು ಮುಖ್ಯ ಕಾರಣ ಪಾಕಿಸ್ತಾನದ ಮೋಸದಾಟ. ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದೆ. ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಮೈನಸ್‌ ಡಿಗ್ರಿ ಸೆಲ್ಸಿಯಸ್‌ ಇಳಿಯುತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್‌ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ.


ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್‌ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 24ನೇ ವರ್ಷ. ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತೀಯ ಸೈನಿಕರು ವಿಜಯ ಪತಾಕೆ ಹಾರಿಸಿದ ದಿನ. ಈ ವಿಜಯೋತ್ಸವದ ನೆನಪಿಗಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ಜುಲೈ 26ರಂದು ಆಚರಿಸಲಾಗುವುದು.

ಪಾಕಿಸ್ತಾನದ ವಂಚನೆ

ಪಾಕಿಸ್ತಾನದ ವಂಚನೆ

ಚಳಿಗಾಲದಲ್ಲಿ ಕಾಶ್ಮೀರದ ಪರ್ವತ ಪ್ರದೇಶದಲ್ಲಿನ ಮೈಕೊರೆಯುವ ಚಳಿ ಹೇಗಿರುತ್ತೆ ಎಂಬುವುದನ್ನು ಊಹಿಸಿ ನೋಡಿ, ನಾವು 16 ಡಿಗ್ರಿ, 10 ಡಿಗ್ರಿ ತಾಪಮಾನಕ್ಕೆ ಚಳಿಯೆಂದು ಒದ್ದಾಡಿದರೆ ನಮ್ಮ ಸೈನಿಕರು ಇರುವ ಆ ಪ್ರದೇಶದಲ್ಲಿ ಮೈನಸ್ ಡಿಗ್ರಿ ಚಳಿಯಿರುತ್ತದೆ. ಈ ಮೈ ಕೊರೆಯುವ ಚಳಿಯಿರುವಾಗ ಗಡಿ ನಿಯಂತ್ರಣ ರೇಖೆಯ ಆಯ ಬದಿಗಳಲ್ಲಿ ಕೆಲವು ಮುಂಚೂಣಿ ಶಿಬಿರಗಳನ್ನು ತೊರೆಯುವುದು, ಅತಿಕ್ರಮೇಣಕ್ಕೆ ದಾರಿಯಾಗದಂತೆ ಗಸ್ತನ್ನು ಕುಂಠಿತಗೊಳೀಸುವುದು ಪಾಕಿಸ್ತಾನ, ಭಾರತ ಎರಡೂ ಸೇನೆಗಳ ವಾಡಿಕೆ.

ಆದರೆ 1999ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನ ಸೇನೆಯು ತನ್ನ ಕುತಂತ್ರ ಬುದ್ಧಿ ತೋರಿಸಿತು. ಗಡಿ ನಿಯಂತ್ರಣ ರೇಖೆಯ ಭಾರತದ ಬದಿಯಲ್ಲಿರುವ ಶಿಭಿರಗಳ ಮೇಲೆ ಆಕ್ರಮಣಕ್ಕೆ ತನ್ನ ಪಡೆಗಳನ್ನು ಕಳಿಸಿತು. ಇದು ಭಾರತ-ಪಾಕ್ ಯುದ್ಧಕ್ಕೆ ನಾಂದಿಯಾಯಿತು.

3 ಹಂತದಲ್ಲಿ ನಡೆದ ಯುದ್ಧ

3 ಹಂತದಲ್ಲಿ ನಡೆದ ಯುದ್ಧ

ಮೊದಲಿಗೆ ಪಾಕಿಸ್ತಾನವು ಭಾರತದ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತ ನಿಯಂತ್ರಿತ ಕಾಶ್ಮೀರ ಭಾಗಕ್ಕೆ ನುಸುಳಿಕೋರರನ್ನು ಕಳುಹಿಸಿತು. ಭಾರತಕ್ಕೆ ಸೇರಿದ ಸ್ಥಳಗಳನ್ನು ಆಕ್ರಮಿಸಿಕೊಳ್ಳುತ್ತಾ ತನ್ನ ಫಿರಂಗಿಗಳನ್ನು ರಾಷ್ಟ್ರೀಯ ಹೆಚ್ಚಾರಿ 1ಗೆ ತರುವಂತೆ ಅನುಮಾಡಿ ಕೊಂಡಿತು.

ಕೆಳ ಮುಷೋಖ್‌ ಕಣಿವೆಯ ಶಿಖರಗಳು, ಡ್ರಾಸ್‌ನ ಮಾರ್ಪೋಲಾ ಪರ್ವತ ಶ್ರೇಣಿಗಳು, ಕಾರ್ಗಿಲ್ ಬಳಿಯ ಕಕ್ಸಾರ್‌, ಸಿಂಧು ನದಿಯ ಪೂರ್ವಕ್ಕಿರುವ ಬೆಟಾಲಿಕ್‌ ವಲಯ, ಗಡಿ ನಿಯಂತ್ರಣ ರೇಖೆಯ ಉತ್ತರಕ್ಕೆ ತಿರಗುವ ಚೋರ್‌ಬಾಟ್ಲಾ ವಲಯದ ಶಿಖರಗಳು ಮತ್ತು ಸಿಯಾಚಿನ್ ಪ್ರದೇಶದ ಟರ್ಟೊಕ್‌ವರೆಗೆ ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಿತು

ಭಾರತಕ್ಕೆ ಪಾಕಿಸ್ತಾನ ಕಳ್ಳಾಟದ ಸುಳಿವು ಕೂಡ ಇರಲಿಲ್ಲ

ಭಾರತಕ್ಕೆ ಪಾಕಿಸ್ತಾನ ಕಳ್ಳಾಟದ ಸುಳಿವು ಕೂಡ ಇರಲಿಲ್ಲ

ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ತೋರಿದ್ದು ಭಾರತೀಯ ಸೇನೆಯ ಅರಿವಿಗೇ ಬಂದಿರಲಿಲ್ಲ. ಈ ಕುರಿತು ಸೇನೆಗೆ ಕಾಶ್ಮೀರದ ಸ್ಥಳೀಯರೊಬ್ಬರು ಮಾಹಿತಿ ನೀಡುತ್ತಾರೆ. ಆಗ ಎಚ್ಚೆತ್ತ ನಮ್ಮ ಸೇನೆ 5 ಯೋಧರನ್ನು ಗಸ್ತಿಗೆ ಕಳುಹಿಸುತ್ತದೆ. ಆದರೆ ಈ ಯೋಧರನ್ನು ಪಾಪಿಗಳು ಚಿತ್ರ ಹಿಂಸೆ ನೀಡಿ ಕೊಂದು ಹಾಕುತ್ತಾರೆ.

ಆಗ ಭಾರತ ಸರಕಾರ ಇಪ್ಪತ್ತು ಸಾವಿರ ಸೈನಿಕರ ಪಡೆ ಸಜ್ಜುಗೊಳಿಸಿ ಆಪರೇಷನ್ ವಿಜಯ್ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸುತ್ತೆ. ಕಾರ್ಗಿಲ್ ದುರ್ಗಮ ಪ್ರದೇಶದ ಒಳಹೊಕ್ಕು ಪಾಕ್ ಬಗ್ಗು ಬಡೆಯಲು ಭೂ ಸೇನೆ ಜೊತೆಗೆ ವಾಯು ಸೇನೆಯೂ ಸೇರಿಕೊಂಡು ‘ಆಪರೇಷನ್ ಸೇಫ್‌ ಸಾಗರ್’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಾರೆ.

 2ನೇ ವಿಶ್ವ ಯುದ್ಧದ ಬಳಿಕ ಅಪಾರ ಶಸ್ತ್ರಾಸ್ತ ಬಳಸಿದ ಯುದ್ಧ

2ನೇ ವಿಶ್ವ ಯುದ್ಧದ ಬಳಿಕ ಅಪಾರ ಶಸ್ತ್ರಾಸ್ತ ಬಳಸಿದ ಯುದ್ಧ

ಆರ್‌-77 ಕ್ಷಿಪಣಿ, ಮಿಗ್‌-21 ಮತ್ತು ಮೀರಜ್‌ 2000 ಯುದ್ಧ ವಿಮಾನಗಳನ್ನು ಬಳಸಲಾಗುವುದು. ಬೋಫೋರ್ಸ್ ಬಂದೂಕುಗಳನ್ನು ಬಳಸಲಾಗುತ್ತದೆ, 300 ಫಿರಂಗಿಗಳು, ರಾಕೆಟ್‌ಗಳನ್ನು ಬಳಸುತ್ತಾರೆ. 2ನೇ ವಿಶ್ವ ಯುದ್ಧದ ಬಳಿಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಬಳಕೆ ಮಾಡಿದ ಮೊದಲ ಯುದ್ಧ ಇದಾಗಿದೆ. ಈ ಹೋರಾಟದಲ್ಲಿ ಎರಡೂ ದೇಶಗಳಲ್ಲಿ ಸಾಕಷ್ಟು ಸೈನಿಕರು ಪ್ರಾಣ ಕಳೆದುಕೊಂಡರು. ಸತತ ಹೋರಾಟದ ಫಲವಾಗಿ ಟೋಲೊಲಿಂಗ್ ಭಾರತದ ವಶವಾಯಿತು.

ಆಪರೇಷನ್ ತಲ್ವಾರ್

ಆಪರೇಷನ್ ತಲ್ವಾರ್

ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ ‘ಆಪರೇಷನ್ ತಲ್ವಾರ್’ ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತ ಯುದ್ಧ ಗೆದ್ದಿತು. ಇದಾದ ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್‌ ವಿಜಯ ದಿವಸ್‌ ಅನ್ನು ಆಚರಣೆ ಮಾಡಲಾಗುತ್ತದೆ.

ಆಪರೇಷನ್ ಸಫೇದ್‌ ಸಾಗರ್

ಆಪರೇಷನ್ ಸಫೇದ್‌ ಸಾಗರ್

ಅತ್ತ ಪಾಕಿಸ್ತಾನವು ಕೂಡಾ ಭಾರತದ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದರಂತೆ ಪಾಕ್‌ ಸುಮಾರು 5,000 ಕ್ಕೂ ಹೆಚ್ಚು ಸೈನಿಕರನ್ನ ಕಳುಹಿಸಿಕೊಟ್ಟಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಶಸ್ತ್ರಸಜ್ಜಿತವಾಗಿ ಮುನ್ನುಗ್ಗಿತ್ತು. ಎತ್ತರದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಶೆಲ್‌ ದಾಲಿಯ ಮೂಲಕ ಭಾರತೀಯ ಸೇನೆ ಪಾಕಿಸ್ತಾನಿಯ ಬಂಕರ್‌ಗಳತ್ತ ದೃಷ್ಟಿ ಇರಿಸಿತ್ತು. ಭಾರತಕ್ಕೆ ಬೋಫೋರ್ಸ್‌ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು ಸಾಕಷ್ಟು ಬಲ ತುಂಬಿದ್ದವು.


‘ಆಪರೇಷನ್ ಸಫೇದ್‌ ಸಾಗರ್’ ಅನ್ನು ಪ್ರಾರಂಭಿಸಿದ ಭಾರತೀಯ ಸೇನೆ, ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಲು ಇಂಡಿಯನ್ ಮಿಗ್ -21, ಮಿಗ್ -27 ಮತ್ತು ಮಿರಾಜ್ 2000 ನಂತಹ ಯುದ್ಧ ವಿಮಾನಗಳನ್ನು ಬಳಸಿತು. ಪಾಕ್‌ ಶತ್ರುಗಳನ್ನು ನಿರ್ಮೂಲನೆ ಮಾಡಲು ಐಎಎಫ್‌ ಯೋಧರು ಈ ವಿಮಾನಗಳಿಂದ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹಾರಿಸಿದರು.

ಭಾರತದ ವಿಜಯೋತ್ಸವ

ಟೈಗರ್ ಹಿಲ್ ಭಾರತ ವಶಪಡಿಸಿಕೊಂಡಿತು. ಆಕ್ರಮಿತ ಪ್ರದೇಶದ ಅಂದಾಜು ಶೇ.80ರಷ್ಟು ಭಾಗ ಭಾರತ ವಶಪಡಿಸಕೊಂಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನದ ಮೇಲೆ ಒತ್ತಡ ಬಿತ್ತು, ಅಷ್ಟರಲ್ಲಿಯೇ ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತು. ಯುದ್ಧದಲ್ಲಿ ಸತ್ತ ಪಾಕ್‌ ಸೈನಿಕರನ್ನು ಸ್ವೀಕರಿಸಲೂ ಪಾಕ್ ಹಿಂದೇಟು ಹಾಕಿತು. 1999 ಜುಲೈ 26 ರಂದು ಭಾರತ ಪಾಕಿಸ್ತಾನದ ವಿರುದ್ಧ ಸಾರಿದ ಸಮರದಲ್ಲಿ ಸಂಪೂರ್ಣ ಜಯಶಾಲಿಯಾಯಿತು. ಈ ಗೆಲುವನ್ನು ಸ್ಮರಣೆ ಮಾಡಲು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ.


Leave a Reply

Your email address will not be published. Required fields are marked *