ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸಮಾಜದ ಆಗು ಹೋಗುಗಳು, ಪ್ರಗತಿಯ ವಿಚಾರಗಳು, ನಡೆ ನುಡಿಗಳು, ಇತ್ಯಾದಿಗಳಲ್ಲಿ ಮಾಧ್ಯಮಗಳ ಪಾತ್ರ ಬಹಳ ಇದೆ. ಪತ್ರಕರ್ತರು ಸರಿಯಾದ ಮಾಹಿತಿಗಳನ್ನು ಪ್ರಕಟಿಸಿದರೆ ಮಾತ್ರ ಜನರಿಗೆ ಇದರ ಬಗ್ಗೆ ಅರಿವು ಆಗುತ್ತದೆ. ಆದ್ದರಿಂದ ಪತ್ರ ಕರ್ತರಿಗೆ ಈ ಸಮಾಜದಲ್ಲಿ ವಿಶೇಷ ರೀತಿಯ ಸ್ಥಾನಮಾನ ಇದೆ. ಅದೇ ರೀತಿ ಪತ್ರಕರ್ತರಿಗೂ ಸಹ ಸೌಲಭ್ಯಗಳ ಕೊರತೆ ಇದ್ದು ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಪತ್ರಕರ್ತರಿಗೂ ಸಹ ಗುಡ್ ನ್ಯೂಸ್ ನೀಡಿದ್ದಾರೆ. ಜನರಿಗೆ ಮಾಹಿತಿ ಪ್ರಸ್ತುತ ಪಡಿಸುವ, ಜನರ ಹಿತಕ್ಕಾಗಿ ಒಳ್ಳೆಯ ಕೆಲಸ ಮಾಡುವ ಪತ್ರಕರ್ತರಿಗೂ ಈ ಬಾರಿಯ ಬಜೆಟ್ ನಲ್ಲಿ ವಿಶೇಷವಾದ ಸೌಲಭ್ಯ ಘೋಷಣೆ ಮಾಡಿದ್ದಾರೆ. ಇದರ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಮನವಿ ಮಾಡಲಾಗಿತ್ತು:
ಪತ್ರಕರ್ತರಿಗೆ ವಿಮೆ ಸೌಲಭ್ಯ ಕೂಡ ಇಲ್ಲ ಎನ್ನುವ ಬಗ್ಗೆ ಮನವಿ ಬಂದಿತ್ತು. ಇದರ ಜೊತೆಗೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free Bus Pass) ನೀಡಬೇಕು ಎಂಬ ಮನವಿ ಕೂಡ ಕೇಳಿ ಬಂದಿದ್ದು, ಇವರು 10 ವರ್ಷಗಳಿಂದ ಉಚಿತ ಬಸ್ ಪಾಸ್ ಗಾಗಿ ಬೇಡಿಕೆ ಮುಂದಿಟ್ಟಿದ್ದು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free Bus Pass) ನೀಡುವುದರ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಿ ಬಜೆಟ್ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಬಜೆಟ್ ನಲ್ಲಿ ಈ ಯೋಜನೆಗೆ ಅನುಮೋದನೆ ಸಹ ಸಿಕ್ಕಿದೆ.
ಇದನ್ನೂ ಸಹ ಓದಿ: ಕೋಳಿ ತಿನ್ನುವವರಿಗೆ ಸರ್ಕಾರದಿಂದ ಖಡಕ್ ಎಚ್ಚರಿಕೆ..! ಇನ್ಮುಂದೆ ಚಿಕನ್ ಮಾರಾಟ ಬಂದ್
ಶೀಘ್ರ ಹಂಚಿಕೆ:3
ಬಜೆಟ್ ನಲ್ಲಿ ಪತ್ರ ಕರ್ತರಿಗೆ ನೀಡಿರುವ ಈ ಬಸ್ ಪಾಸ್ ಯೋಜನೆಯನ್ನು ಕೂಡಲೇ ಜಾರಿ ಮಾಡುವಂತೆ ವಾರ್ತಾ ಇಲಾಖೆ ಮುಂದಾಗಬೇಕು ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದ್ದಾರೆ. ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ವ್ಯವಸ್ಥೆಯನ್ನು ಸರ್ಕಾರ ತಿಳಿಸಿದ್ದು, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು CM ಬಜೆಟ್ ಗೆ ಅಭಿನಂದನೆ ತಿಳಿಸಿದ್ದಾರೆ.
ಈ ಮೂಲಕ ಈ ವಿಚಾರ ಎಲ್ಲ ಪತ್ರಕರ್ತರಿಗೂ ಖುಷಿ ನೀಡಿದೆ. ದೂರದ ಊರಿಗೆ ವರದಿಗಾಗಿ ಪ್ರಯಾಣ ಬೆಳೆಸುವ ಪತ್ರ ಕರ್ತರಿಗೆ ಸಾಕಷ್ಟು ನೆರವಾಗಲಿದೆ ಎಂದು ಹೇಳಿದರು.
ಇತರೆ ವಿಷಯಗಳು:
ಬಜೆಟ್‌ನಲ್ಲಿ ‘ಅನ್ನ ಸುವಿಧಾ’ ಯೋಜನೆ ಘೋಷಣೆ! ನಾಗರಿಕರ ಮನೆ ಬಾಗಿಲಿಗೆ ಪಡಿತರ
27 ಲಕ್ಷ ರೈತರ ಪ್ರತಿ ಎಕರೆಗೆ ₹18,000!! ಹೊಸ ಬಿತ್ತನೆಗೆ ಸರ್ಕಾರದ ನೆರವು