rtgh

2025-26: ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ರ್ಯಾಕ್ಟರ್, ಹನಿ ನೀರಾವರಿ ಸೇರಿದಂತೆ ವಿವಿಧ ಉಪಕರಣಗಳಿಗೆ ಸಹಾಯಧನ – ಅರ್ಜಿ ಆಹ್ವಾನ!


Spread the love

mini tractor drip irrigation subsidy

2025-26ನೇ ಸಾಲಿನ ತೋಟಗಾರಿಕೆ ವರ್ಷದಲ್ಲಿ, ಕರ್ನಾಟಕ ತೋಟಗಾರಿಕೆ ಇಲಾಖೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY – Drip Irrigation) ಅಡಿಯಲ್ಲಿ ಮಿನಿ ಟ್ರ್ಯಾಕ್ಟರ್ ಸೇರಿದಂತೆ ಹಲವಾರು ಘಟಕಗಳಿಗೆ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

karnataka mini tractor drip irrigation subsidy 2025
karnataka mini tractor drip irrigation subsidy 2025

ತೋಟಗಾರಿಕೆ ಬೆಳೆಗಳು ಬೆಳೆದಿರುವ ರೈತರು ಮತ್ತು ಹೊಸದಾಗಿ ತೋಟಗಾರಿಕೆ ಕೃಷಿಗೆ ಪ್ರಾರಂಭಿಸಬಯಸುವವರು ಈ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.


ಯೋಜನೆಯ ಅಡಿಯಲ್ಲಿ ಸಬ್ಸಿಡಿ ದೊರೆಯುವ ಪ್ರಮುಖ ಘಟಕಗಳು:

  1. ಹಣ್ಣು, ತರಕಾರಿಗಳ ಪ್ರದೇಶ ವಿಸ್ತರಣೆ
  2. ಹೂವು ಬೆಳೆ ವಿಸ್ತರಣೆ (ಕತ್ತರಿಸಿದ ಹೂ, ಗಡ್ಡೆ ಹೂ, ಬಿಡಿ ಹೂ)
  3. ವೈಯಕ್ತಿಕ ಕೃಷಿಹೊಂಡ (Farm Pond)
  4. ಮಿನಿ ಟ್ರ್ಯಾಕ್ಟರ್ / ಸಣ್ಣ ಟ್ರ್ಯಾಕ್ಟರ್
  5. ಪಾಲಿಹೌಸ್ / ಶೇಡ್ ನೆಟ್
  6. ಈರುಳ್ಳಿ ಶೇಖರಣಾ ಘಟಕ
  7. ಎರೆಹುಳು ಘಟಕ
  8. ಜೇನುಪೆಟ್ಟಿಗೆ ಘಟಕ
  9. ಪ್ಲಾಸ್ಟಿಕ್ ಮಲ್ಚಿಂಗ್
  10. ಮಾವು ಪುನಶ್ಚೇತನ
  11. ಪವರ್ ಟಿಲ್ಲರ್
  12. ತಳ್ಳುವ ಗಾಡಿ

ಹನಿ ನೀರಾವರಿ ಯೋಜನೆಗೆ ಸಹಾಯಧನ:

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ Drip Irrigation System ಸ್ಥಾಪಿಸಲು ಶೇ. 50% ರಿಂದ 90% ವರೆಗೆ ಸಬ್ಸಿಡಿ ಲಭಿಸುತ್ತದೆ.


ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
  • ತಮ್ಮ ಹೆಸರಿನಲ್ಲಿ ಸ್ವಂತ ಜಮೀನು ಇರಬೇಕು.
  • ಸಣ್ಣ ಅಥವಾ ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರಾಗಿರಬೇಕು.
  • ಜಮೀನಿಗೆ ನೀರಾವರಿ ಮೂಲವಿರುವುದಾಗಿ ಪ್ರಮಾಣಪತ್ರ ನೀಡಬೇಕು.

ಅರ್ಜಿ ಸಲ್ಲಿಸಬೇಕಾದ ಜಿಲ್ಲೆಗಳು

ಪ್ರಸ್ತುತ ಈ ಯೋಜನೆಗಳು ರಾಜ್ಯದ ಉತ್ತರ ಕನ್ನಡ ಹಾಗೂ ಹುಬ್ಬಳ್ಳಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದು, ಆಯಾ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಉಳಿದ ಜಿಲ್ಲೆಗಳಿಗೂ ಹಂತ ಹಂತವಾಗಿ ಜಾರಿಗೊಳಿಸಲಾಗುವುದು.


ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್ ಪ್ರತಿಗೆ
  • ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
  • ಅರ್ಜಿದಾರರ ಪಾಸ್ಪೋರ್ಟ್ ಫೋಟೋ
  • ಜಮೀನಿನ ಉತಾರ / ಪಹಣಿ / RTC
  • ರೇಷನ್ ಕಾರ್ಡ್
  • ನೀರಾವರಿ ಮೂಲದ ಪ್ರಮಾಣ ಪತ್ರ (ಕೊಳವೆ ಬಾವಿ/ಹೊಂಡ)
  • ಗಣಕೀಕೃತ ಬೆಳೆ ದೃಢೀಕರಣ ಪತ್ರ

ಸಹಾಯಧನ ಶೇಕಡಾವಾರು ವಿವರ:

ರೈತರ ವರ್ಗಸಹಾಯಧನ ಶೇಕಡಾ (%)
ಸಾಮಾನ್ಯ ರೈತರುಶೇ. 50% – 75%
SC/ST ರೈತರುಶೇ. 85% – 90%
ಮಹಿಳೆ, ಅಂಗವಿಕಲ, ಅಲ್ಪಸಂಖ್ಯಾತರುವಿಶೇಷ ಆದ್ಯತೆ ಮತ್ತು ಮೀಸಲಾತಿ

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಆಸಕ್ತ ರೈತರು ತಮ್ಮ ತಾಲೂಕಿನ ಹಿರಿಯ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.


ಮೀಸಲಾತಿ ಶ್ರೇಣಿಗೆ ಆದ್ಯತೆ:

  • ಪರಿಶಿಷ್ಟ ಜಾತಿ – 17%
  • ಪರಿಶಿಷ್ಟ ಪಂಗಡ – 7%
  • ಮಹಿಳೆಯರು – 33%
  • ಅಲ್ಪಸಂಖ್ಯಾತರು – 5%
  • ಅಂಗವಿಕಲರು – 3%

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್‌ಸೈಟ್: horticulture.karnataka.gov.in
  • ಸಹಾಯವಾಣಿ ಸಂಖ್ಯೆ: 1902

ಇದನ್ನೂ ಓದಿ:


Tags: #ತೋಟಗಾರಿಕೆ_ಯೋಜನೆ #MiniTractorSubsidy #DripIrrigationKarnataka #NHMScheme #PMKSY #FarmersSubsidy #KarnatakaHorticulture #RaitaMitra

Sharath Kumar M

Spread the love

Leave a Reply

Your email address will not be published. Required fields are marked *