rtgh

ಬಿಗ್ ಬಾಸ್ ಶೋಗೆ ವಿದಾಯ ಹೇಳಿದ ಕಿಚ್ಚ ಸುದೀಪ್! ಅಭಿಮಾನಿಗಳಿಗೆ ದೊಡ್ಡ ಶಾಕ್


ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಶೋಗೆ ವಿದಾಯ ಘೋಷಿಸಿರುವುದರಿಂದ, ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಸುದೀಪ್ ರವರು 11 ಸೀಸನ್ ಗಳ ಕಾಲ ನಿರೂಪಕರಾಗಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ. ಆದರೆ, ಈಗ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬಿಗ್ ಬಾಸ್ ಗೆ ವಿದಾಯ ಹೇಳುವ ಬಗ್ಗೆ ಅವರು ಪೋಸ್ಟ್ ಮಾಡಿದ್ದು, ಇದು ಅವರ ಕೊನೆಯ ನಿರೂಪಣೆಯಾಗಿ ಇತಿಹಾಸದಲ್ಲಿ ಉಳಿಯಲಿದೆ.

Kiccha Sudeep said goodbye to Bigg Boss
Kiccha Sudeep said goodbye to Bigg Boss

ಅಭಿಮಾನಿಗಳ ನಿರೀಕ್ಷೆಗೆ ಮುರಿದ ಉತ್ತರ ಬಿಗ್ ಬಾಸ್ ಶೋನಲ್ಲಿ ನಿರೂಪಕರಾಗಿ ಕನ್ನಡದ ಪ್ರೇಕ್ಷಕರ ಮನಗೆದ್ದ ಕಿಚ್ಚ ಸುದೀಪ್, 11ನೇ ಸೀಸನ್ ಬಳಿಕ ಶೋಗೆ ವಿದಾಯ ನೀಡುವುದಾಗಿ ಘೋಷಿಸಿದರು. “ಇದು ನನ್ನ ನಿರೂಪಣೆಯ ಕೊನೆಯ ಆವೃತ್ತಿ,” ಎಂದು ಅವರು ತಿಳಿಸಿರುವುದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದು, ಬಿಗ್ ಬಾಸ್ ಶೋ ಪ್ರೇಮಿಗಳಿಗೆ ನಿರಾಸೆ ಉಂಟಾಗಿದೆ. ಸುದೀಪ್ ರವರ ಈ ನಿರ್ಧಾರವನ್ನು ಅವರ ಅಭಿಮಾನಿಗಳು ಹಾಗೂ ಕಲರ್ಸ್ ವಾಹಿನಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್ ನಿರ್ಣಯದ ಹಿಂದೆ ಇರಬಹುದಾದ ಕಾರಣಗಳು ಬಿಗ್ ಬಾಸ್ ಶೋಗೆ ವಿದಾಯ ಹೇಳಲು ಸುದೀಪ್ ರವರು ಆಧಿಕೃತ ಕಾರಣವನ್ನು ಬಹಿರಂಗಗೊಳಿಸದಿದ್ದರೂ, ಬಲ್ಲ ಮೂಲಗಳ ಪ್ರಕಾರ, ಅವರು ಚಲನಚಿತ್ರಗಳಿಗೆ ಹೆಚ್ಚಿನ ಸಮಯವನ್ನು ನೀಡಲು ಬಿಗ್ ಬಾಸ್ ಶೋ ನಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸುದೀಪ್ ರವರು ತಮ್ಮ ಚಿತ್ರರಂಗದ ಕರಿಯರ್ ಗೆ ಹೆಚ್ಚು ಗಮನಕೊಡಲು ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ.

ಕಿಚ್ಚ ಸುದೀಪ್ ಬಿಗ್ ಬಾಸ್ ಸಂಭಾವನೆ ಎಷ್ಟು? ಮಾಧ್ಯಮಗಳ ವರದಿ ಪ್ರಕಾರ, ಸುದೀಪ್ ರವರು ಬಿಗ್ ಬಾಸ್ ಶೋನ ಒಂದು ಎಪಿಸೋಡ್ ಗೆ 12 ಲಕ್ಷ ಸಂಭಾವನೆ ಪಡೆಯುತ್ತಿದ್ದು, ಒಟ್ಟು ಒಂದು ಸೀಸನ್ ಗೆ 10-12 ಕೋಟಿ ಗಳಿಸುತ್ತಾರೆ. ಬಿಗ್ ಬಾಸ್ ನ ಮೊತ್ತಮೊದಲ 5 ಆವೃತ್ತಿಗಳಲ್ಲಿ ಸುದೀಪ್ ಒಟ್ಟು 20 ಕೋಟಿ ರೂ. ಗಳಿಸಿದ್ದಾರಂತೆ.

ನಟ ಸುದೀಪ್ ರವರ ಆಸ್ತಿ ಮೌಲ್ಯ ಅಭಿವೃದ್ಧಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಸುದೀಪ್, ಜಾರಿಟಬಲ್ ಟ್ರಸ್ಟ್ ಮೂಲಕ ಬಡಜನರಿಗೆ ಸಹಾಯ ಮಾಡುತ್ತಿದ್ದಾರೆ. ನಟನಾಗಿ ಯಶಸ್ಸು ಗಳಿಸಿರುವ ಅವರು, ತಮ್ಮ ಆಸ್ತಿ ಮೌಲ್ಯವನ್ನು 125 ಕೋಟಿ ರೂ.ಗಳಷ್ಟಾಗಿದ್ದು, ಐಷಾರಾಮಿ ಕಾರುಗಳು ಮತ್ತು ವಸ್ತುಗಳನ್ನು ಹೊಂದಿದ್ದಾರೆ.

ಸುದೀಪ್ ರವರ ಐಷಾರಾಮಿ ಸಂಗ್ರಹ:

  • 3 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ
  • 1 ಕೋಟಿ ಬಿಎಂಡಬ್ಲ್ಯೂ ಎಂ 3
  • 75 ಲಕ್ಷದ ಜೀಪ್ ಕಾಂಪಾಸ್
  • 1.5 ಕೋಟಿ ಮೌಲ್ಯದ ರಿಚರ್ಡ್ ಮಿಲ್ ವಾಚ್
  • 90 ಲಕ್ಷ ಮೌಲ್ಯದ ಹಮ್ಮರ್ ಎಚ್ 3

ನಟ ಕಿಚ್ಚ ಸುದೀಪ್ ಮತ್ತು ಅವರ ಆದಾಯದ ಮೂಲಗಳು ಸುದೀಪ್ ರವರು ನಟನೆಯ ಹೊರತಾಗಿಯೂ, ಶೇರು ಮಾರುಕಟ್ಟೆ, ರಿಯಲ್ ಎಸ್ಟೇಟ್, ಮತ್ತು ಚಿತ್ರ ನಿರ್ಮಾಣಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಒಂದು ಸಿನಿಮಾಕ್ಕೆ 10-25 ಕೋಟಿ ಸಂಭಾವನೆ ಪಡೆಯುತ್ತಿದ್ದು, ಜಾಹೀರಾತುಗಳು ಮತ್ತು ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಗಳಿಂದ ವರ್ಷಕ್ಕೆ 5 ಕೋಟಿ ರೂ. ಆದಾಯ ಗಳಿಸುತ್ತಾರೆ.

ಸುದೀಪ್ ಬಿಗ್ ಬಾಸ್ ಶೋಗೆ ವಿದಾಯ: ಹೊಸ ಹಾದಿಯಲ್ಲಿಯೆ? ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಶೋಗೆ ವಿದಾಯ ಹೇಳಿರುವುದರಿಂದ, ಅವರ ಮುಂದಿನ ಕರಿಯರ್ ಮೇಲೆ ಎಲ್ಲರ ಕಣ್ಣುಗಳಿವೆ. ಬಿಗ್ ಬಾಸ್ ಪ್ರೇಕ್ಷಕರಿಗೆ ನಿರಾಶೆಯಾಗಿದ್ದರೂ, ಸುದೀಪ್ ಅವರ ಹೊಸ ಯೋಜನೆಗಳು ಮತ್ತು ಸಿನಿಮಾಗಳು ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ.


Leave a Reply

Your email address will not be published. Required fields are marked *