ಆಹಾರ ಎಂಬ ಪದವನ್ನು ಹೇಳುತ್ತಿದ್ದಂತೆ ಮನಸ್ಸನ್ನು ಡ್ಯಾನ್ಸ್ ಮಾಡುತ್ತದೆ, ಹೆಚ್ಚಿನ ಭಾರತೀಯರು ತಮ್ಮ ಪ್ರೊಫೈಲ್ನಲ್ಲಿ ಫೂಡಿ ಎಂಬ ಪದವನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಭಾರತೀಯ ಪರಂಪರೆಯಲ್ಲಿ ಆಹಾರ ಸಂಸ್ಕೃತಿ ದೊಡ್ಡ ಭಾಗವಾಗಿದೆ. ಭಾರತದಲ್ಲಿ, ತಿನ್ನುವ ವಿವಿಧ ಆಹಾರವು ತನ್ನದೇ ಆದ ರೀತಿಯಲ್ಲಿ ಅನನ್ಯ ಮತ್ತು ರುಚಿಕರವಾಗಿರುತ್ತದೆ.
ಭಾರತ ತನ್ನಲ್ಲಿರುವ ಸ್ವಾದಿಷ್ಟಕರ ಆಹಾರಗಳಿಗೇ ಹೆಸರುವಾಸಿಯಾಗಿದೆ. ಸಮೋಸಾ, ಕಬಾಬ್ ಸೇರಿದಂತೆ ಹಲವಾರು ಟೇಸ್ಟೀ ಆಹಾರಗಳು ಇಲ್ಲಿವೆ. ಆದರೆ ಭಾರತೀಯರು ಬಾಯಿ ಚಪ್ಪರಿಸಿ ತಿನ್ನೋ ಕೆಲವೊಂದು ಫುಡ್ ವಿದೇಶದಲ್ಲಿ ಫ್ಯಾನ್ ಆಗಿದೆ ನಿಮ್ಗೆ ಗೊತ್ತಿದ್ಯಾ?
food products banned in other countries but not in india
ಆದರೆ ನಾವು ನಿಯಮಿತವಾಗಿ ತಿನ್ನುವ ನಮ್ಮ ದೇಶದ ಅನೇಕ ಜನಪ್ರಿಯ ಭಕ್ಷ್ಯಗಳಿಗೆ ವಿದೇಶದಲ್ಲಿ ನಿಷೇಧಿವಿದೆ. ಅವು ಯಾವುವು ಎಂದು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.
ಭಾರತೀಯ ಆಹಾರ ಬ್ಯಾನ್
ಸಮೋಸ
ಭಾರತದ ಪ್ರಸಿದ್ಧ ಸ್ನ್ಯಾಕ್ಸ್ ಆಗಿರುವ ಸಮೋಸಾ ದೇಶದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ. ಸಂಜೆಯ ಸಮಯದಲ್ಲಿ ಹಲವರು ಬಿಸಿ ಬಿಸಿ ಸಮೋಸ ತಿನ್ನಲು ಬಯಸುತ್ತಾರೆ. ಆದರೆ ಸೊಮಾಲಿಯಾ ಈ ಖಾದ್ಯವನ್ನು 2011 ರಿಂದ ನಿಷೇಧಿಸಿದೆ. ಧಾರ್ಮಿಕ ಕಾರಣದಿಂದ ಸಮೋಸವನ್ನು ನಿಷೇಧಿಸಿದೆ.
ತುಪ್ಪ
ತುಪ್ಪ- ನಮ್ಮ ದೇಶದಾದ್ಯಂತ ಜನರು ವಿವಿಧ ಆಹಾರದ ಜೊತೆ ತುಪ್ಪವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ತುಪ್ಪವು ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಸ್ಥೂಲಕಾಯದಂತಹ ಕಾಯಿಲೆಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದ್ದು, ಅಮೆರಿಕದಲ್ಲಿ ಇದನ್ನು ನಿಷೇಧಿಸಲಾಗಿದೆ.
ಚವನ್ ಪ್ರಾಶ್
ಚವನ್ ಪ್ರಾಶ್ – ಭಾರತದಲ್ಲಿ, ಜನರು ಶತಮಾನಗಳಿಂದ ಚವನ್‌ಪ್ರಾಶ್ ಅನ್ನು ಶೀತ ಮತ್ತು ಕೆಮ್ಮಿನ ಸಮಯದಲ್ಲಿ ತಿನ್ನುತ್ತಾರೆ, ಅನೇಕರು ಇದನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಕೆನಡಾದಲ್ಲಿ 2005 ರಲ್ಲಿ ಹೆಚ್ಚಿನ ಪ್ರಮಾಣದ ಸೀಸ ಮತ್ತು ಪಾದರಸದ ಕಾರಣದಿಂದ ಇದನ್ನು ನಿಷೇಧಿಸಲಾಗಿದೆ.
ಕೆಚಪ್
ಕೆಚಪ್ – ಪಕೋಡಗಳಿಂದ ಸ್ಯಾಂಡ್‌ವಿಚ್‌ಗಳವರೆಗೆ, ಕೆಚಪ್ ಇಲ್ಲದೆ ಯಾವುದೇ ತಿಂಡಿ ಅಪೂರ್ಣವಾಗಿರುತ್ತದೆ. ಆದರೆ ಇದು ಫ್ರಾನ್ಸ್‌ನಲ್ಲಿ ಇದನ್ನ ಬಳಸುವಂತಿಲ್ಲ. ಹದಿಹರೆಯದವರು ಅತಿಯಾಗಿ ಸೇವಿಸುವ ಪ್ರವೃತ್ತಿಯಿಂದಾಗಿ ಫ್ರೆಂಚ್ ಸರ್ಕಾರವು ಕೆಚಪ್ ಅನ್ನು ನಿಷೇಧಿಸಿದೆ.
ಚೂಯಿಂಗ್ ಗಮ್
ಚೂಯಿಂಗ್ ಗಮ್-ಸಿಂಗಪೋರಿಯನ್ನರು ತಮ್ಮ ದೇಶವನ್ನು ತುಂಬಾ ಸ್ವಚ್ಛವಾಗಿಡಲು ಬಯಸುತ್ತಾರೆ, ಅದಕ್ಕಾಗಿ ಕಟ್ಟುನಿಟ್ಟಿನ ನಿಯಮವನ್ನು ಅನುಸರಿಸುತ್ತಾರೆ. ಅದಕ್ಕಾಗಿಯೇ ದೇಶವನ್ನು ಸ್ವಚ್ಛವಾಗಿಡಲು 1992 ರಲ್ಲಿ ಎಲ್ಲಾ ರೀತಿಯ ಚೂಯಿಂಗ್ ಗಮ್ ಅನ್ನು ನಿಷೇಧಿಸಲಾಯಿತು.
ಗಸಗಸೆ
ಗಸಗಸೆ: ಇದು ಭಾರತದಲ್ಲಿ ವಿಶೇಷವಾಗಿ ಬಂಗಾಳದಲ್ಲಿ ಅತ್ಯಂತ ವಿಲಕ್ಷಣ ಮಸಾಲೆಗಳಲ್ಲಿ ಒಂದಾಗಿದೆ. ಆದರೆ ಬೀಜದ ಮಾರ್ಫಿನ್ ಅಂಶದಿಂದಾಗಿ ಸಿಂಗಾಪುರ ಮತ್ತು ತೈವಾನ್‌ನಲ್ಲಿ ಬೀಜವನ್ನು ನಿಷೇಧಿಸಲಾಗಿದೆ. ಸಿಂಗಾಪುರದ ಸೆಂಟ್ರಲ್ ನಾರ್ಕೋಟಿಕ್ಸ್ ಬ್ಯೂರೋ ಇದನ್ನು ‘ನಿಷೇಧಿತ ಸರಕು’ ಎಂದು ಪರಿಗಣಿಸಿದೆ. ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿಯೂ ಇದನ್ನು ನಿಷೇಧಿಸಲಾಗಿದೆ. ರಷ್ಯಾದಲ್ಲಿ, ಗಸಗಸೆ ಕೃಷಿಯು ಕೂಡ ಕಾನೂನುಬಾಹಿರವಾಗಿದೆ, ಅದನ್ನು ಮಾರಾಟ ಕೂಡ ಮಾಡುವಂತಿಲ್ಲ.
ಕಬಾಬ್
ಕಬಾಬ್: ಅದು ವೆಜ್ ಆಗಿರಲಿ ಅಥವಾ ನಾನ್ ವೆಜ್ ಕಬಾಬ್ ಆಗಿರಲಿ, ಅದು ನಮ್ಮ ಭಾರತೀಯ ಜನರ ನೆಚ್ಚಿನ ಖಾದ್ಯವಾಗಿರುತ್ತದೆ. ಆದರೆ ಈ ಸವಿಯಾದ ಪದಾರ್ಥವನ್ನು ವೆನಿಸ್‌ನಲ್ಲಿ ನಿಷೇಧಿಸಲಾಗಿದೆ. ಈ ನಗರವು 2017 ರಲ್ಲಿ ‘ನಗರದ ಅಲಂಕಾರ ಮತ್ತು ಸಂಪ್ರದಾಯಗಳನ್ನು ಕಾಪಾಡಲು’ ಕಬಾಬ್ ಅಂಗಡಿಗಳಿಗೆ ನಿಷೇಧ ಏರಿದೆ.