ಇತ್ತೀಚಿನ ವರ್ಷಗಳಲ್ಲಿ, ಕೃಷಿ ಉದ್ಯಮವು ರೂಪಾಂತರಕ್ಕೆ ಒಳಗಾಗುತ್ತಿದೆ, ದಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಸಂಕುಚಿತ ನೈಸರ್ಗಿಕ ಅನಿಲ (CNG) ಮೊನೊ-ಇಂಧನ ಟ್ರಾಕ್ಟರುಗಳ ಪರಿಚಯವು ಅಂತಹ ಒಂದು ಅದ್ಭುತ ಬೆಳವಣಿಗೆಯಾಗಿದೆ, ಇದು ಕೃಷಿಗಾಗಿ ಹಸಿರು ಮತ್ತು ಹೆಚ್ಚು ವೆಚ್ಚ-ಪರಿಣಾಮಕಾರಿ ಭವಿಷ್ಯದತ್ತ ಗಮನಾರ್ಹ ದಾಪುಗಾಲು ಹಾಕುತ್ತದೆ.
CNG Mono Fuel Tractor: ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ವಾಹನಗಳು ಲಗ್ಗೆ ಇಡುತ್ತಿವೆ. ವಿವಿಧ ಮಾದರಿಯ ಕಾರ್ ಗಳು, ಬೈಕ್, ಸ್ಕೂಟರ್, ಬೈಸಿಕಲ್ ಸೇರಿದಂತೆ ಎಲ್ಲ ಮಾದರಿಯ ವಾಹನಗಳು ಕೂಡ ಪ್ರಸ್ತುತ ಎಲೆಕ್ಟ್ರಿಕ್ ರೂಪಾಂತರದಲ್ಲಿ ಲಭ್ಯವಾಗುತ್ತಿದೆ.
ಸದ್ಯ ಎಲ್ಲ ರೀತಿಯ ವಾಹನಗಳ ಜೊತೆಗೆ ರೈತ ಸ್ನೇಹಿಯಾದ Tractor ಕೂಡ ಮಾರುಕಟ್ಟೆಯಲ್ಲಿ ಪರಿಚಯವಾಗುತ್ತಿದೆ. ಸದ್ಯ Mahindra Tractors ತನ್ನ ಜನಪ್ರಿಯ ಮಾದರಿಯನ್ನು CNG ರೂಪಾಂತರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
CNG Mono Fuel Tractor
ಸದ್ಯ ಮಾರುಕಟ್ಟೆಯಲ್ಲಿ Mahindra Tractors ತನ್ನ ಮೊದಲ CNG Mono Fuel Tractor ಅನ್ನು ಅನಾವರಣಗೊಳಿಸಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ಕಂಪನಿಯು ತನ್ನ ಮೊದಲ CNG Tractor ಮಾದರಿಯನ್ನು ಪರಿಚಯಿಸಿದೆ. ಹೊಸ ಮಹೀಂದ್ರ CNG ಟ್ರಾಕ್ಟರ್ ಡೀಸೆಲ್ ಚಾಲಿತ ಟ್ರಾಕ್ಟರ್ ಗಳಿಗೆ ಸಮಾನವಾಗಿ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಕೃಷಿಗಾಗಿ ಪರ್ಯಾಯ ಎಂಜಿನ್ ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ.
ಡೀಸೆಲ್ ಟ್ರಾಕ್ಟರ್ ಗಳಿಗೆ ಹೋಲಿಸಿದರೆ ಶೇ. 70 ರಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. CNG ತಂತ್ರಜಾನದೊಂದಿಗೆ ರೂಪುಗೊಂಡಿರುವ ಟ್ರಾಕ್ಟರ್ ಈಗಿರುವ ಡೀಸೆಲ್ ಟ್ರಾಕರ್ ಗಾಲ ಸಾಮರ್ಥ್ಯಗಳಿಗೆ ಹೊಂದಿಕೆಯಾಗುವ ವಿವಿಧ ಕೃಷಿ ಮತ್ತು ಸಾಗಣೆ ಅನ್ವಯಿಕೆಗಳನ್ನು ಹೊಂದಿದ್ದು, ಪ್ರತಿಯೊಂದು 45 ಲೀಟರ್ ಸಾಮರ್ಥ್ಯ ಅಥವಾ 24kg ಗ್ಯಾಸ್ ಆನ್ ಬೋರ್ಡ್, 200 ಬಾರ್ ಒತ್ತಡದಲ್ಲಿ ತುಂಬಿದೆ.
CNG Tractor ವಿಶೇಷತೆಗಳೇನು..?
ಡೀಸೆಲ್ ಟ್ರಾಕ್ಟರ್ ಗಳಿಗೆ ಹೋಲಿಸಿದರೆ ಗಂಟೆಗೆ 100 ರೂ. ಗಳನ್ನೂ CNG Mono Fuel Tractor ಬಳಸುವುದರಿಂದ ಉಳಿತಾಯ ಮಾಡಬಹುದು. ಶೀಘ್ರದಲ್ಲೇ CNG Tractor ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಈ ಟ್ರ್ಯಾಕ್ಟರ್ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.
ನೂತನ ಮಾದರಿಯ CNG Tractor ಮಾರುಕಟ್ಟೆಯಲ್ಲಿ ಇನ್ನಿತರ ಮಾದರಿಯ ಟ್ರ್ಯಾಕ್ಟರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಇನ್ನು ಕಂಪನಿಯು ತನ್ನ CNG ಮಾದರಿಯ ಟ್ರ್ಯಾಕ್ಟರ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಕಂಪನಿಯು ಅಧಿಕೃತ ಮಾಹಿತಿ ಬಹಿರಂಗಪಡಿಸುವವರೆಗೂ ಕಾದು ನೋಡಬೇಕಿದೆ. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ CNG ಟ್ರ್ಯಾಕ್ಟರ್ ಹಿಂದಿನ ಮಾದರಿಯ ಟ್ರ್ಯಾಕ್ಟರ್ ಗಳಿಗಿಂತ ಹೆಚ್ಚಿನ ಮೈಲೇಜ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ ಮತ್ತು ಇದರ ಬೆಲೆ ಕೂಡ ಕಡಿಮೆ ಎಂದು ಹೇಳಲಾಗುತ್ತಿದೆ.