ಇಂದಿನ ಡಿಜಿಟಲ್ ಅಂತರ್ಸಂಪರ್ಕಿತ ಜಗತ್ತಿನಲ್ಲಿ, ನಮ್ಮ ವೈಯಕ್ತಿಕ ಡೇಟಾವು ಅಮೂಲ್ಯವಾದ ವಸ್ತುವಾಗಿದೆ. ನಮ್ಮ ವೈಯಕ್ತಿಕ ಡೇಟಾ ಸೋರಿಕೆಯಾಗುವ ಭಯವು ವಿಶ್ವಾದ್ಯಂತ ವ್ಯಕ್ತಿಗಳು, ನಿಗಮಗಳು ಮತ್ತು ಸರ್ಕಾರಗಳಿಂದ ಹಂಚಿಕೊಂಡ ಭಾವನೆಯಾಗಿದೆ. ಈ ಭಯವು ಸಾಮಾನ್ಯವಾಗಿ ಕಡಿಮೆ ಅಂದಾಜು ಮಾಡಲ್ಪಟ್ಟಿದೆ, ಇದು ಚಿನ್ನಕ್ಕಿಂತ ಹೆಚ್ಚು ಅಮೂಲ್ಯವಾಗಿದೆ ಏಕೆಂದರೆ ಇದು ಡೇಟಾ ಗೌಪ್ಯತೆಯ ನಿರ್ಣಾಯಕ ಪ್ರಾಮುಖ್ಯತೆ ಮತ್ತು ದೃಢವಾದ ಸುರಕ್ಷತೆಗಳ ಅಗತ್ಯವನ್ನು ಒತ್ತಿಹೇಳುತ್ತದೆ.
ವೈಯಕ್ತಿಕ ಡೇಟಾ ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಸಂಗತಿ. ನಮ್ಮ ವೈಯಕ್ತಿಕ ಮಾಹಿತಿ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಪೆಟ್ರೋಲ್-ಡೀಸೆಲ್ಗಿಂತಲೂ ದುಬಾರಿಯಾಗಲಿದೆ. ಏಕೆಂದರೆ ಇದರಲ್ಲಿ ಬ್ಯಾಂಕಿಂಗ್, ವೈದ್ಯಕೀಯ ಮತ್ತು ಸಾಮಾಜಿಕ ಮಾಹಿತಿ ಸೇರಿದಂತೆ ಎಲ್ಲಾ ಡೇಟಾಗಳಿರುತ್ತವೆ.
ಈ ಮಾಹಿತಿಯನ್ನು ಕದ್ದು ಸೈಬರ್ ವಂಚಕರು ಮೋಸ ಮಾಡಬಹುದು. ದೊಡ್ಡ ದೊಡ್ಡ ಕಂಪನಿಗಳು ನಮಗೆ ಯಾವ ಸಮಯದಲ್ಲಿ ಯಾವ ಉತ್ಪನ್ನ ಬೇಕು ಎಂಬುದನ್ನು ಪರ್ಸನಲ್ ಡೇಟಾ ಮೂಲಕ ತಿಳಿಯಬಹುದು. ನಂತರ ತಮ್ಮ ಉತ್ಪನ್ನವನ್ನು ಟಾರ್ಗೆಟ್ ಮಾರ್ಕೆಟಿಂಗ್ ಮೂಲಕ ಮಾರಾಟ ಮಾಡಬಹುದು.
ಡೇಟಾ ಕಳವು ಹೊಸದೇನಲ್ಲ. ಈ ಡೇಟಾದ ಮೂಲಕ ಸೈಬರ್ ಅಪರಾಧಿಗಳು ಸಹ ಜನರಿಗೆ ಮೋಸ ಮಾಡುತ್ತಲೇ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ವೈಯಕ್ತಿಕ ಡೇಟಾ ಸುರಕ್ಷಿತವಾಗಿದ್ದರೆ ಸೈಬರ್ ವಂಚನೆಯಿಂದ ಪಾರಾಗಬಹುದು. ಟಾರ್ಗೆಟ್ ಮಾರ್ಕೆಟಿಂಗ್ನ ತಲೆನೋವು ಕೂಡ ಇರುವುದಿಲ್ಲ.
ವೀಕ್ ಪಾಸ್ವರ್ಡ್ – ಭದ್ರತಾ ತಜ್ಞರ ಪ್ರಕಾರ ಹೆಚ್ಚಿನ ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳು ಅಥವಾ ಬ್ಯಾಂಕಿಂಗ್ಗಾಗಿ ದುರ್ಬಲ ಪಾಸ್ವರ್ಡ್ಗಳನ್ನು ಬಳಸುತ್ತಾರೆ. ಜನರು ಸಾಮಾನ್ಯವಾಗಿ ತಮ್ಮ ಜನ್ಮ ದಿನಾಂಕವನ್ನೇ ಪಾಸ್ವರ್ಡ್ ಆಗಿ ಬಳಸುತ್ತಾರೆ. ಅದನ್ನು ವಂಚಕರು ಸುಲಭವಾಗಿ ಪತ್ತೆ ಮಾಡಬಹುದು.
ದುರ್ಬಲ ಪಾಸ್ವರ್ಡ್ಗಳಿಂದಾಗಿ ಡೇಟಾ ಉಲ್ಲಂಘನೆಯ ಹೆಚ್ಚಿನ ಪ್ರಕರಣಗಳು ಸಂಭವಿಸುತ್ತವೆ. ಹಾಗಾಗಿ ಬಲವಾದ ಪಾಸ್ವರ್ಡ್ ಅನ್ನು ರಚಿಸಬೇಕು. ಪಾಸ್ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದರ ಹೊರತಾಗಿ ಡಿವೈಸ್ಗಳು, Google ಶೀಟ್ ಮತ್ತು ಎಕ್ಸೆಲ್ನಲ್ಲಿ ಪಾಸ್ವರ್ಡ್ ಸೇವ್ ಮಾಡಿಟ್ಟುಕೊಳ್ಳಬಾರದು.
ಹಳೆಯ ಸಾಫ್ಟ್ವೇರ್ ಬಳಸಬೇಡಿ – ಹಳೆಯ ಸಾಫ್ಟ್ವೇರ್ ಸಾಮಾನ್ಯವಾಗಿ ಇತ್ತೀಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ. ಈ ಕಾರಣಕ್ಕಾಗಿ ಭದ್ರತೆಯನ್ನು ಉಲ್ಲಂಘಿಸುವುದು ಸುಲಭ. ಹೊಸ ಸಾಫ್ಟ್ವೇರ್ ಬಳಸದ ಕಾರಣ ನಾವು ವಂಚನೆಗೊಳಗಾಗುತ್ತೇವೆ. ಹಾಗಾಗಿ ಡಿವೈಸ್ಗಳನ್ನು ತಪ್ಪದೇ ಅಪ್ಡೇಟ್ ಮಾಡಿಕೊಳ್ಳಿ. ಪ್ರತಿ ಅಪ್ಡೇಟ್ನಲ್ಲೂ ಇತ್ತೀಚಿನ ಭದ್ರತಾ ವೈಶಿಷ್ಟ್ಯಗಳನ್ನು ಪಡೆಯಬಹುದು.
ಫಿಶಿಂಗ್ ಇಮೇಲ್ – ಇತ್ತೀಚಿನ ದಿನಗಳಲ್ಲಿ ವಂಚಕರು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ ಅವರು ಹೆಚ್ಚಾಗಿ ಫಿಶಿಂಗ್ ಇಮೇಲ್ಗಳನ್ನು ಆಶ್ರಯಿಸುತ್ತಾರೆ. ಇಮೇಲ್ ಸ್ವೀಕರಿಸಿದಾಗ ಜನರು ಸಾಮಾನ್ಯವಾಗಿ ಫಿಶಿಂಗ್ ಇಮೇಲ್ ಅನ್ನು ಯೋಚಿಸದೆ ತೆರೆಯುತ್ತಾರೆ. ಮೇಲ್ನಲ್ಲಿ ಕಳುಹಿಸಿದ ransomware ಫೈಲ್ ಅನ್ನು ಡೌನ್ಲೋಡ್ ಮಾಡುತ್ತಾರೆ.
ಫಿಶಿಂಗ್ ಇಮೇಲ್ಗಳನ್ನು ತೆರೆಯುವುದು ನಾವು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು. ಇದು ಸ್ಕ್ಯಾಮರ್ಗಳಿಗೆ ವೈಯಕ್ತಿಕ ಡೇಟಾಗೆ ಎಂಟ್ರಿ ನೀಡುತ್ತದೆ. ಹಾಗಾಗಿ ಯಾವುದೇ ಅನುಮಾನಾಸ್ಪದ ಇಮೇಲ್ ಅನ್ನು ಓಪನ್ ಮಾಡಬಾರದು. ಫೈಲ್ಗಳನ್ನು ಡೌನ್ಲೋಡ್ ಮಾಡಬಾರದು.