rtgh

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ ; ‘777 ಚಾರ್ಲಿ’ ಅತ್ಯುತ್ತಮ ಕನ್ನಡ ಚಿತ್ರ, ಯಾರಿಗೆ, ಯಾವ ಪ್ರಶಸ್ತಿ.? ಅತ್ಯುತ್ತಮ ನಟ, ನಟಿ ಸೇರಿ ಫುಲ್ ಲಿಸ್ಟ್ ಇಲ್ಲಿದೆ


ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನ ಪ್ರಕಟಿಸಿದೆ. 69ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ತೀರ್ಪುಗಾರರ ಸದಸ್ಯರು ವಾಚಿಸಿದರು. ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, 69 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೆಲುಗು ನಾಯಕರೊಬ್ಬರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.

National Film Award Announced kannada
National Film Award Announced kannada

National Film Award Announced kannada

ಅಲ್ಲದೆ, 777 ಚಾರ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನ ಪಡೆದಿದೆ.

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಆಗಸ್ಟ್ 24 ರಂದು ದೆಹಲಿಯಲ್ಲಿ ಘೋಷಿಸಲಾಯಿತು. ‘ಕಡೈಸಿ ವಿವಸಾಯಿ’ ಅತ್ಯುತ್ತಮ ತಮಿಳು ಚಿತ್ರವಾಗಿ ಆಯ್ಕೆಯಾಗಿದ್ದರೆ, ‘777 ಚಾರ್ಲಿ’ ಅತ್ಯುತ್ತಮ ಕನ್ನಡ ಚಿತ್ರವಾಗಿ ಆಯ್ಕೆಯಾಗಿದೆ. ಅತ್ಯುತ್ತಮ ತೆಲುಗು ಮತ್ತು ಅತ್ಯುತ್ತಮ ಮಲಯಾಳಂ ಚಿತ್ರಗಳಾಗಿ ‘ಉಪ್ಪೇನ’ ಮತ್ತು ‘ಹೋಮ್’ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸುಮಾರು 28 ಭಾಷೆಗಳಿಂದ 280 ಚಿತ್ರಗಳು ಸಲ್ಲಿಕೆಯಾಗಿದ್ದವು. ಡಿಸೆಂಬರ್ 31, 2021 ರ ಮೊದಲು ಪ್ರಮಾಣೀಕರಿಸಿದ ಚಲನಚಿತ್ರಗಳನ್ನು 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಪರಿಗಣಿಸಲಾಗಿದೆ.

national film awards 2023 winners list kannada

ಚಲನಚಿತ್ರ ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ ಇಂತಿದೆ.!

ಅತ್ಯುತ್ತಮ ನಟ: ಪುಷ್ಪ (ಅಲ್ಲು ಅರ್ಜುನ್)
ಅತ್ಯುತ್ತಮ ನಟಿ: ಗಂಗೂಬಾಯಿ ಕಾಠಿಯಾವಾಡಿ, ಮಿಮಿ (ಆಲಿಯಾ ಮತ್ತು ಕೃತಿ ಸೆನನ್)
ಅತ್ಯುತ್ತಮ ಸಿನಿಮಾ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)
ಅತ್ಯುತ್ತಮ ಮನೊರಂಜನಾ: ಆರ್​ಆರ್​ಆರ್
ಅತ್ಯುತ್ತಮ ನಿರ್ದೇಶಕ: ಗೋಧಾವರಿ (ಮರಾಠಿ) ನಿಖಿಲ್ ಮಹಾಜನ್
ಅತ್ಯುತ್ತಮ ಸಂಗೀತ: ಪುಷ್ಪ (ದೇಶ್ರೀಪ್ರಸಾದ್)
ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)
ಅತ್ಯುತ್ತಮ ಗಾಯಕಿ: ಇರವಿನ್ ನಿಜಾಲ್ (ಶ್ರೆಯಾ ಘೋಷಾಲ್)
ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)
ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಠಿಯಾವಾಡಿ
ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)
ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)
ಅಡಾಪೆಟ್ಸ್: ಗಂಗೂಬಾಯಿ ಕಾಠಿಯಾವಾಡಿ
ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ
ಅತ್ಯುತ್ತಮ ಪೋಷಕ ನಟ: ಮಿಮಿ (ಪಂಕಜ್ ತ್ರಿಪಾಠಿ)
ಅತ್ಯುತ್ತಮ ಪೋಷಕ ನಟಿ: ದಿ ಕಶ್ಮೀರ್ ಫೈಲ್ಸ್ (ಪಲ್ಲವಿ ಜೋಶಿ)
ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)
ತೀರ್ಪುಗಾರರ ವಿಶೇಷ ಬಹುಮಾನ: ಶೇರ್​ಷಾ
ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ್)
ಇಂದಿರಾ ಗಾಂಧಿ ಅತ್ಯುತ್ತಮ ಹೊಸ ನಿರ್ದೇಶಕ: ಮೆತ್ತಾದಿಯನ್ (ಮಲಯಾಳಂ)
ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: ಆರ್​ಆರ್​ಆರ್ (ತೆಲುಗು)
ಡ್ಯಾನ್ಸ್ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್
ಸ್ಪೆಷನ್ ಎಫೆಕ್ಟ್: ವಿ ಶ್ರೀನಿವಾಸ ಮೋಹನ್
ಅತ್ಯುತ್ತಮ ಮೇಕಪ್​: ಗಂಗೂಬಾಯಿ ಕಾಠಿಯಾವಾಡಿ (ಸಿಂಗ್ ಡಿಸೋಜಾ)
ಅತ್ಯುತ್ತಮ ವಸ್ತ್ರಾಲಂಕಾರ: ಸರ್ದಾರ್ ಉದ್ಧಮ್ (ವೀರಕಪೂರ್ ಇ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸರ್ದಾರ್ ಉದ್ಧಮ್ (ದಿಮತ್ರಿ ಮಲ್ಲಿಚ್-ಮಾನ್ಸಿ ದ್ರುವ್ ಮೆಹ್ತಾ)
ಅತ್ಯುತ್ತಮ ರೀ-ರೆಕಾರ್ಡಿಂಗ್: ಸರ್ದಾರ್ ಉದ್ಧಮ್
ಅತ್ಯುತ್ತಮ ಸೌಂಡ್ ಡಿಸೈನರ್:
ಅತ್ಯುತ್ತಮ ಸಾಹಿತ್ಯ: ಕೊಂಡಪೋಲಂ (ಚಂದ್ರಭೋಸ್)
ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ
ಅತ್ಯುತ್ತಮ ಹಿಂದಿ ಸಿನಿಮಾ: ಸರ್ದಾರ್ ಉದ್ಧಮ್
ಅತ್ಯುತ್ತಮ ತೆಲುಗು ಸಿನಿಮಾ: ಉಪ್ಪೆನ
ಅತ್ಯುತ್ತಮ ತಮಿಳು ಸಿನಿಮಾ: ಕಡೈಸಿ ವ್ಯವಸಾಯಿ
ಅತ್ಯುತ್ತಮ ಮಲಯಾಳಂ ಸಿನಿಮಾ: ಹೋಮ್
ಅತ್ಯುತ್ತಮ ಅಸ್ಸಾಮಿ ಸಿನಿಮಾ: ಅನುರ್
ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಾಲಕೋಕು
ಅತ್ಯುತ್ತಮ ಮರಾಠಿ ಸಿನಿಮಾ: ಏತ್​ ತಾ ಕಾಯ್ ಜಾಲ
ಗುಜರಾತಿ ಸಿನಿಮಾ: ಚೆಲ್ಲೋ ಶೋ
ಮಿಶ್ಸಿಂಗ್ ಸಿನಿಮಾ: ಬುಂಬಾ ರೈಡ್
ಮೈಥಿಲಿ: ಏಕೊಂಗೆ ಹೋಮ್
ಒಡಿಯಾ; ಪ್ರತೀಕ್ಷಾ
ನ್ಯಾಷನಲ್ ಇಂಟಿಗ್ರೇಷನ್: ದಿ ಕಾಶ್ಮೀರ್ ಫೈಲ್ಸ್
ನಾನ್ ಫೀಚರ್ ವಿಭಾಗ
ವಿಶೇಷ ಮೆನ್ಷನ್: ಬಾಳೆ ಬಂಗಾರ
ವಿಶೇಷ ಮೆನ್ಸನ್: ಹೀಲಿಂಗ್ ಟಚ್
ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಚಾಂದ್ ಸಾನ್​ಸೆ
ತೀರ್ಪುಗಾರರ ವಿಶೇಷ ಪ್ರಶಸ್ತಿ: ರೇಖಾ
ಅತ್ಯುತ್ತಮ ತನಿಖಾ ಸಿನಿಮಾ: ಲುಕಿಂಗ್ ಫಾರ್ ಚಾಲನ್
ಅತ್ಯುತ್ತಮ ಶೈಕ್ಷಣಿಕ ಸಿನಿಮಾ: ಸಿರ್ಪಂಗಲಿನ್ ಸಿರ್ಪಗಲಿಲ್ (ತಮಿಳು)
ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ: ಮುನ್ನಂ ವಲೈವ್ (ಮಲಯಾಳಂ)
ಅತ್ಯುತ್ತಮ ಬಯೋಗ್ರಫಿ ಸಿನಿಮಾ: ರುಕುಮಾತಿರ್ ದುಕುಮಾಜಿ (ಬಂಗಾಲಿ)
ಕಲೆ ಸಂಸ್ಕೃತಿ ಬಗೆಗಿನ ಸಿನಿಮಾ: ಟಿಎನ್ ಕೃಷ್ಣನ್
ಅತ್ಯುತ್ತಮ ಸಿನಿಮಾ ವಿಮರ್ಶೆ: ಪುರುಷೋತ್ತಮ ಚಾರ್ಯಾಲು ತೆಲುಗು
ಸಿನಿಮಾ ವಿಮರ್ಶೆ ಜ್ಯೂರಿ ಬಹುಮಾನ: ಶುಭಮನ್ಯುಮ್ ಬಡೂರು ಕನ್ನಡ
ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ


Leave a Reply

Your email address will not be published. Required fields are marked *