rtgh

PGCIL ನೇಮಕಾತಿ 2024: 802 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನ


ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಪಿಜಿಸಿಐಎಲ್‌) ಡಿಪ್ಲೊಮಾ, ಡಿಗ್ರಿ, ಬಿಕಾಂ ಹಾಗೂ ಸಿಎ/ಸಿಎಂಎ ಇಂಟರ್‌ ಪಾಸಾದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 802 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿ ನೋಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Recruitment 2024 in PGCIL
Recruitment 2024 in PGCIL

ಹುದ್ದೆಗಳ ವಿವರ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಡಿಪ್ಲೊಮಾ ಟ್ರೈನಿ (ಇಲೆಕ್ಟ್ರಿಕಲ್)600
ಡಿಪ್ಲೊಮಾ ಟ್ರೈನಿ (ಸಿವಿಲ್)66
ಜೂನಿಯರ್‌ ಆಫೀಸರ್‌ ಟ್ರೈನಿ (ಹೆಚ್‌ಆರ್‌)79
ಜೂನಿಯರ್‌ ಆಫೀಸರ್‌ ಟ್ರೈನಿ (ಫೈನಾನ್ಸ್‌)35
ಅಸಿಸ್ಟಂಟ್‌ ಟ್ರೈನಿ (ಫೈನಾನ್ಸ್‌)22

ಶೈಕ್ಷಣಿಕ ಅರ್ಹತೆ:

  • ಡಿಪ್ಲೊಮಾ ಟ್ರೈನಿ (ಇಲೆಕ್ಟ್ರಿಕಲ್ / ಸಿವಿಲ್): ಇಲೆಕ್ಟ್ರಿಕಲ್‌ನಲ್ಲಿ ಡಿಪ್ಲೊಮಾ ಪಾಸ್‌ ಮಾಡಿರಬೇಕು. BE/B.Tech/M.Tech/ME ಪದವಿಗಳನ್ನು ಪರಿಗಣಿಸುವುದಿಲ್ಲ.
  • ಜೂನಿಯರ್‌ ಆಫೀಸರ್‌ ಟ್ರೈನಿ (HR): BBA/BBM/BBS ಪದವಿ ಪಾಸ್‌ ಮಾಡಿರಬೇಕು.
  • ಜೂನಿಯರ್‌ ಆಫೀಸರ್‌ ಟ್ರೈನಿ (ಫೈನಾನ್ಸ್‌): ಇಂಟರ್‌ ಸಿಎ ಅಥವಾ ಇಂಟರ್‌ ಸಿಎಂಎ ಪಾಸಾಗಿರಬೇಕು.
  • ಅಸಿಸ್ಟಂಟ್‌ ಟ್ರೈನಿ (ಫೈನಾನ್ಸ್‌): B.Com ಪದವಿ ಪಾಸಾದಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ದಿನಾಂಕ 12-11-2024ರಂತೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ಪಂಗಡದವರಿಗೆ 5 ವರ್ಷ ವಯೋಮಿತಿ ಸಡಿಲಿಕೆಯು ಅನ್ವಯವಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 22-10-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-11-2024 (ರಾತ್ರಿ 11:59 ಕ್ಕೆ)
  • ಲಿಖಿತ ಪರೀಕ್ಷೆ: ಜನವರಿ ಅಥವಾ ಫೆಬ್ರುವರಿ 2025
  • ಹಾಲ್‌ಟಿಕೆಟ್ ಬಿಡುಗಡೆ: ಪರೀಕ್ಷೆಗೆ 10 ದಿನಗಳ ಮುಂಚೆ.

ಅರ್ಜಿಯ ಶುಲ್ಕ:

  • ಅಸಿಸ್ಟಂಟ್‌ ಟ್ರೈನಿ ಹುದ್ದೆಗೆ: ₹200
  • DTE, DTC, JOT ಹುದ್ದೆಗಳಿಗೆ: ₹300
  • ಪರಿಶಿಷ್ಟ ಜಾತಿ/ಪಂಗಡ, ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ.

ಹುದ್ದೆಗಳ ವೇತನ ಶ್ರೇಣಿ:

ಹುದ್ದೆಯ ಹೆಸರುವೇತನ ಶ್ರೇಣಿ (ರೂ.)
ಡಿಪ್ಲೊಮಾ ಟ್ರೈನಿ (ಇಲೆಕ್ಟ್ರಿಕಲ್/ಸಿವಿಲ್)₹25,000 – ₹1,17,500
ಜೂನಿಯರ್‌ ಆಫೀಸರ್‌ ಟ್ರೈನಿ (ಹೆಚ್‌ಆರ್/ಫೈನಾನ್ಸ್‌)₹25,000 – ₹1,17,500
ಅಸಿಸ್ಟಂಟ್‌ ಟ್ರೈನಿ (ಫೈನಾನ್ಸ್‌)₹21,500 – ₹74,000

ಅರ್ಜಿ ಸಲ್ಲಿಸುವ ವಿಧಾನ:

  1. ಅಧಿಕೃತ ವೆಬ್‌ಸೈಟ್‌ https://careers.powergrid.in/recruitment-nextgen/h/login.aspx ಗೆ ಲಾಗಿನ್‌ ಮಾಡಿ.
  2. ‘New Registration’ ಕ್ಲಿಕ್‌ ಮಾಡಿ.
  3. ಬೇಸಿಕ್‌ ಮಾಹಿತಿ ನೀಡಿ, ನೋಂದಣಿ ಮಾಡಿ, ನಂತರ ಅರ್ಜಿಯನ್ನು ಸಲ್ಲಿಸಿ.

ಈ ನೇಮಕಾತಿ ದೇಶಾದ್ಯಂತ ಹಲವಾರು ಹುದ್ದೆಗಳಿಗೆ ಅವಕಾಶವನ್ನು ಒದಗಿಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಸಮಯಕ್ಕೆ ಮೊದಲು ಅರ್ಜಿ ಸಲ್ಲಿಸಿ ಅವಕಾಶವನ್ನು ಬಳಸಿ.


Leave a Reply

Your email address will not be published. Required fields are marked *