ನಮಸ್ಕಾರ ಸ್ನೇಹಿತರೆ ನಾವು ಈ ಲೇಖನದಲ್ಲಿ ನಿಮಗೆ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ ರೈಲ್ವೆ ಪ್ರಯಾಣಿಕರ ಟಿಕೆಟ್ ಪರೀಕ್ಷೆಯ ಹುದ್ದೆಗೆ ನೇಮಕತಿಯನ್ನು ಕರೆದಿದ್ದು ಅರ್ಹತೆಯುಳ್ಳ ಅಭ್ಯರ್ಥಿಗಳು ಆದಷ್ಟು ಬೇಗನೆ ಅರ್ಜಿ ಸಲ್ಲಿಸಬಹುದಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ವಿದ್ಯಾರ್ಥಿ ಹಾಗೂ ದಾಖಲೆಗಳನ್ನು ಈ ಕೆಳಗೆ ನಾವು ನೀಡಿದ್ದೇವೆ.
ಭಾರತ ರೈಲ್ವೆ ಇಲಾಖೆಯು ಇತ್ತೀಚೆಗೆ 15,000 ಹುದ್ದೆಗಳ ಭರ್ತಿಗೆ ಅಧಿಸೂಚಿಸಿ, ಈಗಾಗಲೇ ಅರ್ಜಿ ಸ್ವೀಕಾರ ಮಾಡಿದೆ. ಈ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗಳು ಈಗ ಹಂತ ಹಂತವಾಗಿ ನಡೆಯಲಿವೆ. ಆ ಹುದ್ದೆಗಳೆಂದರೆ ರೈಲ್ವೆ ರಕ್ಷಣಾ ಪಡೆಯ ಎಸ್‌ಐ, ಕಾನ್ಸ್‌ಟೇಬಲ್, ಟೆಕ್ನೀಷಿಯನ್ ಗ್ರೇಡ್ 1, ಅಸಿಸ್ಟಂಟ್ ಲೋಕೋ ಪೈಲಟ್. ಈ ಹುದ್ದೆಗಳನ್ನು ನೋಡಿ ರೈಲ್ವೆ ಉದ್ಯೋಗಗಳ ಮೇಲೆ ಆಸಕ್ತರಾದ ಕೆಲವು ಅಭ್ಯರ್ಥಿಗಳು ರೈಲ್ವೆ ಟ್ರಾವೆಲ್ಲಿಂಗ್ ಟಿಕೆಟ್ ಎಕ್ಸಾಮಿನರ್ (ರೈಲ್ವೆ ಪ್ರಯಾಣಿಕರ ಟಿಕೆಟ್ ಪರೀಕ್ಷಕರ ) ಆಗುವುದು ಹೇಗೆ, ಈ ಹುದ್ದೆಗೆ ವಿದ್ಯಾರ್ಹತೆ ಏನು, ವೇತನ ಎಷ್ಟಿರುತ್ತದೆ ಎಂದು ವಿಕ’ಗೆ ಕೇಳಿದ್ದರು. ಈ ಅಭ್ಯರ್ಥಿಗಳ ಪ್ರಶ್ನೆಗೆ ಉತ್ತರವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ರೈಲ್ವೆ ಸಚಿವಾಲಯವು ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ ಹುದ್ದೆಯನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡುತ್ತದೆ. ಈ ಹುದ್ದೆಗೆ 10th / 12th ಅಥವಾ ಡಿಪ್ಲೊಮ ವಿದ್ಯಾರ್ಹತೆಯನ್ನು ನಿಗಧಿಪಡಿಸಲಾಗಿರುತ್ತದೆ. ಈ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬಹುದು.
ರೈಲ್ವೆ ಇಲಾಖೆಯ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (TTE) ಹುದ್ದೆಗೆ ಅರ್ಹತೆಗಳೇನು?
ಆಸಕ್ತ ಅಭ್ಯರ್ಥಿಗಳು ಕನಿಷ್ಠ ಶೇಕಡ.50 ಅಂಕಗಳೊಂದಿಗೆ 10th / 12th ಅಥವಾ ಡಿಪ್ಲೊಮ ಪಾಸ್ ಮಾಡಿರಬೇಕು.
ಆಸಕ್ತ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25- 30 ವರ್ಷ ವಯಸ್ಸು ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟಲ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಇಲಾಖೆಯು ರೈಲ್ವೆ ಟಿಕೆಟ್ ಕಲೆಕ್ಟರ್‌ಗಳನ್ನು (TC) ಸಹ ಪ್ರಮೋಷನ್ ಮಾಡಿ ಟಿಟಿಇ ಹುದ್ದೆಗೆ (ಟ್ರಾವೆಲ್ ಟಿಕೆಟ್ ಎಕ್ಸಾಮಿನರ್) ನೇಮಕ ಮಾಡಲಾಗುತ್ತದೆ.
ರೈಲ್ವೆಯ ಟ್ರಾವೆಲರ್ ಟಿಕೆಟ್ ಎಕ್ಸಾಮಿನರ್ ನೇಮಕಾತಿ ವಿಧಾನ: ಲಿಖಿತ ಪರೀಕ್ಷೆ / ಸಂದರ್ಶನ / ಮೆಡಿಕಲ್ ಟೆಸ್ಟ್ / ದಾಖಲೆಗಳ ಪರಿಶೀಲನೆ.
ರೈಲ್ವೆ ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ ಹುದ್ದೆಗೆ ವೇತನ ವಿವರ
ಪೇ ಸ್ಕೇಲ್ Rs.5200-20,200 ಇರುತ್ತದೆ.
ಗ್ರೇಡ್ ಪೇ ರೂ.1900-.
ಟಿಟಿಇ ಬೇಸಿಕ್ ಸ್ಯಾಲರಿ ರೂ.15,000.
ಹುದ್ದೆಗೆ ಸೇರಿದ ನಂತರ ಎಲ್ಲ ಭತ್ಯೆಗಳು ಸೇರಿ ರೂ.36,000 ವರೆಗೆ ಮಾಸಿಕ ವೇತನ ಸಿಗಲಿದೆ.
ಇತರೆ ಸೌಲಭ್ಯಗಳು
ರೈಲ್ವೆ ಕಾಲೋನಿಗಳಲ್ಲಿ ಕ್ವಾಟರ್ಸ್‌ಗಳ ಸೌಲಭ್ಯ ಇರುತ್ತದೆ.
ಶೇಕಡ.45 ರಷ್ಟು ರೈಲ್ವೆ ಸಿಬ್ಬಂದಿಗಳು ಈ ರೈಲ್ವೆ ಕಾಲೋನಿಗಳಲ್ಲಿಯೇ ವಾಸ ಮಾಡುತ್ತಾರೆ.
ಭದ್ರತೆ ನೀಡಲಾಗುತ್ತದೆ.
ಜೀವನ ಪೂರ್ತಿ ಫೆನಾನ್ಸಿಯಲ್ ಸೆಕ್ಯೂರಿಟಿ ಸಿಗಲಿದೆ.
ಪಿಂಚಣಿ ಸೌಲಭ್ಯ.
ಉಚಿತ ವೈದ್ಯಕೀಯ ಸೌಲಭ್ಯ.