ಹೌದು, 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ನೀವು ಬಳಕೆ ಮಾಡಿದ್ರೆ ನೀವು ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿಲ್ಲ. 200 ಯೂನಿಟ್ ಒಳಗೆ ನೀವು ಎಷ್ಟು ಯುನಿಟ್ ವಿದ್ಯುತ್ ಬಳಕೆ ಮಾಡುತ್ತೀರೋ ಅದಕ್ಕೆ 10% ನಷ್ಟು ಹೆಚ್ಚುವರಿ ಯಾಗಿ ಸೇರಿಸಿ ಯೂನಿಟ್ ಬಳಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಅಂದರೆ ನೀವು 150 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದರೆ, ಅದಕ್ಕೆ 10% ಅಂದ್ರೆ 160 ಯೂನಿಟ್ ವರೆಗೂ ಬಳಕೆ ಮಾಡಲು ಅವಕಾಶವಿದೆ. ಒಂದು ವೇಳೆ 200 ಯೂನಿಟ್ ಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ, ಆಗ ನೀವು ಸಂಪೂರ್ಣ ವಿದ್ಯುತ್ ಬಿಲ್ ಪಾವತಿಯನ್ನು ಮಾಡಬೇಕಾಗುತ್ತದೆ.
ಬೆಳ್ಳಂಬೆಳಗ್ಗೆ ರೇಷನ್ ಕಾರ್ಡ್ ಡಿಲೀಟ್ ಮೆಸೇಜ್ ಬಂದಿದೆ ! ತಕ್ಷಣ ನಿಮ್ಮ ಕಾರ್ಡ್ ಪರಿಶೀಲನೆ ಮಾಡಿ
ವಿದ್ಯುತ್ ಬಿಲ್ ಪಾವತಿ ಮಾಡದೇ ಇದ್ರು ಇಲ್ಲ ದಂಡ
ಸಾಮಾನ್ಯವಾಗಿ ವಿದ್ಯುತ್ ಬಿಲ್ಲನ್ನು ನಿಗದಿತ ಅವಧಿಯ ಒಳಗೆ ಪಾವತಿ ಮಾಡದಿದ್ದರೆ ಅದಕ್ಕೆ ದಂಡ ಪಾವತಿಸಬೇಕಾಗುತ್ತದೆ. ಆದರೆ ಮಾರ್ಚ್ ತಿಂಗಳಲ್ಲಿ ನೀವು ಈ ದಂಡವನ್ನು ಪಾವತಿಸುವ ಅಗತ್ಯ ಇಲ್ಲ ಎಂದು ಸರ್ಕಾರ ತಿಳಿಸಿದೆ. ಯಾವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಗೊತ್ತಾ?
ಮಾರ್ಚ್ ತಿಂಗಳಲ್ಲಿ ಮಾತ್ರ ದಂಡ ಪಾವತಿ ಇಲ್ಲ ಯಾಕೆ?
ಬೆಸ್ಕಾಂ ವೆಬ್ ಸೈಟ್‌ನಲ್ಲಿ ಸಾಫ್ಟ್‌ವೇರ್ ಅಪ್ಡೇಟ್ ಇದ್ದ ಕಾರಣ ಮಾರ್ಚ್ 10 ರಿಂದ 19 ರ ವರೆಗೆ ಆನ್ಲೈನ್ ಪೋರ್ಟಲ್ ಓಪನ್ ಆಗ್ತಿರಲಿಲ್ಲ. ಇದರಿಂದಾಗಿ ಆನ್ಲೈನ್‌ನ ಮೂಲಕ ಹಣ ಪಾವತಿ ಮಾಡುವವರಿಗೆ ಸಮಸ್ಯೆ ಉಂಟಾಗಿತ್ತು.
ಮಾರ್ಚ್ 20 ರ ನಂತರ ಸಾಫ್ಟ್ವೇರ್ ಅಪ್ಡೇಟ್ ಕೆಲಸ ಮುಗಿದಿದ್ದು ಆನ್ಲೈನ್ ಮೂಲಕ ಪೇಮೆಂಟ್ ಮಾಡಲು ಮತ್ತೆ ಅವಕಾಶ ನೀಡಲಾಗಿದೆ. ಹಾಗಾಗಿ 10 ದಿನಗಳ ಕಾಲ ಜನರಿಗೆ ಹಣ ಪಾವತಿ ಮಾಡಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಈ ತಿಂಗಳು ಹಣ ಪಾವತಿ ಮಾಡಲು ವಿಳಂಬವಾದರೆ ಅಂತವರಿಗೆ ದಂಡ ವಿಧಿಸುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಗೃಹಜ್ಯೋತಿ ಯೋಜನೆಗೆ ನೀವಿನ್ನು ಅರ್ಜಿ ಸಲ್ಲಿಸಿಲ್ವಾ?
ಬೆಂಗಳೂರಿನಂತಹ ನಗರಗಳಿಗೆ ಪ್ರತಿದಿನ ಲಕ್ಷಾಂತರ ಜನ ಬರುತ್ತಾರೆ. ಹಾಗೂ ಸಾವಿರಾರು ಜನ ಇಲ್ಲಿಯೇ ವಾಸ ಮಾಡುತ್ತಾರೆ. ಹಾಗೆ ನೀವು ಬೇರೆ ಊರಿನಿಂದ ಬಂದು ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದರೆ ನೀವು ಕೂಡ ಹೊಸದಾಗಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಥವಾ ಇಲ್ಲಿಯವರೆಗೆ ಅರ್ಜಿ ಸಲ್ಲಿಸದೆ ಇರುವ ಯಾವುದೇ ಪ್ರದೇಶದ ಜನ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಮತ್ತೆ ಅವಕಾಶ ನೀಡಲಾಗಿದ್ದು ತಕ್ಷಣ ಸೇವ ಕೇಂದ್ರಗಳಿಗೆ ಹೋಗಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಮುಂದಿನ ತಿಂಗಳಿನಿಂದ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಿ.