ಬೆಂಗಳೂರು: ರೈತರ ನೀರಾವರಿ ಸಾಂಪ್ರದಾಯಿಕ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ ಸೌರಶಕ್ತಿಯ ಬಳಕೆ ಮೂಲಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಅನ್ನು ಪೂರೈಸಲು ಸೌರ ಪಂಪ್ಸೆಟ್ ಅನ್ನು ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಮಾರ್ಚ್ 9ರಂದು ಬೆಂಗಳೂರಿನ ಜಿಕೆವಿಕೆಯಲ್ಲಿ ರೈತ ಸೌರ ಶಕ್ತಿ ಮೇಳವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮೇಳದಲ್ಲಿ ರೈತರಿಗಾಗಿ ಸೋಲಾರ್ ಪಂಪ್ ಸೆಟ್, ಸಹಾಯಧನ ಸೇರಿ ಎಲ್ಲಾ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಸಹ ಓದಿ: ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ!! ಹವಾಮಾನ ಇಲಾಖೆ ಎಚ್ಚರಿಕೆ
ಸೋಲಾರ್ ಪಂಪ್ಸೆಟ್ ಬಳಕೆಯ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರವು ಕುಸುಮ್ ಬಿ ಯೋಜನೆಯ ಅನುಷ್ಠಾನಕ್ಕೆ ಒತ್ತು ಅನ್ನು ನೀಡಿದೆ. ಮೇಳದಲ್ಲಿ ರೈತರು ಸೌರ ಪಂಪ್ಸೆಟ್ಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದು ಜಮೀನಿನಲ್ಲಿ ಅಳವಡಿಸಿಕೊಳ್ಳಬಹುದು. ಇದುವರೆಗೆ ಸೋಲಾರ್ ಪಂಪ್ಸೆಟ್ ಅಳವಡಿಕೆಗಾಗಿ ನೀಡುತ್ತಿದ್ದ ಶೇ. 30ರಷ್ಟು ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದಿಂದಲೇ ಪಂಪ್, ಮೀಟರ್, ಪೈಪ್ ವೇ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ಮಾರ್ಚ್ ತಿಂಗಳ ಹೊಸ ಪಡಿತರ ಚೀಟಿ ಪಟ್ಟಿ ಬಿಡುಗಡೆ!! ಈ ರೀತಿಯಾಗಿ ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!
ರೇಷನ್ ಕಾರ್ಡ್‌ನಲ್ಲಿ ಹೆಸರು ಸೇರಿಸುವವರಿಗೆ ಹೊಸ ನಿಯಮ ಜಾರಿ!