ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಸೌಕರ್ಯಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ನೈರುತ್ಯ ರೈಲ್ವೆ ಈ ಕುರಿತಂತೆ ಅಧಿಕೃತವಾಗಿ ಮಾಹಿತಿ ನೀಡಿದ್ದು, 4 ವಿಶೇಷ ರೈಲುಗಳು ಬೆಂಗಳೂರಿನಿಂದ ವಿವಿಧ ಪ್ರಮುಖ ನಗರಗಳಿಗೆ ಸಂಚರಿಸಲಿವೆ. ಇದರಿಂದ ದೀಪಾವಳಿ ವೇಳೆ ಹೆಚ್ಚುವರಿ ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸಲು ಸಹಾಯಕವಾಗಲಿದೆ.
ಇದೇ ಅಲ್ಲದೇ, ಹುಬ್ಬಳ್ಳಿ ನಿಲ್ದಾಣದಿಂದ ಉತ್ತರ ಪ್ರದೇಶದ ಮುಜಾಫರ್‌ಪುರವರೆಗೆ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರ ಸಂಪೂರ್ಣ ವಿವರ ಹಾಗೂ ಸಮಯ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ವಿಶೇಷ ರೈಲುಗಳು – ಹಬ್ಬದ ಪ್ರಯಾಣಕ್ಕಾಗಿ
- ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು (07313/07314):
- ಹೊರಟ ಸಮಯ: ಅಕ್ಟೋಬರ್ 26 ರಂದು ಮಧ್ಯಾಹ್ನ 3:15 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಕೊಲ್ಲಂ ಕಡೆ ರೈಲು ಹೊರಡಲಿದೆ.
- ತಲುಪುವ ಸಮಯ: ಮರುದಿನ ಅಂದರೆ ಅಕ್ಟೋಬರ್ 27 ರಂದು ಸಂಜೆ 5:10ಕ್ಕೆ ಕೊಲ್ಲಂ ತಲುಪಲಿದೆ.
- ಹಿಂದಿರುಗುವ ಸಮಯ: ಕೊಲ್ಲಂನಿಂದ ಅಕ್ಟೋಬರ್ 27 ರಂದು ರಾತ್ರಿ 8:30 ಕ್ಕೆ ಹೊರಟು, ಮರುದಿನ ರಾತ್ರಿ 8:45 ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.
- ನಿಲ್ದಾಣಗಳು: ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಬೆಂಗಳೂರು ಸೇರಿದಂತೆ 27 ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.
- ಬೆಂಗಳೂರು-ಸಂತ್ರಗಾಚಿ ವಿಶೇಷ ರೈಲು (06211/06212):
- ಹೊರಟ ಸಮಯ: ಅಕ್ಟೋಬರ್ 26 ರಂದು ಬೆಳಿಗ್ಗೆ 10:15 ಕ್ಕೆ SMVT ಬೆಂಗಳೂರಿನಿಂದ ರೈಲು ಹೊರಡಲಿದೆ.
- ತಲುಪುವ ಸಮಯ: ಮರುದಿನ ಅಂದರೆ ಅಕ್ಟೋಬರ್ 27 ರಂದು ಸಂಜೆ 7:45 ಕ್ಕೆ ಸಂತ್ರಗಾಚಿ ತಲುಪಲಿದೆ.
- ಹಿಂದಿರುಗುವ ಸಮಯ: ಅಕ್ಟೋಬರ್ 27 ರಂದು ರಾತ್ರಿ 11:30 ಕ್ಕೆ ಸಂತ್ರಗಾಚಿಯಿಂದ ಹೊರಡಲಿದೆ.
- ನಿಲ್ದಾಣಗಳು: ಕೃಷ್ಣರಾಜಪುರಂ, ನೆಲ್ಲೂರು, ವಿಜಯವಾಡ, ಬೂವನೇಶ್ವರ್, ಕಟಕ್ ಸೇರಿದಂತೆ 15 ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.
- ಯಶವಂತಪುರ-ಕೊಟ್ಟಾಯಂ ವಿಶೇಷ ರೈಲು (06215/06216):
- ಹೊರಟ ಸಮಯ: ಅಕ್ಟೋಬರ್ 29 ರಂದು ಸಂಜೆ 6:30 ಕ್ಕೆ ಯಶವಂತಪುರ ನಿಲ್ದಾಣದಿಂದ ರೈಲು ಹೊರಡಲಿದೆ.
- ತಲುಪುವ ಸಮಯ: ಮರುದಿನ ಅಂದರೆ ಅಕ್ಟೋಬರ್ 30 ರಂದು ಬೆಳಿಗ್ಗೆ 8:10 ಕ್ಕೆ ಕೊಟ್ಟಾಯಂ ತಲುಪಲಿದೆ.
- ಹಿಂದಿರುಗುವ ಸಮಯ: ಅಕ್ಟೋಬರ್ 30 ರಂದು ಬೆಳಿಗ್ಗೆ 11:10 ಕ್ಕೆ ಕೊಟ್ಟಾಯಂನಿಂದ ಹೊರಟು, ಮರುದಿನ 1:15 (AM) ಕ್ಕೆ ಯಶವಂತಪುರ ತಲುಪಲಿದೆ.
- ನಿಲ್ದಾಣಗಳು: ವೈಟ್‌ಫೀಲ್ಡ್, ಸೇಲಂ, ಕೊಯಮತ್ತೂರು, ತ್ರಿಶೂರ್ ಸೇರಿದಂತೆ 10 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
- ಬೆಂಗಳೂರು-ಕಲಬುರಗಿ ವಿಶೇಷ ರೈಲು (06217/06218):
- ಹೊರಟ ಸಮಯ: ಅಕ್ಟೋಬರ್ 31 ರಂದು ರಾತ್ರಿ 9:15 ಕ್ಕೆ SMVT ಬೆಂಗಳೂರಿನಿಂದ ಕಲಬುರಗಿಯತ್ತ ರೈಲು ಹೊರಡಲಿದೆ.
- ತಲುಪುವ ಸಮಯ: ಮರುದಿನ ಅಂದರೆ ನವೆಂಬರ್ 1 ರಂದು ಬೆಳಿಗ್ಗೆ 7:40 ಕ್ಕೆ ಕಲಬುರಗಿ ತಲುಪಲಿದೆ.
- ಹಿಂದಿರುಗುವ ಸಮಯ: ಕಲಬುರಗಿಯಿಂದ ನವೆಂಬರ್ 1 ರಂದು ಬೆಳಿಗ್ಗೆ 9:35 ಕ್ಕೆ ಹೊರಟು, ಅದೇ ದಿನ ರಾತ್ರಿ 8 ಗಂಟೆಗೆ SMVT ಬೆಂಗಳೂರು ತಲುಪಲಿದೆ.
- ನಿಲ್ದಾಣಗಳು: ಯಲಹಂಕ, ಧರ್ಮಾವರಂ, ರಾಯಚೂರು ಸೇರಿದಂತೆ 10 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಹುಬ್ಬಳ್ಳಿ-ಮುಜಾಫರ್‌ಪುರ ವಿಶೇಷ ರೈಲು (07315/07316):
- ಹೊರಟ ಸಮಯ: ನವೆಂಬರ್ 4 ರಂದು ಸಂಜೆ 5:20 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮುಜಾಫರ್‌ಪುರವರೆಗೆ ರೈಲು ಹೊರಡಲಿದೆ.
- ತಲುಪುವ ಸಮಯ: ನವೆಂಬರ್ 6 ರಂದು ಸಂಜೆ 4 ಗಂಟೆಗೆ ಮುಜಾಫರ್‌ಪುರ ತಲುಪಲಿದೆ.
- ಹಿಂದಿರುಗುವ ಸಮಯ: ನವೆಂಬರ್ 9 ರಂದು ಮಧ್ಯಾಹ್ನ 1:15 ಕ್ಕೆ ಮುಜಾಫರ್‌ಪುರದಿಂದ ಹೊರಟು, ನವೆಂಬರ್ 11 ರಂದು ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.
- ನಿಲ್ದಾಣಗಳು: ಧಾರವಾಡ, ಪುಣೆ, ಜಬಲ್‌ಪುರ್, ಪಾಟ್ನಾ ಸೇರಿದಂತೆ 20 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಪ್ರಯಾಣಿಕರಿಗಾಗಿ ಮಾಹಿತಿ:
ಈ ವಿಶೇಷ ರೈಲುಗಳ ಪ್ರಯಾಣದ ವಿವರಗಳಿಗಾಗಿ www.enquiry.indianrail.gov.in ನಲ್ಲಿ ಪರಿಶೀಲಿಸಬಹುದು ಅಥವಾ NTES ಅಪ್ಲಿಕೇಶನ್ ಅಥವಾ 139 ಡಯಲ್ ಮೂಲಕ ಮಾಹಿತಿ ಪಡೆಯಬಹುದು.
ದೀಪಾವಳಿಯ ಸಂಭ್ರಮದೊಂದಿಗೆ ಈ ವಿಶೇಷ ರೈಲು ಸೇವೆ ಪ್ರಯಾಣಿಕರ ಅನುಕೂಲಕ್ಕೆ ಸಹಾಯವಾಗಲಿದೆ!