ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸ್ಪೆಕ್ಟ್ರಮ್‌ನಾದ್ಯಂತ ವಿದ್ಯಾರ್ಥಿಗಳಿಗೆ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ, ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಂತಹ ನಿರ್ಣಾಯಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ. ನಡೆಯುತ್ತಿರುವ ಸಾಂಕ್ರಾಮಿಕ ರೋಗವು ನಿಯಮಿತ ಶೈಕ್ಷಣಿಕ ವೇಳಾಪಟ್ಟಿಗಳಿಗೆ ಅಡ್ಡಿಪಡಿಸುತ್ತದೆ, ಇದು ವಿದ್ಯಾರ್ಥಿಗಳ ಸನ್ನದ್ಧತೆ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ.
ಸದ್ಯ 2023 -24 ಶೈಕ್ಷಣಿಕ ಸಾಲಿನ ಶಿಕ್ಷಣ ಕೊನೆಯ ಹಂತದಲ್ಲಿದೆ. SSLC ಮತ್ತು PUC ವಿದ್ಯಾರ್ಥಿಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ವಾರ್ಷಿಕ ಬರಲಿದೆ. ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗಾಗಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಶಿಕ್ಷಣ ಮಂಡಳಿ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಾರ್ಚ್ 25 ರಿಂದ SSLC Annual Exam ಹಾಗೂ PUC Annual Exam ಮಾರ್ಚ್ 1 ರಿಂದ ಆರಂಭವಾಗಲಿದೆ. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಶಿಕ್ಷಣ ಮಂಡಳಿ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ನಿಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಿದೆ.
SSLC ಮತ್ತು PUC ಮಕ್ಕಳೇ ಫೇಲ್ ಆದರೆ ಭಯಪಡುವ ಅಗತ್ಯ ಇಲ್ಲ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಶಿಕ್ಷಣ ಮಂಡಳಿ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳಿಗೆ 3 ವಾರ್ಷಿಕ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೂ ಅಥವಾ ಉತ್ತೀರ್ಣರಾಗಿದ್ದರೂ ಅಂತಿಮ ಪರೀಕ್ಷೆ (Annual Exam) ಮಾದರಿಯಲ್ಲಿ 3 ಬಾರಿ ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಏಪ್ರಿಲ್ ಕೊನೆಯ ವಾರದಲ್ಲಿ ಮತ್ತು SSLC ಪರೀಕ್ಷೆ-2 ಮೇ ಮೂರನೇ ವಾರದಲ್ಲಿ ನಡೆಯಲಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 3 ಬಾರಿ ಪೂರಕ ಪರೀಕ್ಷೆಗಳನ್ನು ಬರೆಯಲು ಅವಕಾಶವಿದೆ.
ಪರೀಕ್ಷಾ ನಿಯಮದಲ್ಲಿ ಬದಲಾವಣೆ
ಶಿಕ್ಷಣ ಇಲಾಖೆ 3 ಪರೀಕ್ಷೆಗಳಲ್ಲಿ ಮೊದಲ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕೆನ್ನುವ ನಿಯಮವನ್ನು ತಿದ್ದುಪಡಿ ಮಾಡಲು ಮುಂದಾಗಿದೆ. ಹೊಸ ನಿಯಮದ ಪ್ರಕಾರ ಮೊದಲ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೊದಲ ಪರೀಕ್ಷೆಗೆ ಹಾಜರಾಗದಿದ್ದರು 2 ಮತ್ತು 3 ನೇ ಪರೀಕ್ಷೆಗೆ ಹಾಜರಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಆದರೆ ಮೊದಲ ಪರೀಕ್ಷೆಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ಪರೀಕ್ಷಾ ಮಂಡಳಿಗೆ ದತ್ತಾಂಶ ಬೇಕು ಎನ್ನುವ ಕಾರಣದಿಂದ ನಿಯಮವನ್ನು ಇಲಾಖೆ ಬದಲಾಯಿಸಿದೆ. ಇನ್ನು ಈ ಹಿಂದೆ ಅನುತ್ತೀರ್ಣರಾಗಿರುವ ಮತ್ತು ಹಿಂದಿನ ವರ್ಷಗಳಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಕೂಡ ಮೊದಲ ಪರೀಕ್ಷೆಗೆ ನೋಂದಣಿ ಅಥವಾ ಹಾಜರಾಗಬೇಕೆಂಬ ನಿಯಮವಿಲ್ಲ. 2 ಅಥವಾ 3 ನೇ ಪರೀಕ್ಷೆಗೆ ನೇರವಾಗಿ ನೋಂದಣಿ ಮಾಡಿಕೊಂಡು ಹಾಜರಾಗಬಹುದು.
Sociology economics fiall