rtgh

ಕೇಂದ್ರದಿಂದ ಬೊಂಬಾಟ್‌ ಆಫರ್.!!‌ ಸ್ಟಾರ್ಟಪ್‌ ಗೆ ಸರ್ಕಾರದಿಂದ 50 ಲಕ್ಷ ನೆರವು; ಹೀಗೆ ಅಪ್ಲೇ ಮಾಡಿ


ಹಲೋ ಸ್ನೇಹಿತರೇ, ನಿಮ್ಮ ಕನಸಿನ ಜಾಬ್‌ ನಿಮ್ಮದಾಗಿಸಿಕೊಳ್ಳಲು ಹಣಕಾಸಿನ ನೆರವು ಬೇಕೇ? ಹಾಗದ್ರೆ ಕೇಂದ್ರ ನಿಮಗೆ ಸಹಾಯ ಮಾಡಲು ಸಿದ್ಧವಾಗಿದೆ. ಆ ಹಣ ಬಳಸಿಕೊಂಡು ಏನು ಮಾಡ್ತೀರಿ ಅಂತ ಹೇಳಬೇಕು. ನೀವು ಹೇಳುವುದು ಕೇಂದ್ರಕ್ಕೆ ಇಷ್ಟವಾದರೆ ತಕ್ಷಣ ಹಣ ನೀಡುತ್ತದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಿ.

Startup India Seed Fund Scheme

ಈ ಯೋಜನೆಯಡಿ ಸರ್ಕಾರವು ನಿಮಗೆ ಹಣ ನೀಡಲಿದೆ. ಇದು ಮಹತ್ವಾಕಾಂಕ್ಷಿ ಉದ್ಯಮಿಗಳಿಗಾಗಿ ಕೇಂದ್ರದಿಂದ ನೀಡಲಾದ ನಿಧಿಯಾಗಿದೆ. ಇದರ ಮುಖ್ಯ ಉದ್ದೇಶ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಹಣವನ್ನು ನೀಡುವುದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜನವರಿ 16, 2016 ರಂದು ಪ್ರಾರಂಭಿಸಿತು. ಇದಕ್ಕಾಗಿ 945 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಹಣವನ್ನು ಕೇಂದ್ರವು ಇನ್ ಕ್ಯುಬೇಟರ್ ಗಳಿಗೆ ನೀಡಲಿದೆ. ಇನ್ಕ್ಯುಬೇಟರ್ ಈ ಹಣವನ್ನು ಸ್ಟಾರ್ಟ್‌ಅಪ್‌ಗಳಿಗೆ ನೀಡುತ್ತದೆ.

ಆರಂಭಿಕವಾಗಿ ಹೂಡಿಕೆ ಮಾಡುವವರು ಈ ಹಣವನ್ನು ತಮ್ಮ ಪುರಾವೆಗಾಗಿ ಬಳಸಿಕೊಳ್ಳಬಹುದು. ಮೂಲ ಮಾದರಿಯನ್ನು ಸಹ ಅಭಿವೃದ್ಧಿಪಡಿಸಬಹುದು. ನೀವು ಉತ್ಪನ್ನವನ್ನು ತಯಾರಿಸಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು. 4 ವರ್ಷದಲ್ಲಿ ಒಟ್ಟು 300 ಇನ್ಕ್ಯುಬೇಟರ್‌ಗಳು ಹಾಗೂ 3600 ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲಾಗಿದೆ.

ಹಣ ಪಡೆಯುವುದು ಹೇಗೆ?

ಸ್ಟಾರ್ಟಪ್ ಆರಂಭ ಮಾಡುವವರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ತಮ್ಮ ವ್ಯವಹಾರದ ಬಗ್ಗೆ ತಿಳಿಸಿ ಹಣ ಪಡೆಯಬಹುದು. ಇದಕ್ಕಾಗಿಯೇ ಅವರು ಅಧಿಕೃತ ವೆಬ್‌ಸೈಟ್‌ https://seedfund.startupindia.gov.in ನಲ್ಲಿ ಅರ್ಜಿ ಹಾಕಬೇಕು. ಈ ಹಣವನ್ನು ಕೇಂದ್ರ ಸರ್ಕಾರವು ತಕ್ಷಣವೇ ಖಾತರಿಪಡಿಸುತ್ತದೆ. ನೀವು ವೆಬ್‌ಸೈಟ್‌ನಲ್ಲಿ ಅರ್ಜಿ ಹಾಕಿದ ನಂತರ, ನಿಮ್ಮ ಫೈಲ್ ನ್ನು ತಜ್ಞರ ಸಲಹಾ ಸಮಿತಿಯು ಪರಿಶೀಲನೆ ನಡೆಸುತ್ತದೆ. ಈ ಸಮಿತಿಯು ಇನ್ಕ್ಯುಬೇಟರ್ ನಿಮಗಾಗಿ ಎಷ್ಟು ಹಣವನ್ನು ನೀಡಬಹುದು ಎನ್ನುವ ನಿರ್ಧಾರವನ್ನು ಮಾಡುತ್ತದೆ. ನಂತರ ಅದನ್ನು ಹೇಗೆ ನೀಡಬೇಕೆಂದು ವಿವರಿಸುತ್ತದೆ.

ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲು: ಸಿಎಂ ಸಿದ್ದರಾಮಯ್ಯ

ಇಎಸಿಯು ಪ್ರತಿ ಇನ್ಕ್ಯುಬೇಟರ್‌ಗೆ ರೂ.5 ಕೋಟಿ ನೀಡುತ್ತದೆ. ಈ ಹಣವನ್ನು 3 ಕಂತುಗಳಲ್ಲಿ ನೀಡಲಾಗುವುದು. ಇನ್ಕ್ಯುಬೇಟರ್ ಗಳು ಹಣವನ್ನು ಅರ್ಹ ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುತ್ತದೆ. ಯಾವ ಸ್ಟಾರ್ಟ್‌ಅಪ್‌ಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು EAC ನಿರ್ಧಾರ ಮಾಡುತ್ತದೆ. ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಹಣವನ್ನು ನಿಮಗೆ ನೀಡುತ್ತರಾ, ಇಲ್ಲವೇ ಎಂಬ ಮಾಹಿತಿಯನ್ನು ಇಮೇಲ್ ಮೂಲಕ ನಿಮಗೆ ತಿಳಿಸುತ್ತಾರೆ. ಮೊದಲನೆಯದಾಗಿ ರೂ.20 ಲಕ್ಷ ಹಾಗೂ ರೂ.50 ಲಕ್ಷ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಕನಿಷ್ಟ 60 ದಿನಗಳಲ್ಲಿ ಮೊದಲ ಕಂತಿನ ಹಣ ನೀಡಲಾಗುವುದು.

ಅರ್ಹತೆಗಳು:

ಅಪ್ಲಿಕೇಶನ್‌ನ ಹಾಕುವ ಸಂದರ್ಭದಲ್ಲಿ ಕಂಪನಿಯು ಪ್ರಾರಂಭವು 2 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿರಬಾರದು. ಸ್ಟಾರ್ಟ್‌ಅಪ್‌ನಲ್ಲಿ ಭಾರತೀಯರ ಪಾಲು ಕನಿಷ್ಠ 51 ಪ್ರತಿಶತ ಇರಬೇಕಾಗುತ್ತದೆ. ಈ ಸ್ಟಾರ್ಟಪ್ ವಿವಿಧ ಕೇಂದ್ರ ಯೋಜನೆಗಳಿಂದ ರೂ.10 ಲಕ್ಷಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯ ಪಡೆದಿರಬಾರದು.

ಅಗತ್ಯವಿರುವ ದಾಖಲೆಗಳು

ಆಧಾರ್, ಜಿಎಸ್‌ಟಿ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಗುತ್ತಿಗೆ ಒಪ್ಪಂದ, ವಿವರವಾದ ಯೋಜನಾ ವರದಿ (ಡಿಪಿಆರ್), ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಮೊಬೈಲ್ ಸಂಖ್ಯೆ ಇಷ್ಟು ಇದ್ದರೇ ಸಾಕು.

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್‌ಸೈಟ್‌ಗೆ ಹೋಗಿ ( https://seedfund.startupindia.gov.in ). ಮುಖಪುಟದಲ್ಲಿ ಈಗ ಅಪ್ಲೈ ಯನ್ನು ಕ್ಲಿಕ್ ಮಾಡಿ. ನಂತರ ಪ್ರಾರಂಭ ವಿಭಾಗದಲ್ಲಿ ಈಗ ಅಪ್ಲೈ ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಇಮೇಲ್ ಮುಂತಾದ ವಿವರಗಳನ್ನು ಹಾಕಬೇಕು. ನಂತರ ವಿನಂತಿಸಿದ ದಾಖಲೆಗಳ ಪ್ರತಿಗಳನ್ನು ಅಪ್ಲೋಡ್ ಮಾಡಿ. ನಂತರ ಸಲ್ಲಿಸಿ. ಬಳಿಕ ನಿಮಗೆ ಯಾವುದೇ ಮಾಹಿತಿಯನ್ನು ಹಾಗೂ ಅಪ್ಡೇಟ್ ಗಳನ್ನು ನಿಮ್ಮ ಇ-ಮೇಲ್‌ಗೆ ಕಳುಹಿಸಲಾಗುತ್ತದೆ.

ಇತರೆ ವಿಷಯಗಳು:

ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬ ಆಚರಣೆ ನಿಷೇಧ!! ರಾಜ್ಯ ಸರ್ಕಾರದ ಹೊಸ ಆದೇಶ

ಉಚಿತ ಸ್ಮಾರ್ಟ್ ಫೋನ್ ವಿತರಣೆ ಘೋಷಣೆ ಮಾಡಿದ ಸಿದ್ದರಾಮಯ್ಯ! ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ ನ್ಯೂಸ್


Leave a Reply

Your email address will not be published. Required fields are marked *