rtgh

ಒಂದೇ ಮನೆಯಲ್ಲಿ ಎರಡು ಮೂರೂ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ, ರದ್ದಾಗಲಿದೆ ಕಾರ್ಡ್.


Extension of period for correction of APL and BPL ration card
Extension of period for correction of APL and BPL ration card

ಒಂದೇ ಮನೆಯಲ್ಲಿ ಎರಡು ಅಥವಾ ಮೂರು ಪಡಿತರ ಚೀಟಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಪಡಿತರ ಚೀಟಿಯನ್ನು ರದ್ದುಗೊಳಿಸುವುದು ದುರುಪಯೋಗವನ್ನು ತಡೆಗಟ್ಟಲು ಮತ್ತು ಸರ್ಕಾರದ ಸಹಾಯಧನ ಮತ್ತು ಪ್ರಯೋಜನಗಳನ್ನು ನ್ಯಾಯಯುತವಾಗಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮವಾಗಿದೆ. ಪಡಿತರ ಚೀಟಿಗಳನ್ನು ಸಾಮಾನ್ಯವಾಗಿ ಸಬ್ಸಿಡಿ ದರದಲ್ಲಿ ಅಗತ್ಯ ವಸ್ತುಗಳನ್ನು ಪ್ರವೇಶಿಸಲು ಬಳಸಲಾಗುತ್ತದೆ, ಮತ್ತು ಒಂದೇ ಮನೆಗೆ ಬಹು ಕಾರ್ಡ್‌ಗಳನ್ನು ಹೊಂದಿರುವುದು ಮೋಸದ ಚಟುವಟಿಕೆಗಳಿಗೆ ಅಥವಾ ಸಂಪನ್ಮೂಲಗಳ ಅಸಮಾನ ಹಂಚಿಕೆಗೆ ಕಾರಣವಾಗಬಹುದು.

ರೇಷನ್ ಕಾರ್ಡ್ (Ration Card) ಅನ್ನು ಸಾಮಾನ್ಯವಾಗಿ ಎಲ್ಲಾ ಕುಟುಂಬದವರು ಹೊಂದಿರುತ್ತಾರೆ. ಹೌದು ರೇಷನ್ ಕಾರ್ಡ್ ಇಲ್ಲದ ಕುಟುಂಬ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ರೇಷನ್ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಹಲವು ಸವಲತ್ತುಗಳನ್ನ ಪಡೆದುಕೊಂಡಿರುತ್ತಾರೆ.

ಹೌದು ಸರ್ಕಾರದಿಂದ BPL ರೇಷನ್ ಕಾರ್ಡ್ ಹೊಂದಿರುವವರು ಹಲವು ಸವಲತ್ತುಗಳನ್ನ ಪಡೆದುಕೊಳ್ಳುತ್ತಾರೆ ಮತ್ತು ಅದೇ ರೀತಿಯಲ್ಲಿ ಸರ್ಕಾರದ ಸವಲತ್ತುಗಳನ್ನ ಪಡೆಯುವ ಉದ್ದೇಶದಿಂದ ಒಂದೇ ಮನೆಯಲ್ಲಿ ಇದ್ದುಕೊಂಡು ಹಲವು ರೇಷನ್ ಕಾರ್ಡುಗಳನ್ನ ಜನರು ಮಾಡಿಕೊಂಡಿರುತ್ತಾರೆ ಎಂದು ಹೇಳಬಹುದು.

ಮನೆಯಲ್ಲಿ ಇರುತ್ತದೆ ಎರಡು ಮೂರೂ ರೇಷನ್ ಕಾರ್ಡ್

ಹೌದು ದೊಡ್ಡ ಕುಟುಂಬದ ಜನರು ಒಂದೇ ಮನೆಯಲ್ಲಿ ಎರಡು ಅಥವಾ ಮೂರೂ ರೇಷನ್ ಕಾರ್ಡುಗಳನ್ನ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಸದ್ಯ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೇಷನ್ ಕಾರ್ಡ್ ಹೊಂದಿರುವ ಜನರು ಹಲವು ಯೋಜನೆಗಳನ್ನ ಪರಿಚಯಿಸಿದ್ದು ಈ ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಒಂದೇ ಮನೆಯಲ್ಲಿ ಎರಡು ಮೂರೂ ರೇಷನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ

ಹೌದು ಕಾಂಗ್ರೆಸ್ ಸರ್ಕಾರ ಈಗ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯನ್ನ ಪರಿಚಯಿಸಿದ್ದು ಈ ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜನರು ಅಕ್ಕಿ ಬದಲಾಗಿ ಹಣವನ್ನ ಪಡೆದುಕೊಳ್ಳುತ್ತಿದ್ದು ಈ ಹಣವನ್ನ BPL ರೇಷನ್ ಕಾರ್ಡ್ ಇರುವ ಎಲ್ಲಾ ಜನರು ಪಡೆದುಕೊಳ್ಳುತ್ತಿದ್ದಾರೆ. ಒಂದೇ ಮನೆಯಲ್ಲಿ ಎರುಡು ಮೂರೂ ರೇಷನ್ ಕಾರ್ಡ್ ಹೊಂದಿರುವವರು ಕೂಡ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಮನೆಯಲ್ಲಿ ಎರಡು ಮೂರೂ ರೇಷನ್ ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ

ಕೆಲವು ಯೋಜನೆಯ ಅಡಿಯಲ್ಲಿ ಹಣ ಅನಗತ್ಯ ಹಾಳಾಗುತ್ತಿರುವ ಹಿನ್ನಲೆಯಲ್ಲಿ ಒಂದು ಮನೆಗೆ ಒಂದೇ ರೇಷನ್ ಕಾರ್ಡ್ ನಿಯಮ ಜಾರಿಗೆ ತರಲು ಈಗ ಸರ್ಕಾರ ನಿರ್ಧಾರ ಮಾಡಿದೆ. ಮನೆಯಲ್ಲಿ ಹಲವಾರು ಸರ್ಕಾರ ಕೆಲವು ಯೋಜನೆಗಳ ಲಾಭ ಪಡೆಯುತ್ತಿರುವ ಕಾರಣ ಒಂದು ಮನೆಗೆ ಒಂದು ರೇಷನ್ ಕಾರ್ಡ್ ಜಾರಿಗೆ ತರಲು ಈಗ ಸರ್ಕಾರ ಮುಂದಾಗಿದೆ.

ಇನ್ನು ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಕಾರಣ ಜನರು ತಮ್ಮ ರೇಷನ್ ಕಾರ್ಡುಗಳನ್ನ ವಿಭಜನೆ ಮಾಡುತ್ತಿದ್ದು ಅದನ್ನ ತಡೆಗಟ್ಟಲು ಈಗ ಸರ್ಕಾರ ಮುಂದಾಗಿದೆ. ದೊಡ್ಡ ಕುಟುಂಬ ಹೊಂದಿರುವ ಜನರು ಒಂದೇ ಮನೆಯಲ್ಲಿ ಎರಡು ಮೂರೂ ರೇಷನ್ ಕಾರ್ಡ್ ಮಾಡಿಕೊಳ್ಳದಂತೆ ಈಗ ಆಹಾರ ಇಲಾಖೆ ಮತ್ತು ಸರ್ಕಾರ ಆದೇಶವನ್ನ ಹೊರಡಿಸಿದೆ.

ಗೃಹಲಕ್ಷ್ಮಿ ಯೋಜನೆ ಪಡೆಯಲು ಹಲವು ರೇಷನ್ ಕಾರ್ಡಿಗೆ ಅರ್ಜಿ

ಹೌದು ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯುವ ಉದ್ದೇಶದಿಂದ ಮನೆಯಲ್ಲಿ ಎರಡು ಮೂರೂ ಮತ್ತು ನಾಲ್ಕು ರೇಷನ್ ಕಾರ್ಡುಗಳನ್ನ ಮಾಡಿಕೊಳ್ಳುತ್ತಿದ್ದು ಸದ್ಯ ಇದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಜನರು ಸರ್ಕಾರಕ್ಕೆ ಮೋಸ ಮಾಡುತ್ತಿರುವ ಹಿನ್ನಲೆಯಲ್ಲಿ ಒಂದು ಮನೆಗೆ ಒಂದು ರೇಷನ್ ಕಾರ್ಡ್ ನಿಯಮವನ್ನ ಈಗ ಸರ್ಕಾರ ಮಾಡಿಸಿಕೊಂಡಿದ್ದು ಸದ್ಯ ಇದು ಹಲವು ಜನರ ಬೇಸರಕ್ಕೆ ಕೂಡ ಕಾರಣವಾಗಿದೆ.


Leave a Reply

Your email address will not be published. Required fields are marked *