rtgh

ತೀರ್ಥಹಳ್ಳಿ ಎಳ್ಳುಮಾವಾಸ್ಯ ಜಾತ್ರೆ ವಿಶೇಷ ಮಹಿತಿ , ತೀರ್ಥಹಳ್ಳಿ ಎಳ್ಳುಮಾವಾಸ್ಯ ಜಾತ್ರೆ 2024 ದಿನಾಂಕ. Tirthahalli Ellamavasya Jatre 2024 date


ಎಳ್ಳುಮಾವಾಸ್ಯ ಜಾತ್ರೆ 2024 ದಿನಾಂಕ

ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಗೆ ದಿನಾಂಕ ನಿಗದಿಯಾಗಿ. ಜನವರಿ 11, 12 ಮತ್ತು 13ರಂದು ಜಾತ್ರೆ ನಡೆಯಲಿದೆ. ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸು ಸಲುವಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳ ಸಭೆ ನಡೆಸಲಾಯಿತು.

Tirthahalli Ellamavasya Jatre 2024 date
Tirthahalli Ellamavasya Jatre 2024 date

ಅಮವಾಸ್ಯೆಗೆ ಎರಡು ದಿನ ಮೊದಲೇ ಆರಂಭವಾಗುವ ಜಾತ್ರೆಯ ಸಾಂಪ್ರದಾಯಿಕ ಆಚರಣಾ ವಿಧಿಗಳು ಮುಗಿಯುವುದು ಐದನೇಯ ದಿನದ ತೆಪ್ಪೋತ್ಸವ ಅಥವಾ ಓಕಳಿಯ ಕಾರ್ಯಕ್ರಮದಲ್ಲಿ. ಜನರಿಗೆ ಜಾತ್ರೆ ಮೂರು ದಿನಗಳದ್ದಾದರೂ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಪುರೋಹಿತ ವರ್ಗದವರಿಗೆ ಮಾತ್ರ ಐದು ದಿನಗಳು. ಅಂಗಡಿ-ಮುಂಗಟ್ಟುಗಳು ಜಾತ್ರೆಗೆ ಎರಡು-ಮೂರು ದಿನಗಳ ಮೊದಲೇ ಬಂದು ತಳವೂರುತ್ತವೆ. ಮುಂದಿನ ಸಂಕ್ರಾಂತಿಯವರೆಗೂ ಹಾಗೂ-ಹೀಗೂ ಕಾಲ ತಳ್ಳಿ ಸಂಕ್ರಾಂತಿಯ ಚಿಕ್ಕತೇರು ಜಾತ್ರೆಯನ್ನು ಕೂಡ ಮುಗಿಸಿಯೇ ಅವರು ಹೊರಡುವುದು.

 ಜಾತ್ರೆ ನಡೆಯುವುದು ತೀರ್ಥಹಳ್ಳಿಯ ತುಂಗಾ ನದಿಯ ದಡದಮೇಲಿರುವ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ. ದೂರ ದೂರದ ಊರಿನಿಂದ ಜನ ಸಾಗರವಾಗಿ ತುಂಗೆಯ ಮಡಿಲಲ್ಲಿ ನೆರೆಯುತ್ತಾರೆ. ತುಂಗೆಯ ಒಡಲಲ್ಲಿ ತನ್ನ ಪಾಪವನ್ನು ಕಳೆದ ಪರಶುರಾಮನ ಕೊಂಡದಲ್ಲಿ ಭಕ್ತಿಯಿಂದ ಮುಳುಗೇಳುತ್ತಾರೆ. ತಮ್ಮ ಇಡೀ ಜನ್ಮದ ಪಾಪ ನಿವಾರಣೆಯಾಯಿತೆಂದು ಭಾವಿಸಿ ಶ್ರೀ ರಾಮೇಶ್ವರನ ಪ್ರಸಾದದೊಂದಿಗೆ ಮರಳುತ್ತಾರೆ. ಮರುದಿನ ರಥೋತ್ಸವ ಬೆಳಗಿನಿಂದಲೇ ನೆರೆದ ಜನರಲ್ಲಿ ಸಂಭ್ರಮ-ಲವಲವಿಕೆ ದೇವರನ್ನು ಏರಿಸಿಕೊಂಡ ತೇರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತುವರಿದು ಹಿಂತಿರುಗುವಾಗ ರಾತ್ರಿಯೇ ಆಗಿರುತ್ತದೆ. ಮರುದಿವಸ ತೆಪ್ಪೋತ್ಸವ, ಸಂಜೆಗೆ ತುಂಗೆಯ ದಡದಲ್ಲಿ ಜನಸಾಗರವೇ ನೆರೆಯುತ್ತದೆ. ತೆಪ್ಪೋತ್ಸವವನ್ನು ಅದ್ದೂರಿಯಾಗಿ ವ್ಯವಸ್ಥೆಗೊಳಿಸಲೆಂದೇ ರಚನೆಯಾದ ತೆಪ್ಪೋತ್ಸವ ಸಮಿತಿ ಪಾದರಸದಂತೆ ಚಲಿಸುತ್ತಾ ಎಲ್ಲಾ ವ್ಯವಸ್ಥೆಗಳನ್ನು ಮಾಡಿರುತ್ತದೆ. ಪೂರ್ಣ ಕತ್ತಲು ಆವರಿಸುತ್ತಿದ್ದಂತೆಯೇ ಸಿಡಿಮದ್ದುಗಳು ಆಗಸದಲ್ಲಿ ಸಿಡಿಯುತ್ತಾ ಬಣ್ಣದ ಚಿತ್ತಾರ ಬಿಡಿಸತೊಡಗುತ್ತವೆ.

     ಇತ್ತ ಕಡೆ ಶ್ರೀ ರಾಮೇಶ್ವರ ದೇವರನ್ನ ರಾಮಮಂಟಪದಲ್ಲಿ ಕೂರಿಸಿ ಸ್ನಾನಕ್ಕೆ ಸಿದ್ಧಗೊಳಿಸುತ್ತಾರೆ. ಜನರು ಸ್ನಾನ ಮಾಡುವ ದಿನ ದೇವರಿಗೆ ಕೇವಲ ಹನೀಕರಿಸುತ್ತಾರೆ. ಈ ದಿನ ದೇವರಿಗೆ ಪರಶುರಾಮ ಕೊಂಡದಲ್ಲಿ ಪೂರ್ತಿ ತೀರ್ಥಸ್ನಾನ ಮಾಡಿಸಿ ತೆಪ್ಪದಲ್ಲಿ ಉತ್ಸವಕ್ಕೆ ಕರೆದುಕೊಂಡು ಹೋಗುತ್ತಾರೆ. ತೆಪ್ಪೋತ್ಸವ ಮುಗಿದ ನಂತರ ದೇವರನ್ನು ರಾಮೇಶ್ವರ ದೇವಸ್ಥಾನದ ಎದುರು ಮಂಟಪದಲ್ಲಿ ಕೂರಿಸುತ್ತಾರೆ. ಹೊರಗಿನ ಶಿವದೇವರು ಬಂದಾಗ ದೇವಸ್ಥಾನದ ಒಳಗಿನ ಪಾರ್ವತಿ ಬಾಗಿಲು ತೆರೆಯುವುದಿಲ್ಲ. ಇದರ ನಡುವೆ ನಂದಿ ರಾಜಿ ಮಾಡಿ ಕೊನೆಗೂ ಶಿವ ದೇವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಸಾಂಪ್ರದಾಯಿಕ ವಿಧಿ-ವಿಧಾನಗಳು ನೆರವೇರಿದ ನಂತರ ಜಾತ್ರೆ ಮುಗಿಯುತ್ತದೆ. ನಂತರ ಜನವರಿ 11-13ಕ್ಕೆ ಬರುವ ಸಂಕ್ರಾಂತಿಗೆ ಚಿಕ್ಕ ರಥೋತ್ಸವವೊಂದು ನಡೆಯುತ್ತದೆ. ಅಲ್ಲಿಗೆ ಜಾತ್ರೆ ಸಂಪೂರ್ಣವಾಗಿ ಮುಗಿಯುತ್ತದೆ. ಮತ್ತೆ ಸಾರ್ವಜನಿಕ ಉತ್ಸವ-ಆಚರಣೆಗಳಿಗಾಗಿ ಮುಂದಿನ ವರ್ಷದ ಎಳ್ಳಮಾವಾಸ್ಯೆ ಜಾತ್ರೆಯನ್ನೇ ಕಾಯಬೇಕು.

ಶ್ರಾದ್ಧ – ಯೆಳ್ಳು ಅಮಾವಾಸ್ಯೆಯಂದು ತರ್ಪಣ

ಶ್ರಾದ್ಧ, ತಿಲ ತರ್ಪಣ, ಬಡವರ ಭೋಜನ ಮತ್ತು ಇತರ ದಾನಗಳನ್ನು ಮಾಡುವ ಜನರು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಜನ ಪಿತ್ರಾಂತರ್ಯಾಮಿ ಶ್ರೀಹರಿಯ ಪೂಜೆಯನ್ನೂ ಮಾಡುತ್ತಾರೆ. ಪಿತೃ ದೇವತೆಗಳು ಮತ್ತು ಅವರ ಅಂತರ್ಯಾಮಿ (ಮೃತ ಪೂರ್ವಜರು) ಈ ದಿನವನ್ನು ಆಚರಿಸುವುದರಿಂದ ಭೂಮಿಯ ಮೇಲಿನ ಅವರ ವಂಶಸ್ಥರು ಆಶೀರ್ವದಿಸುತ್ತಾರೆ ಮತ್ತು ಸಂತೋಷಪಡುತ್ತಾರೆ.

ಈ ದಿನ ಶ್ರಾದ್ಧ ಮಾಡುವವರಿಗೆ ಪಾಪಗಳು ಸಂಪೂರ್ಣ ನಿವಾರಣೆಯಾಗುತ್ತವೆ. ಜನರು ತರ್ಪಣ ಮತ್ತು ಶ್ರಾದ್ಧ ಮಾಡುವ ಮೊದಲು ಪವಿತ್ರ ನದಿಗಳಲ್ಲಿ ಸಮುದ್ರ ಸ್ನಾನ ಅಥವಾ ಸ್ನಾನ ಮಾಡುತ್ತಾರೆ.


ಉತ್ಸವದ ಮೊದಲನೆಯ ದಿನದಂದು ರಾಮೇಶ್ವರ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಯನ್ನು ಸಡಗರದಿಂದ ತುಂಗಾ ನದಿಯಲ್ಲಿರುವ ಪರಶುರಾಮ ತೀರ್ಥಕ್ಕೆ ತಂದು ಪುಣ್ಯಾಭಿಷೇಕವನ್ನು ನೆರವೇರಿಸಲಾಗುತ್ತದೆ. ನಂತರ ನೆರೆದಿರುವ ಭಕ್ತಾದಿಗಳು ತುಂಗೆಯ ಪವಿತ್ರ ನೀರಿನಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.

ಎರಡನೆಯ ದಿನ ತೇರೋತ್ಸವ ಜರುಗುತ್ತದೆ. ನಗರದಲ್ಲಿರುವ ರಥ ಬಿದಿಯಲ್ಲಿ ರಾಮೇಶ್ವರ ದೇವಸ್ಥಾನದ ತೇರನ್ನು ಸುಂದರವಾಗಿ ಸಿಂಗರಿಸಿ ಎಳೆಯಲಾಗುತ್ತದೆ. ನೆರೆದಿರುವ ಸಮಸ್ತ ಭಕ್ತ ಜನರು ಬಲು ಹುರುಪಿನಿಂದ ತೇರನ್ನು ಎಳೆದು ಸಂತೃಪ್ತಿಯ ಭಾವವನ್ನು ಬೀರುತ್ತಾರೆ.

ಮೂರನೆಯ ಹಾಗೂ ಕೊನೆಯ ದಿನದಂದು ಉತ್ಸವ ಮೂರ್ತಿಯನ್ನು ತುಂಗಾ ನದಿಯಲ್ಲಿ ತೆಪ್ಪದ ಮೂಲಕ ಕುರುವಳ್ಳಿ ಎಂಬಲ್ಲಿಗೆ ತೆಗೆದುಕೊಂಡು ಹೋಗಿ ಮತ್ತೆ ಮರಳಿ ಬರಲಾಗುತ್ತದೆ. ಇದನ್ನು ತೆಪ್ಪೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಳಾಸ:

ರಥ ಬೀದಿ ರಸ್ತೆ, ತೀರ್ಥಹಳ್ಳಿ, ಕರ್ನಾಟಕ 577432


Leave a Reply

Your email address will not be published. Required fields are marked *