Gold Rate
Gold Rate: ಕಳೆದ ಕೆಲವು ವರ್ಷಗಳಿಂದ 22k ಚಿನ್ನ ಮತ್ತು 24k ಚಿನ್ನದ ಬೆಲೆಗಳು ಏರಿಕೆಯಾಗಿವೆ. ಹೂಡಿಕೆದಾರರು ಇನ್ನೂ ಕಳೆದ ಹಲವು ದಶಕಗಳಲ್ಲಿ ಗಳಿಸಿದ ಆದಾಯವನ್ನು ನೀಡಿದ ಆಕರ್ಷಕ ಹೂಡಿಕೆಯಾಗಿ ಅಮೂಲ್ಯವಾದ ಲೋಹವನ್ನು ನೋಡುತ್ತಾರೆ.
Table of Contents
ಸದ್ಯ ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ಜನರು ಚಿನ್ನ ಖರೀದಿಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತಿದೆ. 2023 ರ ಆರಂಭದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ವರ್ಷದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿರುವುದಕ್ಕಿಂತ ಏರಿಕೆಯಾಗಿರುವುದೇ ಹೆಚ್ಚಾಗಿದೆ. ಚಿನ್ನದ ಬೆಳೆಯ ಏರಿಕೆಯ ಪರಿಣಾಮ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.
ವರ್ಷಾಂತ್ಯದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದಾ..? ಎನ್ನುವ ಜನರ ನಿರೀಕ್ಷೆಗೆ ಯಾವುದೇ ಪ್ರತಿಫಲ ಸಿಗದಂತಾಗಿದೆ. ವರ್ಷ ಕೊನೆಯ ತಿಂಗಳು ಮುಗಿದು ಹೊಸ ವರ್ಷ ಆರಂಭಕ್ಕೆ ಕೆಲವೇ ದಿನಗಳು ಇದ್ದರು ಕೂಡ ಚಿನ್ನದ ಬೆಲೆ ಇಳಿಕೆಯಾಗುತಿಲ್ಲ. ನಿನ್ನೆ ಮತ್ತು ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದೆ.
ಇನ್ನು ಓದಿ: ಡಿಪ್ಲೊಮಾ, ಪದವೀಧರರೇ ಗಮನಿಸಿ: ಇಂದಿನಿಂದ ‘ಯುವನಿಧಿʼ ನೋಂದಣಿ ಆರಂಭ, ಇಲ್ಲಿ ಅಪ್ಲೈ ಮಾಡಿ.
ಇಂದು ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ
•ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 40 ರೂ. ಏರಿಕೆಯಾಗುವ ಮೂಲಕ 5840 ರೂ. ತಲುಪಿದೆ.
•ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 320 ರೂ. ಏರಿಕೆಯಾಗುವ ಮೂಲಕ 46720 ರೂ. ತಲುಪಿದೆ.
•ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 400 ರೂ. ಏರಿಕೆಯಾಗುವ ಮೂಲಕ 58400 ರೂ. ತಲುಪಿದೆ.
•ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 4000 ರೂ. ಏರಿಕೆಯಾಗುವ ಮೂಲಕ 584000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ
•ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 42 ರೂ. ಏರಿಕೆಯಾಗುವ ಮೂಲಕ 6371 ರೂ. ತಲುಪಿದೆ.
•ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 336 ರೂ. ಏರಿಕೆಯಾಗುವ ಮೂಲಕ 50968 ರೂ. ತಲುಪಿದೆ.
•ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 420 ರೂ. ಏರಿಕೆಯಾಗುವ ಮೂಲಕ 63710 ರೂ. ತಲುಪಿದೆ.
•ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 4200 ರೂ. ಏರಿಕೆಯಾಗುವ ಮೂಲಕ 637100 ರೂ. ತಲುಪಿದೆ.