rtgh

Scholarship Application – TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!


Spread the love

ಟಿವಿಎಸ್ ಕಂಪನಿಯ (TVS) ಅಂಗ ಸಂಸ್ಥೆ TVS ಚೀಮಾ ಪೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ “TVS Foundation Scholarship” ಕಾರ್ಯಕ್ರಮವನ್ನು ಟಿವಿಎಸ್ ಮೋಟಾರ್ ಕಂಪನಿಯ ಸಂಸ್ಥಾಪಕ ಟಿ.ಎಸ್. ಶ್ರೀನಿವಾಸನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ ಆರಂಭಿಸಲಾಗಿದೆ.

tvs foundation scholarship application 2025
tvs foundation scholarship application 2025

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ನರ್ಸಿಂಗ್ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬಹುದು.


🎓 TVS Foundation Scholarship – ವಿದ್ಯಾರ್ಥಿವೇತನದ ಯೋಜನೆಗಳು

1️⃣ ಇಂಜಿನಿಯರಿಂಗ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಕಾರ್ಯಕ್ರಮ
2️⃣ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಕಾರ್ಯಕ್ರಮ


✅ ಅರ್ಹತಾ ಮಾನದಂಡಗಳು (Eligibility Criteria)

  • ವಿದ್ಯಾರ್ಥಿಯು ಕರ್ನಾಟಕ ಅಥವಾ ತಮಿಳುನಾಡು ರಾಜ್ಯದವರಾಗಿರಬೇಕು.
  • ಇಂಜಿನಿಯರಿಂಗ್, ಡಿಪ್ಲೋಮಾ ಅಥವಾ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪಡೆದಿರಬೇಕು.
  • SSLC ಮತ್ತು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 60% ಅಂಕಗಳು ಪಡೆದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ:
    • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ – ₹8 ಲಕ್ಷ ಒಳಗಾಗಿ
    • ಡಿಪ್ಲೋಮಾ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ – ₹5 ಲಕ್ಷ ಒಳಗಾಗಿ

📑 ಅಗತ್ಯ ದಾಖಲೆಗಳು (Required Documents)

  • ವಿದ್ಯಾರ್ಥಿಯ ಪೋಟೋ
  • ಆಧಾರ್ ಕಾರ್ಡ್
  • 12ನೇ ತರಗತಿ (PUC) ಅಂಕಪಟ್ಟಿ
  • ವಿದ್ಯಾರ್ಥಿಯ ಮೊಬೈಲ್ ನಂಬರ್
  • ಆದಾಯ ಪ್ರಮಾಣ ಪತ್ರ

🌐 ಅರ್ಜಿ ಸಲ್ಲಿಸುವ ವಿಧಾನ (How to Apply)

1️⃣ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – TVS Foundation Scholarship Portal
2️⃣ ಮುಖ್ಯಪುಟದಲ್ಲಿ “TVS Cheema Financial Assistance” ಆಯ್ಕೆಯನ್ನು ಆರಿಸಿ.
3️⃣ Apply Now → Create an Account ಕ್ಲಿಕ್ ಮಾಡಿ User ID ಮತ್ತು Password ರಚಿಸಿಕೊಳ್ಳಿ.
4️⃣ Login ಮಾಡಿ, ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5️⃣ ಕೊನೆಗೆ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.


📅 ಅರ್ಜಿಯ ಅಂತಿಮ ದಿನಾಂಕ

👉 ಅರ್ಜಿ ಸಲ್ಲಿಸಲು ಕೊನೆಯ ದಿನ – 31 ಆಗಸ್ಟ್ 2025


💰 ವಿದ್ಯಾರ್ಥಿವೇತನ ಮೊತ್ತ

TVS ಪೌಂಡೇಶನ್ ವತಿಯಿಂದ ಇಂಜಿನಿಯರಿಂಗ್, ನರ್ಸಿಂಗ್ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕೆ ಅನುಗುಣವಾಗಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ನಿಖರ ಮೊತ್ತವನ್ನು ಪೌಂಡೇಶನ್ ಅಧಿಕೃತವಾಗಿ ಪ್ರಕಟಿಸಿಲ್ಲ.


☎️ ಸಹಾಯವಾಣಿ (Helpline)


🔖 Tags: Diploma Scholarship | Engineering Scholarship | Nursing Scholarship | TVS Foundation | Scholarship

Sharath Kumar M

Spread the love

Leave a Reply

Your email address will not be published. Required fields are marked *