ಕರ್ನಾಟಕ ಸರ್ಕಾರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಭರ್ಜರಿ ಸಹಾಯಧನ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಡಿಯಲ್ಲಿ ವಾರ್ಷಿಕ 10 ಲಕ್ಷ ರೂ.ಗಳಷ್ಟು, ಒಟ್ಟು ಗರಿಷ್ಠ 20 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ, ವಿಜ್ಞಾನ, ಸಮಾಜಶಾಸ್ತ್ರ ಸೇರಿದಂತೆ ಹಲವಾರು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಜೂನ್ 30, 2025 ಕೊನೆಯ ದಿನವಾಗಿದ್ದು, ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
Table of Contents
ಯೋಜನೆಯ ಮುಖ್ಯಾಂಶಗಳು:
- ಸಾಲದ ಮೊತ್ತ: ವಾರ್ಷಿಕ ₹10 ಲಕ್ಷ, ಕೋರ್ಸ್‌ಗೆ ಗರಿಷ್ಠ ₹20 ಲಕ್ಷ
- ಬಡ್ಡಿ: ಶೂನ್ಯ (ಬಡ್ಡಿರಹಿತ)
- ಅರ್ಜಿ ಕೊನೆಯ ದಿನಾಂಕ: 30 ಜೂನ್ 2025
- ಅರ್ಜಿ ನೀಡುವ ಜಾಗ: Seva Sindhu Portal
ಅರ್ಹತೆ ಮಾನದಂಡಗಳು:
- ಹಿಂದುಳಿದ ವರ್ಗಗಳ ಪ್ರವರ್ಗ-1, 2A, 3A, 3B ಅಭ್ಯರ್ಥಿಗಳಿಗಷ್ಟೇ ಅನ್ವಯ
- ವಾರ್ಷಿಕ ಕುಟುಂಬ ಆದಾಯ ₹15 ಲಕ್ಷಕ್ಕಿಂತ ಕಡಿಮೆ ಇರಬೇಕು
- ಪ್ರವೇಶ ಪಡೆದ ವಿದೇಶಿ ವಿಶ್ವವಿದ್ಯಾಲಯದ ವಿಶ್ವ ಶ್ರೇಯಾಂಕವು 1000ಕ್ಕಿಂತ ಕಡಿಮೆ ಇರಬೇಕು
- ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 60 ಅಂಕಗಳು ಇರಬೇಕು
- ಪದವಿ ಶಿಕ್ಷಣಕ್ಕೆ 32 ವರ್ಷ ಹಾಗೂ ಪಿಎಚ್.ಡಿ.ಗೆ 35 ವರ್ಷ ವಯೋಮಿತಿ
- ಕೆಲವು ಸಮುದಾಯಗಳ ಅಭ್ಯರ್ಥಿಗಳಿಗೆ ಯೋಜನೆ ಅನ್ವಯಿಸದು (ಉದಾ: ಲಿಂಗಾಯತ, ಒಕ್ಕಲಿಗ, ಅಲೆಮಾರಿ ಮುಂತಾದವರು)
ಜೀವಜಲ ಯೋಜನೆ: ವೀರಶೈವ-ಲಿಂಗಾಯತ ಸಮುದಾಯದ ರೈತರಿಗೆ ಬೋರ್ವೆಲ್ ಬಾವಿಗೆ ₹4.75 ಲಕ್ಷದವರೆಗೆ ಸಹಾಯಧನ!
ಸಾಲದ ಅನುದಾನವು ಒಳಗೊಂಡಿರುವ ವಿವರಗಳು:
- ಕೋರ್ಸ್ ಫೀಸ್, ವಿಮಾನ ಟಿಕೆಟ್, ವೀಸಾ, ವಾಸ್ತವ್ಯ ಮತ್ತು ಇತರ ವೆಚ್ಚಗಳು
- ಅರ್ಜಿ ಸಲ್ಲಿಸಲು ವಿದೇಶಿ ವಿಶ್ವವಿದ್ಯಾಲಯದ ಪ್ರವೇಶ ಪತ್ರ, ಪಾಸ್ಪೋರ್ಟ್, ವೀಸಾ ಪ್ರತಿಗಳು ಅಗತ್ಯ
- ಸಾಲ ಭದ್ರತೆಗಾಗಿ ಪೋಷಕರ ಸ್ಥಿರಾಸ್ತಿ ದಾಖಲೆಗಳು ನೀಡಬೇಕಾಗುತ್ತದೆ
- ಮರುಪಾವತಿ ಅವಧಿ: ವ್ಯಾಸಂಗ ಪೂರ್ಣಗೊಂಡ 1 ವರ್ಷ ಅಥವಾ ಉದ್ಯೋಗ ದೊರೆತ 6 ತಿಂಗಳ ಬಳಿಕ ಆರಂಭವಾಗುವ, ಗರಿಷ್ಠ 60 ಮಾಸಿಕ ಕಂತುಗಳು
ಅರ್ಜಿಸಲು ಈ ಹಂತಗಳನ್ನು ಅನುಸರಿಸಿ:
- Seva Sindhu Portal ಗೆ ಭೇಟಿ ನೀಡಿ
- ಲಾಗಿನ್ ಆಗಿ: ಇ-ಮೇಲ್ ಐಡಿ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಮೂಲಕ
- “ದೇವರಾಜ ಅರಸು ವಿದೇಶ ಶಿಕ್ಷಣ ಸಾಲ ಯೋಜನೆ” ಆಯ್ಕೆ ಮಾಡಿ
- ವಿವರಗಳು ನಮೂದಿಸಿ, ದಾಖಲೆಗಳ ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ಆಟ್ ತೆಗೆದುಕೊಳ್ಳಿ
ಅಗತ್ಯವಿರುವ ದಾಖಲೆಗಳು:
- ಜಾತಿ ಹಾಗೂ ಆದಾಯ ಪ್ರಮಾಣಪತ್ರ
- ವಿದೇಶಿ ವಿಶ್ವವಿದ್ಯಾಲಯದ ಪ್ರವೇಶ ಪತ್ರ
- ಪಾಸ್ಪೋರ್ಟ್, ವೀಸಾ, ಟಿಕೆಟ್ ಪ್ರತಿಗಳು
- ಪೋಷಕರ ಅನುಮೋದನಾ ಪತ್ರ
- ಶೈಕ್ಷಣಿಕ ದಾಖಲೆಗಳು
- ವಾಸ್ತವ್ಯದ ಪ್ರಮಾಣ ಪತ್ರ
ಸಂಪರ್ಕ ಮಾಹಿತಿ:
ದೇವರಾಜ ಅರಸು ನಿಗಮ ಕಚೇರಿ
4ನೇ ಮಹಡಿ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತನಗರ, ಬೆಂಗಳೂರು-560 052
ಇಮೇಲ್: [email protected]
ದೂರವಾಣಿ: 080-22374832
ಸಹಾಯವಾಣಿ: +91 709040100 / +91 709040900
ಈ ಯೋಜನೆಯ ಮೂಲಕ ಅನೇಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದಲು ದಾರಿ ಸುಗಮವಾಗಲಿದೆ. ನಿಮಗೆ ಅರ್ಹತೆ ಇದ್ರೆ, ಸಮಯವನ್ನು ತಪ್ಪಿಸದೇ ಅರ್ಜಿ ಸಲ್ಲಿಸಿ.
🏷️ Tags: ವಿದೇಶಿ ವಿದ್ಯಾಭ್ಯಾಸ ಸಾಲ, ದೇವರಾಜ ಅರಸು ನಿಗಮ, ಹಿಂದುಳಿದ ವರ್ಗ ವಿದ್ಯಾರ್ಥಿ ನೆರವು, Karnataka Education Loan, Seva Sindhu, Study Abroad Kannada, DBCDC Loan 2025, Foreign University Loan Scheme, Overseas Education Loan
- Gold Price: ಚಿನ್ನದ ಬೆಲೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಮಹಿಳೆಯರು, ಆಭರಣ ಪ್ರಿಯರಿಗೆ ಶಾಕ್! - July 3, 2025
- Adike Bele Vime 2025: ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಲು ಅರ್ಜಿ ಆಹ್ವಾನ! - July 3, 2025
- Free Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಗಾರದ ಅವಕಾಶ ನೀಡಿದ ಕೆನರಾ ಬ್ಯಾಂಕ್! - July 2, 2025