rtgh

ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ ಸರ್ಕಾರ, ಈಗ ಕಟ್ಟಬೇಕು ಹೆಚ್ಚು ಶುಲ್ಕ.

Engineering fees hike in karnataka

Spread the love


Engineering fees hike in karnataka
Engineering fees hike in karnataka

ಇದೀಗ ಇಂಜಿನಿಯರಿಂಗ್ ಸೇರಬೇಕು ಅಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಶುಲ್ಕ ಶೇಕಡಾ 10 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳು 2023-24 ನೇ ಶೈಕ್ಷಣಿಕ ಸಾಲಿನಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಶೇಕಡಾ 10 ರಷ್ಟು ಶುಲ್ಕ ಹೆಚ್ಚಳ ಮಾಡಲು ತೀರ್ಮಾನಿಸಿವೆ.

ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆಗೆ ಮೊದಲು ಶುಲ್ಕ ಹೆಚ್ಚಳದ ಕುರಿತು ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘದೊಂದಿಗೆ ಸಮಾಲೋಚನೆ ನಡೆಸಿದೆ. ಉನ್ನತ ಶಿಕ್ಷಣ ಇಲಾಖೆ ಹಾಗು ಸಂಘದ ಪದಾಧಿಕಾರಿಗಳು ಸಂಧಾನದ ಮೂಲಕ ಶುಲ್ಕ ನಿಗದಿ ಒಪ್ಪಂದ ಮಾಡಿಕೊಂಡಿದ್ದವು.

ಪ್ರಮುಖ ಲಿಂಕ್‌ಗಳು:

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳುAPPLY HERE ಕ್ಲಿಕ್

ಇಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕ ಹೆಚ್ಚಳ

2021-22 ನೇ ಸಾಲಿನಲ್ಲಿ ಎರಡು ವರ್ಷಗಳವರೆಗೆ ಶೇಕಡಾ 25 ರಷ್ಟು ಶುಲ್ಕ ಹೆಚ್ಚಳಕ್ಕೆ ಅನುಮತಿ ಕೋರಿ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಸರ್ಕಾರ ಶೇಕಡಾ 10 ರಷ್ಟು ಶುಲ್ಕ ಹೆಚ್ಚಳ ಮಾಡಲು ಅವಕಾಶ ನೀಡಿತ್ತು. ಈ ವರ್ಷ ಶೇಕಡಾ 10 ರಷ್ಟು ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಶೇಕಡಾ 10 ರಷ್ಟು ಶುಲ್ಕ ಹೆಚ್ಚಳ ಮಾಡಿದಲ್ಲಿ ಈ ವರ್ಷ ಸಿಇಟಿ ಮೂಲಕ ಪ್ರವೇಶ ಪಡೆಯುವ ಇಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕ 71,896 ರೂಪಾಯಿಯಿಂದ 79,085 ರೂಪಾಯಿಗೆ ಹೆಚ್ಚಳವಾಗಲಿದೆ. ಕಾಮೆಡ್ ಕೆ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 1,58,118 ರೂಪಾಯಿಯಿಂದ 1 ,73,929 ರೂಪಾಯಿ ಶುಲ್ಕ ಪಾವತಿಸಬೇಕಿದೆ.

ಪ್ರಮುಖ ಲಿಂಕ್‌ಗಳು:

SSLC ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್
PUC ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಗಳುAPPLY HERE ಕ್ಲಿಕ್

ಇಂಜಿನಿಯರಿಂಗ್ ಕೋರ್ಸ್

ಸಾಕಷ್ಟು ಬಡ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್ ಮಾಡಲು ಬಯಸುತ್ತಾರೆ. ಮೆರಿಟ್ ಮೇಲೆ ಇಂಜಿನಿಯರ್ ಕೋರ್ಸ್ ಮಾಡಲು ಅವಕಾಶ ಸಿಕ್ಕಿದರು ಸಹ ಶುಲ್ಕದ ಹೆಚ್ಚಳದಿಂದಾಗಿ ಅನೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮಾಡಲು ಆಗುವುದುದಿಲ್ಲ. ಇದೀಗ ಮತ್ತೆ ಇಂಜಿನಿಯರಿಂಗ್ ಕೋರ್ಸಿನ ಶುಲ್ಕ ಹೆಚ್ಚಳವಾಗಿದ್ದು ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ.


Spread the love

Leave a Reply

Your email address will not be published. Required fields are marked *