ನಮಸ್ಕಾರ ಸ್ನೇಹಿತರೇ! ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೋರ್ ವೆಲ್ ಕುಡಿಯುವ ನೀರಿನ ಹಾಗೂ ಕೃಷಿ ಚಟುವಟಿಕೆಗಳ ಪ್ರಮುಖ ಮೂಲವಾಗಿದೆ. ಬಹುತೇಕ ಗ್ರಾಮೀಣ ರೈತರು ಬೋರ್ ವೆಲ್ ಮೂಲಕವೇ ತಮ್ಮ ಕೃಷಿ ಚಟುವಟಿಕೆ ನಡೆಸುತ್ತಾರೆ. ಈ ಹಿನ್ನೆಲೆ, ಸರ್ಕಾರವು ‘ಗಂಗಾ ಕಲ್ಯಾಣ ನೀರಾವರಿ ಯೋಜನೆ’ಯನ್ನು ಪರಿಚಯಿಸಿದ್ದು, ರೈತರಿಗೆ ಬೋರ್ ವೆಲ್ ಕೊರೆಸಲು ಆರ್ಥಿಕ ನೆರವು ನೀಡಲಾಗುತ್ತಿದೆ.

ಗಂಗಾ ಕಲ್ಯಾಣ ಯೋಜನೆ
‘ಗಂಗಾ ಕಲ್ಯಾಣ ನೀರಾವರಿ ಯೋಜನೆ’ದ ಮೂಲಕ ರೈತರಿಗೆ ಬೋರ್ ವೆಲ್ ಕೊರೆಸಲು ಸಾಲ ಸೌಲಭ್ಯವನ್ನು ಸರ್ಕಾರ ಒದಗಿಸುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು. ಹೀಗೆ, ರೈತರು ತೋಟಗಾರಿಕೆ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
ಯೋಜನೆಗೆ ಅರ್ಹರು ಯಾರು?
- ಹಿಂದುಳಿದ ವರ್ಗಗಳ ಪ್ರ-1, 2ಎ, 3ಎ, 3ಬಿ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅರ್ಜಿದಾರರು ಕನಿಷ್ಠ 2 ಎಕರೆಗಿಂತಲೂ ಕಡಿಮೆ ಹಾಗೂ ಗರಿಷ್ಠ 5 ಎಕರೆ ಹೊಲವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಹಣಿ ಹಾಗೂ ಫ್ರೂಟ್ಸ್ ಐಡಿ
ಅರ್ಜಿ ಸಲ್ಲಿಸಲು ನಿಗಮಗಳು:
ಅರ್ಜಿದಾರರು ಕೆಳಗಿನ ನಿಗಮಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು:
- ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ಉಪ್ಪಾರ ಅಭಿವೃದ್ಧಿ ನಿಗಮ
- ಮರಾಠ ಅಭಿವೃದ್ಧಿ ನಿಗಮ
- ವಿಶ್ವಕರ್ಮ ಅಭಿವೃದ್ಧಿ ನಿಗಮ
- ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
- ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
- ಸವಿತಾ ಸಮಾಜ ಅಭಿವೃದ್ಧಿ ನಿಗಮ
- ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
- ಒಕ್ಕಲಿಗ ಅಭಿವೃದ್ಧಿ ನಿಗಮ
ಅರ್ಜಿ ಸಲ್ಲಿಸುವ ಸ್ಥಳ:
ಅರ್ಜಿ ಸಲ್ಲಿಸಲು ಆಸಕ್ತರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿಗಾಗಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಿ.
- ಪಿಎಂ ಕಿಸಾನ್ 20ನೇ ಕಂತು ಬಿಡುಗಡೆಗೆ ದಿನಾಂಕ ಫಿಕ್ಸ್! 20ನೇ ಕಂತಿನ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಸಜ್ಜು. - June 25, 2025
- ಶಾಲಾ ಮಕ್ಕಳಿಗೆ ಇ-ಹಾಜರಾತಿ ಕಡ್ಡಾಯ: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ನವ ಯುಗದ ಆರಂಭ! - June 25, 2025
- SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ..!! ಅರ್ಜಿ ಹೇಗೆ ಹಾಕಬೇಕು ಗೊತ್ತಾ? - June 25, 2025
ಗಣಪತಿ. ಅ. ಮಾಳಗಿ
ಕರ್ನಾಟಕ ಸರ್ಕಾರಅಭಿವೃದ್ಧಿ ನಿಗಮ