rtgh

ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌, ಚಂದ್ರನ ಮೇಲೆ ಕತ್ತಲು, ಪ್ರಜ್ಞಾನ್ ರೋವರ್ ಏನಾಗಲಿದೆ ಗೊತ್ತೇ? ಇಸ್ರೋ ಮಾಹಿತಿ


Hello ಸ್ನೇಹಿತರೇ, ಪ್ರಗ್ಯಾನ್ ರೋವರ್ ಈಗ ಆತ ನಿದ್ರೆಗೆ ಜಾರಿದ್ದಾನೆ ಎಂಬುದಾಗಿ ಇಸ್ರೋದ ಅಧಿಕಾರಿಗಳು ಹೇಳಿಕೊಂಡಿದ್ದಾರೆ ಬನ್ನಿ ಅದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

handrayaan 3 rover completed its assignments and set into sleep mode
handrayaan 3 rover completed its assignments and set into sleep mode

what happened to vikram lander after 14 days

 ನಮ್ಮ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬ ಭಾರತೀಯರು ಕೂಡ ಹೆಮ್ಮೆಪಡುವಂತಹ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹೌದು ಚಂದ್ರನ ಮೇಲೆ ಕಾಲಿಟ್ಟಿರುವಂತಹ ನಾಲ್ಕನೇ ದೇಶದ ರೂಪದಲ್ಲಿ ನಮ್ಮ ಭಾರತ ದೇಶ ಇದೆ ಎಂದರೆ ಅದಕ್ಕಾಗಿ ನಾವು ನಮ್ಮ ಇಸ್ರೋ ವಿಜ್ಞಾನಿಗಳನ್ನು(Isro Scientists) ಪ್ರಶಂಶಿಸಲೇಬೇಕು. ಅದರಲ್ಲೂ ವಿಶೇಷವಾಗಿ ಚಂದ್ರನ ದಕ್ಷಿಣ ಧ್ರುವಕ್ಕೆ ಸೇಫ್ ಆಗಿ ಕಾಲಿಟ್ಟಂತಹ ಮೊದಲ ದೇಶವಾಗಿ ನಾವು ಕಾಣಿಸಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಕೂಡ ನಾವು ಎದೆ ಉಬ್ಬಿಸಿಕೊಂಡು ಗರ್ವದಿಂದ ಹೇಳಿಕೊಳ್ಳಬೇಕಾಗಿದೆ.

chandrayaan 3 vikram lander going to sleep in kannada

ಪ್ರಜ್ಞಾನ್ ರೋವರ್

ಚಂದ್ರನ (Moon) ಮೇಲ್ಮೈಯನ್ನು ಯಶಸ್ವಿಯಾಗಿ ಮುಟ್ಟಿದ ದಿನಗಳ ನಂತರ ಚಂದ್ರಯಾನ-3 ರ (Chandrayaan-3) ಪ್ರಗ್ಯಾನ್ ರೋವರ್ (Pragyan Rover) 100 ಮೀಟರ್‌ಗಳಷ್ಟು ಕ್ರಮಿಸಿದೆ. ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಈಗ ವಿಕ್ರಮ್‌ ಲ್ಯಾಂಡರ್‌ (Vikram Lander) ಮತ್ತು ಪ್ರಗ್ಯಾನ್ ರೋವರನ್ನು ಸ್ಲೀಪ್‌ ಮೋಡ್‌ಗೆ (Sleep Mode) ಹೊಂದಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ರೋವರನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ. ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್‌ಗಳಿಂದ ದತ್ತಾಂಶವು ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತದೆ ಎಂದು ಇಸ್ರೋ (ISRO) ಟ್ವೀಟ್‌ ಮಾಡಿ ಮಾಹಿತಿ ನೀಡಿದೆ. 

ಪ್ರಸ್ತುತ, ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೌರ ಫಲಕವು ಸೆಪ್ಟೆಂಬರ್ 22, 2023 ರಂದು ನಿರೀಕ್ಷಿತ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸಲು ಆಧಾರಿತವಾಗಿದೆ. ರಿಸೀವರ್ ಅನ್ನು ಇರಿಸಲಾಗಿದೆ. ಅದು ಯಶಸ್ವಿಯಾಗಿ ಮತ್ತೊಂದು ಕಾರ್ಯಯೋಜನೆ ಮಾಡುವ ಆಶಯ ಹೊಂದಲಾಗಿದೆ. ಇಲ್ಲದಿದ್ದರೆ, ಅದು ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ತಿಳಿಸಿದೆ.

ರಾತ್ರಿಯಾದಾಗ ಚಂದ್ರನ ಮೇಲ್ಮೈನಲ್ಲಿ – 230 ಡಿಗ್ರಿ ತಾಪಮಾನ ಇರುತ್ತದೆ. ಈ ಸಂದರ್ಭದಲ್ಲಿ ಸಂಶೋಧನೆ ಅಸಾಧ್ಯ. ಹೀಗಾಗಿ ರೋವರನ್ನು ಇಸ್ರೋ ಸುರಕ್ಷಿತವಾಗಿ ನಿಲುಗಡೆ ಮಾಡಿದೆ. 

ಇದಕ್ಕೂ ಮೊದಲು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು, “ಒಳ್ಳೆಯ ಸುದ್ದಿ ಏನೆಂದರೆ, ಲ್ಯಾಂಡರ್‌ನಿಂದ ರೋವರ್‌ ಸುಮಾರು 100 ಮೀಟರ್‌ಗಳಷ್ಟು ಚಲಿಸಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ರೋವರ್‌, ಲ್ಯಾಂಡರ್‌ ನಿದ್ರೆ ಮಾಡುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಲಿದ್ದೇವೆ. ಏಕೆಂದರೆ ಅವೆರಡು ಮುಂಬರುವ ರಾತ್ರಿಯನ್ನು ತಡೆದುಕೊಳ್ಳಬೇಕಾಗುತ್ತದೆ” ಎಂದು ತಿಳಿಸಿದ್ದರು.

ವಿಕ್ರಮ್‌ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಇನ್ನೂ ಕಾರ್ಯನಿರ್ವಹಿಸುತ್ತಿವೆ. ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ತಂಡವು ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದರು.

ಭಾರತದ ಚಂದ್ರಯಾನ-3, ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಮೊದಲ ದೇಶ ಎಂಬ ಇತಿಹಾಸವನ್ನು ಸೃಷ್ಟಿಸಿತು. ಆ ಮೂಲಕ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಸಾಧಿಸಿದ ಅಮೆರಿಕ, ರಷ್ಯಾ ಮತ್ತು ಚೀನಾ, ಜಪಾನ್‌ ದೇಶಗಳ ಸಾಲಿಗೆ ಭಾರತ ಸೇರಿತು.


Leave a Reply

Your email address will not be published. Required fields are marked *