ಕೆಟ್ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಅ. 5ರಿಂದ ನ. 19ರವರೆಗೆ ಪಂದ್ಯಾವಳಿ ನಡೆಯಲಿದೆ. ಭಾರತವೇ ಆತಿಥ್ಯ ವಹಿಸಿರುವ ಈ ಪಂದ್ಯಾವಳಿಯಲ್ಲಿ ಭಾರತ ತಂಡ, ಅ. 8ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಅಂದಹಾಗೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಯ ಐದು ಪಂದ್ಯಗಳು ನಡೆಯಲಿವೆ. ಅದರಲ್ಲಿ ಪಾಕಿಸ್ತಾನ 2 ಪಂದ್ಯಗಳನ್ನಾಡಲಿದ್ದು, ಭಾರತ ಕೇವಲ ಒಂದು ಪಂದ್ಯ ಆಡಲಿದೆ.
chinnaswamy stadium matches in 2023 world cup
ಈ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿ ಹೊರಬಿದ್ದಿದೆ. ಅ. 5ರಿಂದ ಶುರುವಾಗುವ ಪಂದ್ಯಾವಳಿಯು ನ. 19ರಂದು ನಡೆಯಲಿದೆ. ನ. 19ರಂದು ಅಹ್ಮದಾಬಾದ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ಇತಿಶ್ರೀ ಹಾಡಲಾಗುತ್ತದೆ.
ವೇಳಾಪಟ್ಟಿಯ ಹೈಲೈಟ್ಸ್ ಏನೆಂದರೆ, ಅ. 5ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ – ನ್ಯೂಜಿಲೆಂಡ್ ಸೆಣಸಲಿವೆ. ಅ. 8ರಂದು ಭಾರತದ ಮೊದಲ ಪಂದ್ಯ ಆರಂಭವಾಗಲಿದೆ. ಆ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯಲಿದೆ. ಅ. 15ರಂದು ಹೈ ವೋಲ್ಜೇಜ್ ಪಂದ್ಯವಾದ ಇಂಡೋ – ಪಾಕ್ ಪಂದ್ಯ ಅಹ್ಮದಾಬಾದ್ ನಲ್ಲಿ ನಡೆಯಲಿದೆ. ನ. 15ರಂದು ಪಂದ್ಯಾವಳಿಯ ಮೊದಲ ಸೆಮಿಫೈನಲ್, 16ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿವೆ.
ವಿಶ್ವಕಪ್ 2023ಕ್ಕೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್
ವಿಶ್ವಕಪ್’ನಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ
- ಅಕ್ಟೋಬರ್ 8: ಭಾರತ ವಿರುದ್ಧ ಆಸ್ಟ್ರೇಲಿಯಾ, ಚೆನ್ನೈ
- ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ, ನವದೆಹಲಿ
- ಅಕ್ಟೋಬರ್ 14: ಭಾರತ ವಿರುದ್ಧ ಪಾಕಿಸ್ತಾನ, ಅಹಮದಾಬಾದ್
- ಅಕ್ಟೋಬರ್ 19: ಭಾರತ ವಿರುದ್ಧ ಬಾಂಗ್ಲಾದೇಶ, ಪುಣೆ
- ಅಕ್ಟೋಬರ್ 22: ಭಾರತ vs ನ್ಯೂಜಿಲೆಂಡ್, ಧರ್ಮಶಾಲಾ
- ಅಕ್ಟೋಬರ್ 29: ಭಾರತ vs ಇಂಗ್ಲೆಂಡ್, ಲಕ್ನೋ
- ನವೆಂಬರ್ 2: ಭಾರತ ವಿರುದ್ಧ ಶ್ರೀಲಂಕಾ, ಮುಂಬೈ
- ನವೆಂಬರ್ 5: ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, ಕೋಲ್ಕತ್ತಾ
- ನವೆಂಬರ್ 12: ಭಾರತ ವಿರುದ್ಧ ನೆದರ್ಲ್ಯಾಂಡ್ಸ್, ಬೆಂಗಳೂರು
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಪಂದ್ಯಗಳು
ಕನ್ನಡಿಗರ ಹೆಮ್ಮೆಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬುದಕ್ಕೆ ಉತ್ತರ ಇಲ್ಲಿದೆ. ಈ ಬಾರಿಯ ವಿಶ್ವಕಪ್ ನ ಐದು ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಅವುಗಳಲ್ಲಿ ಟೀಂ ಇಂಡಿಯಾ ತಂಡ ಕೇವಲ 1 ಪಂದ್ಯ ಮಾತ್ರ ಆಡಲಿದೆ.
ನ. 11ರಂದು ನಡೆಯಲಿರುವ ಪಂದ್ಯದಲ್ಲಿ ಭಾರತದ ಪಂದ್ಯ ನಡೆಯಲಿದ್ದು ಆ ಪಂದ್ಯದಲ್ಲಿ ಟೂರ್ನಿಯ ಮೊದಲ ಕ್ವಾಲಿಫೈಯರ್ ಸ್ಥಾನಮಾನ ಪಡೆದ ತಂಡವೊಂದು ಮುಖಾಮುಖಿಯಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಯ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿದ್ದು, ಒಂದು ಪಂದ್ಯ ಮಾತ್ರ ಹಗಲಲ್ಲಿ ನಡೆಯುವ ಪಂದ್ಯವಾಗಲಿದೆ. ಅವುಗಳ ವೇಳಾಪಟ್ಟಿ ಹೀಗಿದೆ.
- ಅ. 20: ಆಸ್ಟ್ರೇಲಿಯಾ – ಪಾಕಿಸ್ತಾನ
- ಅ. 26: ಇಂಗ್ಲೆಂಡ್ – ಕ್ವಾಲಿಫೈಯರ್ 2
- ನ. 4 – ನ್ಯೂಜಿಲೆಂಡ್ – ಪಾಕಿಸ್ತಾನ (ಹಗಲು ಪಂದ್ಯ)
- ನ. 9 – ನ್ಯೂಜಿಲೆಂಡ್ – ಕ್ವಾಲಿಫೈಯರ್ 2
- ನ. 11 – ಭಾರತ ಮತ್ತು ಕ್ವಾಲಿಫೈಯರ್ 1
ODI World Cup 2023 schedule: ಅ.15 ರಂದು ಭಾರತ-ಪಾಕಿಸ್ತಾನ ಪಂದ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ಚಿನ್ನಸ್ವಾಮಿ ಹಾಗೂ ಏಕದಿನ ವಿಶ್ವಕಪ್ ಗೆ ಇರುವ ನಂಟು
ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಳಿಗೂ ಅವಿನಾಭಾವ ನಂಟು ಇದೆ. ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಸಂಪೂರ್ಣ ಆತಿಥ್ಯದಡಿ ಅಥವಾ ಇದರ ದೇಶಗಳ ಕ್ರಿಕೆಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಾಗಿರುವ ಎಲ್ಲಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಕೆಲವು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ.
ಇತಿಹಾಸವನ್ನು ಕೆದಕಿ ನೋಡಿದರೆ, ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲು ಆತಿಥ್ಯ ವಹಿಸಿದ್ದು 1986ರಲ್ಲಿ. ಅ. 14ರಂದು ಭಾರತ- ನ್ಯೂಜಿಲೆಂಡ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತ 16 ರನ್ ಜಯ ಸಾಧಿಸಿತ್ತು.
ಆನಂತರ, 1996ರ ವಿಶ್ವಕಪ್ ನ ಮಾ. 9ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯ ಇದೇ ಕ್ರೀಡಾಂಗಣದಲ್ಲೇ ನಡೆದಿತ್ತು. ಭಾರೀ ರೋಚಕವಾಗಿದ್ದ ಆ ಪಂದ್ಯವನ್ನು ಭಾರತ 39 ರನ್ ಗಳಿಂದ ಗೆದ್ದಿದ್ದು. ಭಾರತ ತಂಡದ ಅದ್ಭುತ ಪ್ರದರ್ಶನದ ಆ ಪಂದ್ಯವನ್ನು, ಆ ಪಂದ್ಯದಲ್ಲಿ ವೇಗಿ ವೆಂಕಟೇಶ್ ಪ್ರಸಾದ್ ತೋರಿದ ರೋಷಾವೇಷದ ಆಟವನ್ನು ಯಾರೂ ಮರೆಯಲಾರರು.
2011ರ ವಿಶ್ವಕಪ್: ಐದು ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಚಿನ್ನಸ್ವಾಮಿ
2011ರ ವಿಶ್ವಕಪ್ ನಲ್ಲಿ ನಾಲ್ಕು ಪಂದ್ಯಗಳು ಚಿನ್ನಸ್ವಾಮಿಯಲ್ಲೇ ನಡೆದಿದ್ದವು. ಅವೆಲ್ಲವೂ ಗ್ರೂಪ್ ಹಂತದ ಪಂದ್ಯಗಳೇ. ಫೆ. 27ರಂದು ಭಾರತ – ಇಂಗ್ಲೆಂಡ್, ಮಾ. 2ರಂದು ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವೆ, ಮಾ. 6ರಂದು ಐರ್ಲೆಂಡ್ – ಭಾರತ, ಮಾ. 13ರಂದು ಆಸ್ಟ್ರೇಲಿಯಾ – ಕೀನ್ಯಾ, ಮಾ. 16ರಂದು ಕೆನಡಾ – ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆದಿತ್ತು.