Hello ಸ್ನೇಹಿತರೇ, ಏಷ್ಯಾಕಪ್ ಟೂರ್ನಿಯ ಮೂಲಕ ಭಾರತ ತಂಡ ವಿಶ್ವಕಪ್‌ಗೆ ಕೊನೆಯ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಏಷ್ಯಾದ ಬಲಿಷ್ಠ ತಂಡಗಳ ಜೊತೆಗೆ ಕಾದಾಟ ನಡೆಸುತ್ತಿದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಇನ್ನು ಇದೇ ಸಂದರ್ಭದಲ್ಲಿ ವಿಶ್ವಕಪ್‌ನಂಥಾ ಟೂರ್ನಿಗಾಗಿ ತಂಡದ ಸಂಯೋಜನೆಯನ್ನು ಅಂತಿಮಗೊಳಿಸಲು ಇದು ಅತ್ಯುತ್ತಮ ಸಿದ್ಧತೆಯೂ ಆಗಿದೆ ಎನ್ನುವುದು ಗಮನಾರ್ಹ.
odi world cup 2023 india cup winning prediction in kannada
ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಈಗಾಗಲೇ ತನ್ನ 15ರ ಪಡೆಯನ್ನು ಪ್ರಕಟಿಸಿದೆ. ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿರುವ ರೋಹಿತ್ ಶರ್ಮಾ ಪಡೆ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿದೆ ಎನ್ನುವುದು ನಿಸ್ಸಂಶಯ. ಅದರಲ್ಲೂ ಟೂರ್ನಿ ಭಾರತದಲ್ಲಿಯೇ ನಡೆಯುತ್ತಿರುವುದು ಭಾರತ ತಂಡದ ಆತ್ಮವಿಶ್ವಾಸಕ್ಕೆ ಮತ್ತೊಂದು ಕಾರಣ.
ಆದರೆ ಭಾರತ ತಂಡದಲ್ಲಿ ಕೆಲ ನ್ಯೂನ್ಯತೆಗಳು ಕಣ್ಣಿಗೆ ರಾಚುವಂತಿದೆ. ಅವುಗಳನ್ನು ಸರಿಪಡಿಸಿಕೊಳ್ಳದ ಹೊರತು ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲುವುದು ಕೂಡ ಕಷ್ಟ. ಹಾಗಾದರೆ ಭಾರತ ತಂಡದ ವಿಶ್ವಕಪ್ ಕನಸನ್ನೇ ಭಗ್ನಗೊಳಿಸಬಹುದಾದ ಐದು ಸಮಸ್ಯೆಗಳು ಯಾವುದು? ಇಲ್ಲಿದೆ ಮಾಹಿತಿ
ಎಡಗೈ ದಾಂಡಿಗರನ್ನು ಹಿನ್ನೆಟ್ಟಿಸಲು ಬಲಗೈ ಸ್ಪಿನ್ನರ್‌ಗಳೇ ಇಲ್ಲ!
ಟೀಮ್ ಇಂಡಿಯಾದ ಸ್ಪಿನ್ ವಿಭಾಗದಲ್ಲಿ ಹೆಚ್ಚು ವೈವಿಧ್ಯತೆ ಇಲ್ಲದಿರುವುದು ತಂಡಕ್ಕೆ ಭಾರೀ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಮುಖ್ಯ ಸ್ಪಿನ್ನರ್ ಆಗಿ ಕುಲ್‌ದೀಪ್ ಯಾದವ್ ಅವಕಾಶ ಪಡೆದುಕೊಂಡಿದ್ದು ಉತ್ತಮ ಲಯದಲ್ಲಿರುವುದು ತಂಡಕ್ಕೆ ಖಂಡಿತಾ ನೆರವಾಗಲಿದೆ. ಆದರೆ ವಿಶ್ವಕಪ್‌ಗೆ ಆಯ್ಕೆಯಾಗಿರುವ ಇನ್ನಿಬ್ಬರು ಆಲ್‌ರೌಂಡರ್ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಒಂದೇ ರೀತಿಯ ಕೌಶಲ್ಯವನ್ನು ಹೊಂದಿದವರಾಗಿದ್ದಾರೆ.
ಅದೂ ಅಲ್ಲದೆ ಈ ಮೂವರು ಸ್ಪಿನ್ನರ್‌ಗಳು ಕೂಡ ಎಡಗೈ ಸ್ಪಿನ್ನರ್‌ಗಳೇ ಆಗಿರುವುದರಿಂದಾಗಿ ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಪ್ರಮುಖ ತಂಡಗಳು ಬಲಿಷ್ಠವಾದ ಎಡಗೈ ಆಟಗಾರರನ್ನು ಹೊಂದಿದ್ದು ಅವರನ್ನು ಕಟ್ಟಿ ಹಾಕಲು ಬಲಗೈ ಸ್ಪಿನ್ನರ್‌ನ ಅಗತ್ಯ ಖಂಡಿತಾ ಇತ್ತು. ಇದೀಗ ತಂಡದ ಆಯ್ಕೆ ಆಗಿರುವ ಕಾರಣ ಈ ಆಟಗಾರರು ತಮ್ಮ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲೇಬೇಕಿದೆ.
ಎಡಗೈ ವೇಗಿಗಳ ವಿರುದ್ಧ ಮುಂದುವರಿದ ಅಗ್ರಕ್ರಮಾಂಕದ ಪರದಾಟ
ಇನ್ನು ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರು ಎಡಗೈ ವೇಗಿಗಳ ವಿರುದ್ಧ ಸತತವಾಗಿ ಹಿನ್ನಡೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ಏಷ್ಯಾಕಪ್‌ನಲ್ಲಿಯೂ ಅದು ಮುಂದುವರಿದಿತ್ತು. ತಂಡದ ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯಂತಾ ಅನುಭವಿ ಆಟಗಾರರು ಹಾಗೂ ಶುಬ್ಮನ್ ಗಿಲ್ ಕೂಡ ಇದ್ದಾರೆ. ಈ ಸಮಸ್ಯೆಯಿಂದ ಹೊರಬರುವುದು ಬಹಳ ಮುಖ್ಯವಾಗಿದೆ. ಇಲ್ಲವಾದರೆ ಭಾರತ ತಂಡದ ಮಧ್ಯಮ ಕ್ರಮಾಂಕದ ಮೇಲೆ ಅನಗತ್ಯ ಒತ್ತಡ ಬೀಳಲಿದೆ. ಇದು ಫಲಿತಾಂಶದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ನಿಶ್ಚಿತ.
ಗಾಯಗೊಂಡಿರುವ ಆಟಗಾರರಿಗೆ ನೇರವಾಗಿ ಅವಕಾಶ
ಇನ್ನು ಟೀಮ್ ಇಂಡಿಯಾ ಕೆಲ ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡು ನೇರವಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಆಟಗಾರರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಡುವುದಕ್ಕೂ ಮುನ್ನ ಅದಕ್ಕೆ ಪೂರ್ವಾಭ್ಯಾಸಗಳನ್ನು ನಡೆಸುತ್ತಾರೆ. ಶ್ರೇಯಸ್ ಐಯ್ಯರ್, ಕೆಎಲ್ ರಾಹುಲ್ ಅವರಂತಾ ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡಂತೆಯೇ ನೇರವಾಗಿ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ವಿಶ್ವಕಪ್‌ನ ಆರಂಭಕ್ಕೆ ಇನ್ನು ಒಂದು ತಿಂಗಳಿಗೂ ಕಡಿಮೆ ಸಮಯವಿದ್ದು ಇಂಥಾ ಸಂದರ್ಭದಲ್ಲಿ ಈ ಆಟಗಾರರ ಲಯ, ಪ್ಯಾಚ್ ಫಿಟ್‌ನೆಸ್ ಎಲ್ಲವೂ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿದೆ.
ವಿಕೆಟ್ ಕೀಪರ್ ಆಗಿ ರಾಹುಲ್ ಫಿಟ್‌ನೆಸ್ ಅನುಮಾನ
ಇನ್ನು ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇಂಥಾ ಸಂದರ್ಭದಲ್ಲಿ ರಾಹುಲ್‌ಗೆ ಇಶಾನ್ ಕಿಶನ್ ಬದಲಿಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ನೀಡಿದರೆ ಅದನ್ನು ನಿರ್ವಹಿಸಲು ಸಂಪೂರ್ಣವಾಗಿ ಸಮರ್ಥವಾಗಿರುವುದು ಅನುಮಾನ. ಬ್ಯಾಟರ್ ಆಗಿ ರಾಹುಲ್ ಮಿಂಚಿದರೂ ವಿಕೆಟ್ ಕೀಪರ್ ಆಗಿ ಅವರಿಂದ ಪೂರ್ಣ ಸಾಮರ್ಥ್ಯ ಪ್ರದರ್ಶಿಸುವುದು ಅಸಾಧ್ಯ. ಇದು ಕೂಓಡ ತಂಡಕ್ಕೆ ಹಿನ್ನಡೆಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಫೀಲ್ಡಿಂಗ್‌ನಲ್ಲಿ ಸತತ ವೈಫಲ್ಯ
ಇನ್ನು ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್ ಕೂಡ ವಿಶ್ವಕಪ್‌ನಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಗಬಹುದಾದ ಮತ್ತೊಂದು ಅಂಶ. 2021ರ ಈಚೆಗೆ ಭಾರತ ತಂಡದ ಫೀಲ್ಡಿಂಗ್ ಕ್ಷಮತೆ ಅತ್ಯಂತ ಕಳಪೆಯಾಗಿದೆ ಎನ್ನುವುದನ್ನು ಅಂಕಿಅಂಶಗಳು ಬಹಿರಂಗಪಡಿಸುತ್ತಿದೆ. ಇತ್ತೀಚೆಗೆ ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿಯೂ ಭಾರತ ಫೀಲ್ಡಿಂಗ್ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಫೀಲ್ಡಿಂಗ್ ವಿಭಾಗದಲ್ಲಿ ಭಾರತ ಸರ್ವ ಪ್ರಯತ್ನವನ್ನು ಮಾಡಿದರೆ ಮಾತ್ರವೇ ತಂಡಕ್ಕೆ ಯಶಸ್ಸು ಸಾಧ್ಯ.
ಅರ್ಹತೆಯಿಲ್ಲದಿದ್ದರೂ ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ 3 ಕ್ರಿಕೆಟಿಗರು ಇವರು
ವೇಗದ ಬೌಲರ್ ಶಾರ್ದೂಲ್ ಠಾಕೂರ್:
ವಿಶ್ವಕಪ್ ಭಾರತದಲ್ಲಿ ನಡೆಯಲಿರುವ ಕಾರಣ ಇಲ್ಲಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ಗಳು ಎನ್ನುವುದು ತಿಳಿಯದ ಸಂಗತಿಯೇನಲ್ಲ. ಭಾರತ ಈ ವಿಶ್ವಕಪ್ ತಂಡದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದೆ. ಇವರನ್ನು ಹೊರತುಪಡಿಸಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ವೇಗದ ಬೌಲಿಂಗ್ ವಿಭಾಗಕ್ಕೆ ನೆರವು ನೀಡುವ ಸಾಮರ್ಥ್ಯ ಹೊಂದಿದ್ದರೂ ನಾಲ್ವರು ಪೂರ್ಣಕಾಲಿಕ ವೇಗಿಗಳನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯವಾಗಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳು ಈ ಸಂಯೋಜನೆಯಲ್ಲಿ ತಂಡ ಕಣಕ್ಕಿಳಿಯುತ್ತದೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾಗ ಶಾರ್ದೂಲ್‌ಗೆ ಹೆಚ್ಚಿನ ಅವಕಾಶ ದೊರೆಯುವುದು ಸಾಧ್ಯವಿಲ್ಲ. ಹಾಗಿದ್ದರೂ ಶಾರ್ದೂಲ್ ಸ್ವಲ್ಪ ಪ್ರಮಾಣದಲ್ಲಿ ಬ್ಯಾಟ್‌ನಿಂದಲೂ ಕೊಡುಗೆ ನೀಡಬಲ್ಲರು ಎನ್ನುವ ಕಾರಣಕ್ಕೆ ಅವರಿಗೆ ತಂಡದಲ್ಲಿ ಅವಕಾಶ ದೊರೆತಿದೆ. ಆದರೆ ಅವರಿಗಾಗಿ ಪ್ರಸಿದ್ಧ್ ಕೃಷ್ಣ ಅವರಂಥಾ ಉತ್ತಮ ಹಾಗೂ ಅರ್ಃ ಬೌಲರ್ ಅವಕಾಶ ಕಳೆದುಕೊಳ್ಳಬೇಕಾಯಿತು. ಎಲ್ಲಾ ಮುಗಿದಿಲ್ಲ! : ಈ 3 ಕ್ರಿಕೆಟಿಗರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನೂ ಇದೆ ಅವಕಾಶ!!
ಆಲ್‌ರೌಂಡರ್ ಅಕ್ಷರ್ ಪಟೇಲ್ ಅಕ್ಷರ್ ಪಟೇಲ್
ಇತ್ತೀಚೆಗೆ ಎಲ್ಲಾ ಮಾದರಿಯಲ್ಲಿಯೂ ಭಾರತ ತಂಡದ ಭಾಗವಾಗಿದ್ದರಾದರೂ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಅದಕ್ಕೆ ಕಾರಣ ರವೀಂದ್ರ ಜಡೇಜಾ. ಈ ಇಬ್ಬರು ಆಟಗಾರರು ಕೂಡ ಕೌಶಲ್ಯದ ವಿಚಾರವಾಗಿ ಎಲ್ಲಾ ವಿಭಾಗದಲ್ಲಿಯೂ ಸಮಾನವಾಗಿದ್ದಾರೆ. ಆದರೆ ರವೀಂದ್ರ ಜಡೇಜಾ ಹಲವಾರು ಸಂದರ್ಭಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಕಾರಣದಿಂದಾಗಿ ಅವರನ್ನು ಮೊದಲ ಆದ್ಯತೆಯಾಗಿಯೇ ಪರಿಗಣಿಸಲಾಗುತ್ತದೆ. ಇನ್ನು ಈ ಇಬ್ಬರು ಆಟಗಾರರಿಗೂ ಕೂಡ ಜೊತೆಯಾಗಿ ಆಡುವ ಬಳಗದಲ್ಲಿ ಸ್ಥಾನವನ್ನು ನೀಡುವುದು ಕಷ್ಟ ಸಾಧ್ಯ. ಹಾಗಾಗಿಯೇ ಅಕ್ಷರ್ ಪಟೇಲ್ ಬಹುತೇಕ ಬೆಂಚ್ ಕಾಯಬೇಕಾಗುವ ಸಾಧ್ಯತೆಯಿದೆ. ಇವರ ಬದಲಿಗೆ ಪೂರ್ಣಪ್ರಮಾಣದ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಅಥವಾ ಯುಜುವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಬಹುದಾಗಿತ್ತು.
ಸೂರ್ಯಕುಮಾರ್ ಯಾದವ್
ಏಕದಿನ ಮಾದರಿಯಲ್ಲಿ 55.71ರಷ್ಟು ಸರಾಸರಿಯನ್ನು ಹೊಂದಿರುವ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟು 50 ಓವರ್‌ಗಳ ಆಟದಲ್ಲಿ ಸತತವಾಗಿ ವೈಫಲ್ಯ ಅನುಭವಿಸಿರುವ 24.33ರ ಸರಾಸರಿ ಹೊಂದಿರುವ ಸೂರ್ಯಕುಮಾರ್ ಯಾದವ್‌ಗೆ ಅವಕಾಶ ನೀಡಿರುವುದು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸೂರ್ಯಕುಮಾರ್ ಯಾದವ್‌ಗೆ ಸಾಕಷ್ಟು ಅವಕಾಶಗಳನ್ನು ಸತತವಾಗಿ ನೀಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಿದ್ದರೂ ಕೂಡ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾಗಿಯೇ ಸೂರ್ಯಕುಮಾರ್ ಯಾದವ್ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ಅದೃಷ್ಟವನ್ನು ಹೊಂದಿದ್ದಾರೆ ಎಂದರೆ ತಪ್ಪಿಲ್ಲ.