rtgh

ವಾಟ್ಸ್‌ಆಪ್‌ಗೆ ಬಂತು ಹೊಸ ಸೂಪರ್‌ ಫೀಚರ್‌.! ಇನ್ಮುಂದೆ ಸ್ಕ್ರೀನ್‌ ಶೇರ್ ಮಾಡಬಹುದು, ನಿಮ್ಮ ವಾಟ್ಸಾಪ್‌ನಲ್ಲಿ ಸ್ಕ್ರೀನ್ ಶೇರಿಂಗ್ ಫೀಚರ್


Spread the love

ಮೆಟಾ ಒಡೆತನದ ಮೆಸೇಜಿಂಗ್‌ ಅಪ್ಲಿಕೇಷನ್‌ ವಾಟ್ಸ್‌ಆಪ್‌ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ಇನ್ನು ಮುಂದೆ ವಿಡಿಯೊ ಕಾಲ್‌ನಲ್ಲಿ ಸ್ಕ್ರೀನ್‌ ಶೇರಿಂಗ್‌ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ಫೀಚರ್‌ಗಳನ್ನು ಹೊಸದಾಗಿ ಪರಿಚಯಿಸಿದೆ.

whatsapp screen sharing feature in kannada
whatsapp screen sharing feature in kannada

how to use whatsapp screen sharing feature kannada

ಆಗಾಗ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಜನರನ್ನು ಇನ್ನಷ್ಟು ಹತ್ತಿರ ಸೆಳೆಯುತ್ತಿರುವ ವಾಟ್ಸ್‌ಆಪ್‌ ಮೆಸೇಜ್‌ ಅಪ್ಲಿಕೇಷನ್‌ ಇದೀಗ ಇನ್ನೂ ಹಲವು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿದೆ.

ಇನ್ನು ಮುಂದೆ ವಾಟ್ಸ್‌ಆಪ್‌ ವಿಡಿಯೊ ಕಾಲ್‌ನಲ್ಲಿ ಸ್ಕ್ರೀನ್‌ ಶೇರಿಂಗ್‌ ಆಯ್ಕೆ ಇರಲಿದೆ. ಮಾತ್ರವಲ್ಲ ಲ್ಯಾಂಡ್‌ ಸ್ಕೇಪ್‌ ಮೋಡ್‌ ಆಯ್ಕೆ ಕೂಡ ಲಭ್ಯವಿರಲಿದೆ. ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದಾರೆ ಮೆಟಾ ಸಂಸ್ಥೆಯ ಸಿಇಓ ಮಾರ್ಕ್‌ ಜುಕರ್‌ಬರ್ಗ್‌.

ʼಇನ್ನು ಮುಂದೆ ನೀವು ವಾಟ್ಸ್‌ಆಪ್‌ ವಿಡಿಯೊ ಕಾಲ್‌ನಲ್ಲಿ ಸ್ಕ್ರೀನ್‌ ಶೇರಿಂಗ್‌ ಆಯ್ಕೆಯನ್ನು ಪಡೆಯಲಿದ್ದೀರಿʼ ಎಂದು ಜುಕರ್‌ಬರ್ಗ್‌ ಫೇಸ್‌ಬುಕ್ ಪೋಸ್ಟ್‌ ಮಾಡಿದ್ದರು.

ಏನಿದು ಸ್ಕ್ರೀನ್‌ ಶೇರಿಂಗ್‌ ಆಯ್ಕೆ?

ಸ್ಕ್ರೀನ್‌ ಶೇರಿಂಗ್‌ ಆಯ್ಕೆಯು ಬಳಕೆದಾರರಿಗೆ ವಿಡಿಯೊ ಕರೆ ಮಾಡುವಾಗಲೇ ಲೈವ್‌ ವ್ಯೂವ್‌ ಕೂಡ ಶೇರ್‌ ಮಾಡುವ ಆಯ್ಕೆಯನ್ನು ಒದಗಿಸುತ್ತದೆ. ವಿಡಿಯೊ ಕರೆ ಮಾಡುವಾಗ ನಿಮ್ಮ ಸ್ಕ್ರೀನ್‌ ಮೇಲೆ ಶೇರ್‌ ಐಕಾನ್‌ ಕಾಣಿಸುತ್ತದೆ. ಇದನ್ನು ಕ್ಲಿಕ್‌ ಮಾಡಿ ನಿಮಗೆ ಬೇಕಾಗ ಅಪ್ಲಿಕೇಶನ್‌ ಅಥವಾ ಸಂಪೂರ್ಣ ಸ್ಕ್ರೀನ್‌ ಅನ್ನು ಶೇರ್‌ ಮಾಡಬಹುದಾಗಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ʼಇಷ್ಟೇ ಅಲ್ಲದೆ ಇನ್ನು ಮುಂದೆ ವಿಡಿಯೊ ಕಾಲ್‌ನಲ್ಲಿ ಲ್ಯಾಂಡ್‌ ಸ್ಕೇಪ್‌ ಆಯ್ಕೆಯನ್ನೂ ನೀವು ಎಂಜಾಯ್‌ ಮಾಡಬಹುದುʼ ಎಂದು ಮೆಟಾ ಹೇಳಿಕೊಂಡಿದೆ.

ವಿಡಿಯೊ ಮೆಸೇಜ್‌ ರೆಕಾರ್ಡ್‌ ಹಾಗೂ ಶೇರ್‌ ಮಾಡುವ ಆಯ್ಕೆ

ಜುಲೈ ಅಂತ್ಯದ ವೇಳೆ ಜುಕರ್‌ಬರ್ಗ್‌ ವಾಟ್ಸ್‌ಆಪ್‌ನಲ್ಲಿ ಒಂದಿಷ್ಟು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿದ್ದರು. ಇದು ಬಳಕೆದಾರರಿಗೆ ಶಾರ್ಟ್‌ ವಿಡಿಯೊ ಮೆಸೇಜ್‌ಗಳನ್ನು ಕಳುಹಿಸುವ ಆಯ್ಕೆಯನ್ನು ಒದಗಿಸಿತ್ತು.

ಈ ಬಗ್ಗೆ ವಿಡಿಯೊವೊಂದನ್ನು ಮಾಡಿ ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಜುಕರ್‌ಬರ್ಗ್‌ ʼವಾಟ್ಸ್‌ಆಪ್‌ಗೆ ಹೊಸತು. ನೀವು ಇನ್ನು ಮುಂದೆ ವಾಟ್ಸ್‌ಆಪ್‌ ಚಾಟ್‌ನಲ್ಲಿ ವಿಡಿಯೊ ಮೆಸೇಜ್‌ಗಳನ್ನು ರೆಕಾರ್ಡ್‌ ಮಾಡಿ ಕಳುಹಿಸಬಹುದು.ಕಿರು ಸಂದೇಶಗಳನ್ನು ಕಳುಹಿಸಲು ಇದು ಉತ್ತಮ ಆಯ್ಕೆʼ ಎಂದು ಬರೆದುಕೊಂಡಿದ್ದರು.

how to use whatsapp screen sharing feature kannada

ವಾಟ್ಸ್​ಆ್ಯಪ್ ವೀಡಿಯೊ ಕರೆಗಳಲ್ಲಿ ನಿಮ್ಮ ಸ್ಕ್ರೀನ್ ಹಂಚಿಕೊಳ್ಳುವುದು ಹೇಗೆ?

1. ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

2. ಒಂದು ಅಥವಾ ಹೆಚ್ಚಿನ ಸಂಪರ್ಕಗಳೊಂದಿಗೆ ವೀಡಿಯೊ ಕರೆಯನ್ನು ಪ್ರಾರಂಭಿಸಿ.

3. ವೀಡಿಯೊ ಕರೆ ಸಮಯದಲ್ಲಿ ನೀವು ಸ್ಕ್ರೀನ್ ಕೆಳಭಾಗದಲ್ಲಿ ಹೊಸ ‘ಹಂಚಿಕೊಳ್ಳಿ’ ಐಕಾನ್ ಅನ್ನು ನೋಡುತ್ತೀರಿ. ಇದು ಬಾಣವನ್ನು ತೋರಿಸುವ ಫೋನ್‌ನಂತೆ ಕಾಣುತ್ತದೆ.

4. ನಂತರ ವಾಟ್ಸಾಪ್ ಸ್ಕ್ರೀನ್ ಹಂಚಿಕೆ ಪ್ರವೇಶವನ್ನು ನೀಡಲು ನಿಮ್ಮನ್ನು ಕೇಳಲಾಗುತ್ತದೆ. ಖಚಿತಪಡಿಸಲು ‘ಈಗ ಪ್ರಾರಂಭಿಸಿ’ ಅಥವಾ ‘Start Broadcast’ ಟ್ಯಾಪ್ ಮಾಡಿ. 

5. ನಿಮ್ಮ ಸ್ಕ್ರೀನ್ ನಂತರ ಇತರ ಪಕ್ಷಕ್ಕೆ ಸ್ಟ್ರೀಮ್ ಮಾಡಲಾಗುತ್ತದೆ. ನಿಮ್ಮ ಸ್ಕ್ರೀನ್ ಮೇಲ್ಭಾಗದಲ್ಲಿ ನೀವು ನಿಮ್ಮ ಸ್ಕ್ರೀನ್ ಹಂಚಿಕೊಳ್ಳುತ್ತಿರುವಿರಿ ಎಂದು ಸೂಚಿಸುವ ಕೆಂಪು ಪಟ್ಟಿಯನ್ನು ನೀವು ನೋಡುತ್ತೀರಿ.

6. ನಿಮ್ಮ ಸ್ಕ್ರೀನ್ ಹಂಚಿಕೊಳ್ಳುವುದನ್ನು ನಿಲ್ಲಿಸಲು ಕೆಂಪು ಪಟ್ಟಿಯ ಮೇಲೆ ಟ್ಯಾಪ್ ಮಾಡಿ ಮತ್ತು ‘ನಿಲ್ಲಿಸು’ ಅಥವಾ ‘ಪ್ರಸಾರವನ್ನು ನಿಲ್ಲಿಸಿ’ ಆಯ್ಕೆಮಾಡಿ. 

7. ಪರ್ಯಾಯವಾಗಿ ನೀವು ಮತ್ತೆ ‘ಹಂಚಿಕೊಳ್ಳಿ’ ಐಕಾನ್ ಮೇಲೆ ಟ್ಯಾಪ್ ಮಾಡಬಹುದು ಮತ್ತು ‘ಹಂಚಿಕೊಳ್ಳುವುದನ್ನು ನಿಲ್ಲಿಸಿ’ ಆಯ್ಕೆ ಮಾಡಬಹುದು.


Spread the love

Leave a Reply

Your email address will not be published. Required fields are marked *