rtgh

‘ಬಾಲ ಆಧಾರ್ ಕಾರ್ಡ್’ ನಿಮಗಿದು ಗೊತ್ತೇ ? ಮಗುವಿಗೆ ಆಧಾರ್ ಕಾರ್ಡ್ ಮಾಡಿಸಲು ಕನಿಷ್ಠ ವಯಸ್ಸಿನ ಮಿತಿ ಇದೆಯೇ?,


Hello ಸ್ನೇಹಿತರೇ,, ಆಧಾರ್‌ ಕಾರ್ಡ್ ಪ್ರತಿಯೊಬ್ಬರಿಗೂ ಇಂದು ಅಗತ್ಯವಾಗಿರುವ ಪ್ರಮುಖ ಗುರುತಿನ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸೇವೆಗಳನ್ನು ಜನರಿಗೆ ತಲುಪಿಸಲು ಸರ್ಕಾರವು ಆಧಾರ್‌ ಕಾರ್ಡ್ ನ್ನು ಪ್ರಮುಖವಾಗಿ ಪರಿಗಣಿಸುತ್ತದೆ. ಇದಲ್ಲದೆ, ಉದ್ಯೋಗ ಅರ್ಜಿಗಳು ಮತ್ತು ಬ್ಯಾಂಕ್ ಸಾಲಗಳಿಂದ ಹಿಡಿದು ಮೊಬೈಲ್ ಸಂಖ್ಯೆ ನೋಂದಣಿ ಮತ್ತು ಭವಿಷ್ಯ ನಿಧಿ ವಿತರಣೆಯವರೆಗೆ ನಮ್ಮ ಜೀವನದ ವಿವಿಧ ಅಂಶಗಳಲ್ಲಿ ಆಧಾರ್‌ ಕಾರ್ಡ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

child aadhar enrollment information in kannada
child aadhar enrollment information in kannada

ಹಾಗಿದ್ರೆ ಆಧಾರ್ ಕಾರ್ಡ್ ಪಡೆಯಲು ಕನಿಷ್ಟ – ಗರಿಷ್ಟ ವಯಸ್ಸಿನ ಮಿತಿ ಇದೆಯೇ? ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಆಧಾರ್ ಗುರುತಿನ ಚೀಟಿ ಮಾಡಿಸಿಕೊಳ್ಳಲು ಕನಿಷ್ಟ ವಯಸ್ಸಿನ ಮಿತಿ ಇದೆಯೇ?, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ…..

child aadhar enrollment documents in kannada

ಬಾಲ ಆಧಾರ್ ಕಾರ್ಡ್ ಮಾಡಿಸಲು ಕನಿಷ್ಠ ವಯಸ್ಸಿನ ಮಿತಿ

ಇದರ ಉತ್ತರ ಸರಳವಾಗಿದ್ದು, ಆಧಾರ್ ಕಾರ್ಡ್ ಪಡೆಯಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಯಾವುದೇ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಿಲ್ಲ. ಹೀಗಾಗಿ, ನೀವು ನವಜಾತ ಶಿಶುವಿಗೆ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಮಕ್ಕಳಿಗೆ ಆಧಾರ್ ಕಾರ್ಡ್ ಶಾಲಾ ಪ್ರವೇಶಾತಿ ಮತ್ತು ಮಕ್ಕಳಿಗಾಗಿ ಸರ್ಕಾರಿ ಯೋಜನೆಗಳನ್ನು ಪಡೆಯುವಾಗ ಸೇರಿದಂತೆ ಅವರ ಜೀವನದ ಅನೇಕ ಸಂದರ್ಭದಲ್ಲಿ ಅದರ ಪ್ರಾಮುಖ್ಯತೆ ಕಂಡುಬರುತ್ತದೆ.

ಮಕ್ಕಳ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆಯಲ್ಲಿ ಎರಡು ವಿಭಾಗಗಳನ್ನು ಮಾಡಲಾಗಿದೆ. ಮೊದಲ ವಿಭಾಗದಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಎರಡನೇ ವಿಭಾಗದಲ್ಲಿ 5 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ಗಳನ್ನಾಗಿ ಮಾಡಲಾಗುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ.

ಮಕ್ಕಳ ಆಧಾರ್ ಕಾರ್ಡ್ ನೋಂದಾಯಿಸಿಕೊಳ್ಳಲು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ನಿಮ್ಮ ಮಗುವಿನ ಆಧಾರ್‌ಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದರೊಂದಿಗೆ ಮಕ್ಕಳ ಆಧಾರ್‌ಗಾಗಿ ಬಯೋಮೆಟ್ರಿಕ್ ಡೇಟಾ ಅಗತ್ಯವಿರುವುದಿಲ್ಲ.

ಅಂದರೆ ವಯಸ್ಕರಿಗೆ ಅಗತ್ಯವಿರುವ, ಫಿಂಗರ್‌ಪ್ರಿಂಟ್ ಅಥವಾ ರೆಟಿನಾದ ಸ್ಕ್ಯಾನ್‌ಗಳ ಚಿಕ್ಕ ಮಕ್ಕಳಿಗೆ ಅಗತ್ಯವಿರುವುದಿಲ್ಲ. ಇದರ ಬದಲಾಗಿ ಮಗುವಿನ ಜನನ ಪ್ರಮಾಣಪತ್ರವನ್ನು ನೀಡಿದರೆ ಸಾಕು. ಒಂದು ವೇಳೆ ಬರ್ತ್ ಸರ್ಟಿಫಿಕೇಟ್ ಇಲ್ಲದಿದ್ದರೇ, ಆಸ್ಪತ್ರೆಯ ಡಿಸ್ಚಾರ್ಜ್ ಪ್ರಮಾಣಪತ್ರ ಅಥವಾ ಶಾಲೆಯ ಗುರುತಿನ ಚೀಟಿಯನ್ನು ಬಳಸಬಹುದು.ಜೊತೆಗೆ ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಅಥವಾ ಪಾಸ್‌ಪೋರ್ಟ್‌ನಂತಹ ಮಾನ್ಯವಾದ ಗುರುತಿನ ಚೀಟಿ ದಾಖಲೆಯನ್ನು ಹೊಂದಿರಬೇಕು.

ಮಕ್ಕಳು ಐದು ವರ್ಷವನ್ನು ತಲುಪಿದ ತಕ್ಷಣ, ಬಯೋಮೆಟ್ರಿಕ್ ಡೇಟಾವನ್ನು (ಬೆರಳಚ್ಚುಗಳಂತಹ) ಅವರ ಡೇಟಾಬೇಸ್‌ಗೆ ಸೇರಿಸಬೇಕು ಇದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಪೋಷಕರು ತಮ್ಮ ಮೊಬೈಲ್ ಸಂಖ್ಯೆಯನ್ನು ತಮ್ಮ ಮಗುವಿನ ಆಧಾರ್‌ಗೆ ಲಿಂಕ್ ಮಾಡಬಹುದು ಮತ್ತು ಅ


Leave a Reply

Your email address will not be published. Required fields are marked *