rtgh

ಕೊಹ್ಲಿ & ರಾಹುಲ್ ಪಾಕ್‌ಗೆ ಗುನ್ನಾ.! ಪಾಕ್ ಬೌಲರ್ ಗಳಿಗೆ ಚಳಿ ಬಿಡಿಸಿದ ಭಾರತದ ಬ್ಯಾಟ್ಟರ್ಸ್


ಭಾರತ & ಪಾಕಿಸ್ತಾನ ನಡುವಿನ ‘ಏಷ್ಯಾಕಪ್‌’ ಮ್ಯಾಚ್ ಅದ್ಭುತ ತಿರುವು ಪಡೆಯುತ್ತಿದೆ. ಮಳೆ ಭೀತಿ ನಡುವೆ ನಿನ್ನೆ ಪಂದ್ಯ ನಿಂತು ಹೋಗಿತ್ತು. ಆದರೆ ಈ ಕಾರಣಕ್ಕೆ ಒಂದು ದಿನ ಮೀಸಲು ಇರಿಸಲಾಗಿತ್ತು. ಹೀಗೆ ಮೀಸಲು ದಿನವಾದ ಇಂದು ಮತ್ತೆ ಮ್ಯಾಚ್ ಶುರುವಾಗಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ನಿನ್ನೆ ಪಂದ್ಯ ನಿಂತಿದ್ದ ಹಂತದಲ್ಲೇ ಇಂದು ಮತ್ತೆ ಆರಂಭವಾಗಿದ್ದು, ಕೊಹ್ಲಿ & ರಾಹುಲ್ ಜೋಡಿ ಪಾಕಿಸ್ತಾನಕ್ಕೆ ಚಳಿ ಬಿಡಿಸಿದೆ.

ind vs pak match details in kannada
ind vs pak match details in kannada

india vs pakistan asia cup super 4 match details in kannada

ಕೊಹ್ಲಿ & ರಾಹುಲ್

ಭಾರಿ ಮಳೆ ಹಿನ್ನೆಲೆಯಲ್ಲಿ ಪಂದ್ಯ ಏನಾಗುತ್ತೋ? ಎಂಬ ಚಿಂತೆ ಶುರುವಾಗಿತ್ತು. ಆದ್ರೆ ಈ ಚಿಂತೆ ದೂರ ಮಾಡಿದ್ದು ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಜೋಡಿ. ಇಬ್ಬರು ಆಟಗಾರರು 3ನೇ ವಿಕೆಟ್ ಜೊತೆಯಾಟಕ್ಕೆ ಭರ್ತಿ 100 ರನ್‌ಗಳ ಜೊತೆಯಾಟ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡದ ಬೌಲರ್‌ಗಳ ಬೆವರು ಇಳಿಸಿದ ಇಬ್ಬರೂ ಆಟಗಾರರು, ಈಗಾಗಲೇ ಅರ್ಧ ಶತಕ ಬಾರಿಸಿದ್ದು ಇನ್ನೇನು ಶತಕ ಭಾರಿಸುವ ಕಡೆಗೆ ಹೆಜ್ಜೆ ಹಾಕಿದ್ದಾರೆ.

ಭಾರತದ ಭರ್ಜರಿ ಪ್ರದರ್ಶನ ಶ್ರೀಲಂಕಾ ಮಳೆ ಕಾರಣಕ್ಕೆ ನಲುಗಿ ಹೋಗಿದ್ದು ‘ಏಷ್ಯಾಕಪ್‌-2023’ಯ ಬಹುತೇಕ ಪಂದ್ಯ ಇದೇ ಮಳೆಗೆ ಆಹುತಿಯಾಗಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೀಸಲಾಗಿ ಒಂದು ದಿನ ಸಿಕ್ಕಿತ್ತು. ನಿನ್ನೆ ಮ್ಯಾಚ್ ನಿಂತರೂ ಇಂದು ಪಂದ್ಯ ಶುರುವಾಗಿದೆ. ಹೀಗಾಗಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ಭಾರತ ತಂಡ ಒಟ್ಟಾರೆ 288 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ. ಹಾಗಾದರೆ ಭಾರತದ ಪರವಾಗಿ ವಿರಾಟ್ ಕೊಹ್ಲಿ & ಕೆ.ಎಲ್. ರಾಹುಲ್ ಗಳಿಸಿರುವುದು ಎಷ್ಟು? ಮುಂದೆ ಓದಿ.

ಭಾರತದ ಪರ ವಿರಾಟ್ ಕೊಹ್ಲಿ 122 ರನ್ ಗಳಿಸಿದ್ದು, ಹಾಗೇ ಕೆ.ಎಲ್. ರಾಹುಲ್ 111 ರನ್ ಗಳಿಸಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ 9 ಬೌಂಡರಿ ಮತ್ತು 3 ಸಿಕ್ಸ್ ಹೊಡೆದಿದ್ದಾರೆ. ಹಾಗೇ ಕೆ.ಎಲ್. ರಾಹುಲ್ 12 ಬೌಂಡರಿ ಸೇರಿ ಒಟ್ಟು 2 ಸಿಕ್ಸ್ ಹೊಡೆದಿದ್ದಾರೆ. ಈ ಮೂಲಕ ಪಾಕಿಸ್ತಾನದ ಬೌಲರ್‌ಗಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ಚಳಿ ಬಿಡಿಸಿದ್ದಾರೆ.

IND PAK ಅನ್ನು 228 ರನ್‌ಗಳಿಂದ ಸೋಲಿಸಿ ಅಂತರದಿಂದ ಅತ್ಯಧಿಕ ಗೆಲುವು ದಾಖಲಿಸಿತು


Leave a Reply

Your email address will not be published. Required fields are marked *