ಕರ್ನಾಟಕದ ಲಕ್ಷಾಂತರ ಮನೆಗಳಿಗೆ ಆಹಾರ ಭದ್ರತೆ ಮತ್ತು ಅಗತ್ಯ ವಸ್ತುಗಳ ಪ್ರವೇಶವನ್ನು ಖಾತ್ರಿಪಡಿಸುವಲ್ಲಿ ಪಡಿತರ ಚೀಟಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆದಾಗ್ಯೂ, ಪಡಿತರ ಚೀಟಿಗಳಲ್ಲಿನ ದೋಷಗಳು ಮತ್ತು ವ್ಯತ್ಯಾಸಗಳು ಫಲಾನುಭವಿಗಳಿಗೆ ಗಮನಾರ್ಹ ಸವಾಲುಗಳನ್ನು ಉಂಟುಮಾಡಬಹುದು.
ಪಡಿತರ ಕಾರ್ಡ್ದಾರರಿಗೆ ಆಹಾರ ಇಲಾಖೆ ಮತ್ತೊಂದು ಗುಡ್ನ್ಯೂಸ್ ನೀಡಿದೆ. ಕಳೆದ ಎರಡು ತಿಂಗಳಿನಿಂದ ಯಾರು ಯಾರು ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಕಾಯುತ್ತಿದ್ದರೋ ಅಂತವರಿಗೆ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ನಿನ್ನೆಯಿಂದ ಅವಕಾಶ ನೀಡಿದೆ.
ಆಹಾಯ ಇಲಾಖೆ ಈ ಹಿಂದೆಯೂ ಪಡಿತರ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ್ದರೂ ಸಹ, ಆ ವೇಳೆ ಸರ್ವಸ್ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ವಲಯವಾರಿ ತಲಾ ಮೂರು ದಿನಗಳ ಕಾಲ ಪಡಿತರ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ.
ಕಳೆದ ಸುಮಾರು 53 ಸಾವಿರ ಅರ್ಜಿಗಳು ಪಡಿತರ ಕಾರ್ಡ್ ತಿದ್ದುಪಡಿಗೆ ಸಲ್ಲಿಕೆ ಆಗಿದ್ದವು. ಹಾಗಾದರೆ ನಾವು ಏನೋ ಪಡಿತರ ತಿದ್ದುಪಡಿಗೆ ಅರ್ಜಿಯನ್ನು ಹಾಕ್ತೇವೆ. ಆದರೆ ಅರ್ಜಿ ಹಾಕಿ 15 ದಿನ ಆಯ್ತು ಅರ್ಜಿಯ ಸ್ಥಿತಿ (ಸ್ಟೇಟಸ್) ಏನಿದೆ? ಉದಾಹರಣೆ ಮನೆಯೊಡತಿ ಬದಲಾವಣೆಗೆ ಮನವಿ, ಮನೆಯಲ್ಲಿ ಯಾರಾದರೂ ನಿಧನರಾಗಿದ್ದರೆ ಅಂತ ಹೆಸರಗಳನ್ನು ಡಿಲೀಟ್ ಮಾಡಲು ಮನವಿ ಮಾಡಿರುತ್ತೀರಿ.
ಅರ್ಜಿ ಸಲ್ಲಿಕೆ ಆದ ನೀವು ಸಲ್ಲಿಕೆ ಮಾಡಿರುವ ಅರ್ಜಿಯ ಸ್ಟೇಟಸ್ ಏನಿದೆ ಅಂತ ನೀವು ನಿಮ್ಮ ಮೊಬೈಲ್, ಕಂಪ್ಯೂಟರ್ನಲ್ಲೇ ಪರಿಶೀಲನೆ ಮಾಡಿಕೊಳ್ಳಬಹುದು. ಇದಕ್ಕೆ ನೀವು ಆಹಾರ ಇಲಾಖೆ ವೆಬ್ ಸೈಟ್ www.ahara.kar.in ಗೆ ಭೇಟಿ ನೀಡಬೇಕು
ಅಲ್ಲಿ ನೀವು ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಮೂರು ಆಯ್ಕೆ ಅಂದರೆ ಹೊಸ/ಹಾಲಿ ಪಡಿತರ ಚೀಟಿ ಸ್ಥಿತಿ, ತಿದ್ದುಪಡಿ ವಿನಂತಿ ಸ್ಥಿತಿ & ಡಿಬಿಬಿ ಸ್ಥಿತಿ ಎಂಬ ಆಯ್ಕೆಗಳನ್ನು ಕಾಣುತ್ತೀರಿ. ಅಲ್ಲಿ ನೀವು ತಿದ್ದುಪಡಿ ವಿನಂತಿ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆ ಬಳಿಕ ನಿಮ್ಮ ಜಿಲ್ಲೆಯ ವಲಯದ ಮೇಲೆ ಕ್ಲಿಕ್ ಮಾಡಬೇಕು.
ಆ ಬಳಿಕ ನಿಮಗೆ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೂರನೇ ಆಯ್ಕೆ ಆಗಿರುವ ‘ಪಡಿತರ ಚೀಟಿ ಬದಲಾವಣೆ ಕೋರಿಗೆ ಸ್ಥಿತಿ’ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ನೀವು ನಿಮ್ಮ ಆರ್ಸಿ ನಂಬರ್, ಅಂದರೆ ಪಡಿತರ ಚೀಟಿ ಸಂಖ್ಯೆಯನ್ನು ನಮೂದು ಮಾಡಿ, ನೀವು ತಿದ್ದುಪಡಿ ವೇಳೆ ಕೊಟ್ಟಿರುವ Akcnowledgment No ನಮೂದು ಮಾಡಿ ಬಳಿಕ Go ಅಂತ ಆಯ್ಕೆ ಮಾಡಿದರೆ ನಿಮ್ಮ ಅರ್ಜಿ ಸ್ಟೇಟಸ್ ತಿಳಿಯಲಿದೆ.
ಎರಡು ಬಾಕ್ಸ್ಗಳಲ್ಲಿ ಸರಿಯಾದ ನಂಬರ್ಗಳನ್ನು ನಮೂದು ಮಾಡಿ Go ಅಂತ ಕ್ಲಿಕ್ ಮಾಡಿದರೆ, ನೀವು ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ ದಿನಾಂಕ, ನಿಮ್ಮ ಅರ್ಜಿಯನ್ನು ಇಲಾಖೆ ಅರ್ಜಿಯನ್ನು ಯಾವಾಗ ಓಕೆ ಮಾಡಿದೆ ಹಾಗೂ ಸ್ಟೇಟಸ್ ಏನಿದೆ ಎಂಬ ಮಾಹಿತಿ ಲಭ್ಯವಾಗಲಿದೆ.
ಒಂದೊಮ್ಮೆ ನೀವು ಅರ್ಜಿ ಸಲ್ಲಿಕೆ ಮಾಡಿದ ಮಾಹಿತಿ ಸಿಕ್ಕಿಲ್ಲ ಎಂದರೇ ನಿಮ್ಮ ತಾಲೂಕು ಕೇಂದ್ರದ ಸಿಪಿಓ ಅಥವಾ ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ ನಿಮಗೆ ಹಣ ಬರಲು ಸುಮಾರು 3 ತಿಂಗಳ ಸಮಯ ಬೇಕಾಗುತ್ತದೆ. ಏಕೆಂದರೆ ಸರ್ಕಾರ ಮೂರು ವೆಬ್ಸೈಟ್ಗಳಲ್ಲಿ ನೀವು ತಿದ್ದುಪಡಿ ಮಾಡಿರುವ ಮಾಹಿತಿ ಅಪ್ಡೇಟ್ ಆಗಬೇಕಾಗುತ್ತದೆ. ಈ ಕಾರಣದಿಂದ ತಡವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು, ಇದುವರೆಗೂ ಒಟ್ಟು 3 ಲಕ್ಷ 18 ಸಾವಿರ ಅರ್ಜಿಗಳು ತಿದ್ದುಪಡಿಗೆ ಬಂದಿದ್ದು, ಇದರಲ್ಲಿ ಒಂದು ಲಕ್ಷ 17 ಸಾವಿರ 646 ಅರ್ಜಿಗಳನ್ನು ಅಂಗೀಕರಿಸಲಾಗಿದೆ. ಉಳಿದಂತೆ 93 ಸಾವಿರ 362 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅರ್ಜಿ ಸಲ್ಲಿಕೆ ವೇಳೆ ನೀವು ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ನೀಡಿರುವ ಮಾಹಿತಿ ತಪ್ಪಿದ್ದರೆ ಆಹಾರ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿ ಮಾಡಲಿದ್ದಾರೆ.