rtgh

ಬಿಳಿ ಕೂದಲನ್ನು ಶಾಶ್ವತ ಕಪ್ಪಾಗಿಸಲು ಅರಿಶಿನದಲ್ಲಿ ಈ 1 ಪದಾರ್ಥ ಮಿಶ್ರಣ ಮಾಡಿ ಹಚ್ಚಿ..!


ನಾವು ವಯಸ್ಸಾದಂತೆ, ನಮ್ಮ ಕೂದಲು ನೈಸರ್ಗಿಕವಾಗಿ ಅದರ ವರ್ಣದ್ರವ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ, ಇದರ ಪರಿಣಾಮವಾಗಿ ಬೂದು ಅಥವಾ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಅನೇಕ ವ್ಯಕ್ತಿಗಳು ತಮ್ಮ ನೈಸರ್ಗಿಕ ಕೂದಲಿನ ಬಣ್ಣವನ್ನು ಅಳವಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡರೆ, ಇತರರು ಗಾಢ ಛಾಯೆಯನ್ನು ನಿರ್ವಹಿಸಲು ಅಥವಾ ಪುನಃಸ್ಥಾಪಿಸಲು ಬಯಸುತ್ತಾರೆ.

For permanent blackening of white hair information in kannadda
For permanent blackening of white hair information in kannadda

ಕಳಪೆ ಆಹಾರ ಮತ್ತು ಜೀವನಶೈಲಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಜನರು ಕೂದಲು ಬಿಳಿಯಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳಿರಲಿ, ಮುದುಕರಿರಲಿ ಪ್ರತಿಯೊಬ್ಬರು ಇಂದು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಪುರುಷರು ಮತ್ತು ಮಹಿಳೆಯರ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿವೆ.

ಇದರಿಂದಾಗಿ ಮುಖದ ಸೌಂದರ್ಯವೇ ನಾಶವಾಗಿ, ಆತ್ಮಸ್ಥೈರ್ಯ ಕುಂದುತ್ತಿದೆ. ನೀವೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಪರಿಣಾಮಕಾರಿಯಾದ ಈ ಮನೆಮದ್ದ ಒಮ್ಮೆ ಪ್ರಯತ್ನಿಸಿ.

ಕೂದಲು ಕಪ್ಪಾಗಲುನಿಮಗೆ ಅಡುಗೆಮನೆಯಲ್ಲಿ ಇರುವ ಒಂದು ಚಮಚ ಅರಿಶಿನ ಮತ್ತು ಎರಡು ಚಮಚ ಆಮ್ಲಾ ಪುಡಿ ಸಾಕು. ಎರಡನ್ನೂ ಕಡಾಯಿಯಲ್ಲಿ ಹಾಕಿ ನಂತರ ಚೆನ್ನಾಗಿ ಹುರಿಯಿರಿ. ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಹುರಿಯಬೇಕು. ಕಪ್ಪು ಬಣ್ಣಕ್ಕೆ ತಿರುಗಿದ ನಂತರ, ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಅದನ್ನು ತಣ್ಣಗಾಗಲು ಬಿಡಿ.

ನಂತರ, ಅಲೋವೆರಾ ಜೆಲ್ ಅನ್ನು ಅಗತ್ಯಕ್ಕೆ ತಕ್ಕಷ್ಟು ಮಿಶ್ರಣ ಮಾಡಬೇಕು. ಮೂರು ಪದಾರ್ಥವನ್ನು ಚನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ನಿಮ್ಮ ಕೂದಲಿಗೆ ಸಮವಾಗಿ ಅನ್ವಯಿಸಿ, ಅರ್ಧ ಘಂಟೆಯವರೆಗೆ ಕಾಯಿರಿ. ಅರ್ಧ ಘಂಟೆಯ ನಂತರ, ನಿಮ್ಮ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ನಂತರ ಶಾಂಪೂವಿನಿಂದ ತೊರೆದುಕೊಳ್ಳಿ.

ಒಂದು ವೇಳೆ ನಿಮ್ಮ ಬಳಿ ಅಲೋವೆರಾ ಜೆಲ್ ಇಲ್ಲವಾದರೆ, ಸಾಸಿವೆ ಎಣ್ಣೆಯನ್ನು ಕೂಡ ಸೇರಿಸ ಪೇಸ್ಟ್‌ ಮಾಡಿಕೊಳ್ಳಬಹುದು. ಸಾಸಿವೆ ಎಣ್ಣೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ, ಇದು ಕೂದಲನ್ನು ಬಲ, ದಪ್ಪ ಮತ್ತು ಕಪ್ಪು ಮಾಡುತ್ತದೆ. ನೀವು ವಾರಕ್ಕೆ ಎರಡು ಬಾರಿ ಆಮ್ಲಾ ಮತ್ತು ಅರಿಶಿನದ ಈ ಮನೆಮದ್ದನ್ನು ಬಳಸಿದರೆ, ನಿಮ್ಮ ಕೂದಲು ಶೀಘ್ರದಲ್ಲೇ ನೈಸರ್ಗಿಕವಾಗಿ ಕಪ್ಪಾಗುತ್ತದೆ.


Leave a Reply

Your email address will not be published. Required fields are marked *