rtgh

ಕರ್ನಾಟಕ ಏಕೀಕರಣ ಇತಿಹಾಸ ಮತ್ತು ಪ್ರಭಂದ | Karnataka Ekikarana Essay In Kannada | Integration of Karnataka in Kannada.


Karnataka Ekikarana Essay In Kannada
Karnataka Ekikarana Essay In Kannada

ಪರಿಚಯ:

ಭಾರತದ ದಕ್ಷಿಣದ ರಾಜ್ಯವಾದ ಕರ್ನಾಟಕವು ವೈವಿಧ್ಯತೆ, ಸಂಸ್ಕೃತಿ ಮತ್ತು ಇತಿಹಾಸದ ಗಮನಾರ್ಹ ಉದಾಹರಣೆಯಾಗಿದೆ. ಇದು ವಿವಿಧ ಪ್ರದೇಶಗಳು, ಭಾಷೆಗಳು ಮತ್ತು ಸಂಪ್ರದಾಯಗಳ ಜನರ ಸಾಮರಸ್ಯದ ಏಕೀಕರಣಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಏಕೀಕರಣವು ವೈವಿಧ್ಯತೆ, ಏಕತೆ ಮತ್ತು ಪ್ರಗತಿಯ ಸೌಂದರ್ಯವನ್ನು ಪ್ರದರ್ಶಿಸುವ ಆಕರ್ಷಕ ಪ್ರಯಾಣವಾಗಿದೆ. ಈ ಪ್ರಬಂಧದಲ್ಲಿ ನಾವು ಕರ್ನಾಟಕದ ಏಕೀಕರಣದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಅನ್ವೇಷಿಸುತ್ತೇವೆ.

ಐತಿಹಾಸಿಕ ಅವಲೋಕನ:

ಕರ್ನಾಟಕದ ಇತಿಹಾಸವು ವಿವಿಧ ರಾಜವಂಶಗಳು, ಸಾಮ್ರಾಜ್ಯಗಳು ಮತ್ತು ಪ್ರಭಾವಗಳ ವಸ್ತ್ರವಾಗಿದೆ. ಶತಮಾನಗಳ ಹಿಂದೆ ವೈವಿಧ್ಯಮಯ ಸಮುದಾಯಗಳು ಈ ಪ್ರದೇಶದಲ್ಲಿ ನೆಲೆಸಿದಾಗ ಏಕೀಕರಣದ ಪ್ರಕ್ರಿಯೆಯು ಪ್ರಾರಂಭವಾಯಿತು. ಮೌರ್ಯ ಮತ್ತು ಶಾತವಾಹನ ಸಾಮ್ರಾಜ್ಯಗಳು ಉತ್ತರ ಭಾಗದಲ್ಲಿ ಪ್ರಭಾವ ಬೀರಿದರೆ, ಚೋಳ, ಹೊಯ್ಸಳ ಮತ್ತು ವಿಜಯನಗರ ರಾಜವಂಶಗಳು ದಕ್ಷಿಣವನ್ನು ರೂಪಿಸಿದವು. ಆಡಳಿತ, ಸಂಸ್ಕೃತಿ ಮತ್ತು ಭಾಷೆಗಳಲ್ಲಿನ ವೈವಿಧ್ಯತೆಯು ಮೊಸಾಯಿಕ್ ಅನ್ನು ರಚಿಸಿತು, ಅದು ನಂತರ ಕರ್ನಾಟಕವನ್ನು ರೂಪಿಸುತ್ತದೆ.

ಕದಂಬ ವಂಶದ ಸ್ಥಾಪಕ ಮಯೂರ ವರ್ಮ .

ಕರ್ನಾಟಕದ ಮಾರ್ಟಿನ ಲೂಥರ್ ಎಂದು ಬಸವಣ್ಣನವರನ್ನು ಕರೆಯುತ್ತಾರೆ .

ಕರ್ನಾಟಕದ ಅತ್ಯಂತ ಪ್ರಾಚೀನ ಶಾಸನ ತಾಳಗುಂದ ಶಾಸನ

ವಿಜಯನಗರ ಕಾಲದಲ್ಲಿ ಪ್ರಸಿದ್ದ ಕ್ರೀಡೆ ಕುಸ್ತಿ ಆಗಿತ್ತು . ಆ ಕಾಲದ ಪ್ರಮುಖ ಮಹಿಳಾ ಕುಸ್ತಿಪಟು ಹರಿಯಕ್ಕ .

ವಿಜಯನಗರ ಸಾಮ್ರಾಜ್ಯವು ತುಂಗಭದ್ರಾ ನದಿಯ ದಂಡೆಯ ಮೇಲೆ ಇತ್ತು .

ಮಧುರಾ – ವಿಜಯಾ ಎಂಬ ಕೃತಿಯನ್ನು ಗಂಗಾಂಬಿಕೆ ಬರೆದಿದ್ದಾಳೆ .

ವಿಜಯನಗರ ಕಾಲದ ಕನ್ನಡದ ಕವಿ ತಿಮ್ಮಣ್ಣ .

ಕೃಷ್ಣದೇವರಾಯನು ತೆಲುಗಿನಲ್ಲಿ ಅಮುಕ್ತ ಮೌಲ್ಯ ಎಂಬ ಕೃತಿಯನ್ನು ಬರೆದಿದ್ದಾನೆ .

ಭಾರತೀಯ ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು ಎಂದು ಐಹೊಳೆಯನ್ನು ಕರೆಯುತ್ತಾರೆ .

ಕನ್ನಡದಲ್ಲಿ ರಚಿತವಾದ ಮೊದಲ ಕೃತಿ ಕವಿರಾಜ ಮಾರ್ಗ . ಹಾಲರಾಜನು ಗಾಥಾ ಸಪ್ತಸತಿ ಎಂಬ ಪ್ರಾಕೃತ ಭಾಷೆಯಲ್ಲಿ ಕೃತಿಯನ್ನು ಬರೆದನು .

ಕರ್ನಾಟಕದಲ್ಲಿ ಒಟ್ಟು 5 ಪ್ರಾಂತ್ಯಗಳಿವೆ .

1 ) ಮುಂಬೈ ಪ್ರಾಂತ್ಯ

2 ) ಹೈದರಾಬಾದ ಪ್ರಾಂತ್ಯ

3 ) ಮದ್ರಾಸ ಪ್ರಾಂತ್ಯ

4 ) ಕೂರ್ಗ ಪ್ರಾಂತ್ಯ

5 ) ಮೈಸೂರು ಪ್ರಾಂತ್ಯ

* ಏಕೀಕರಣದ ಕಲ್ಪನೆ ನೀಡಿದವರು- ಡೆಪ್ಯುಟಿ ಚನ್ನಬಸಪ್ಪ

*ಇವರನ್ನು ಕನ್ನಡ ಶಿಕ್ಷಣದ ಪಿತಾಮಹ ಎಂದು ಕರೆಯುವರು .

* ಕರ್ನಾಟಕ ಏಕೀಕರಣದ ಶಿಲ್ಪಿ : ಆಲೂರು ವೆಂಕಟರಾಯರು

ಆಲೂರು ವೆಂಕಟರಾಯರ ಕೃತಿ : ಕರ್ನಾಟಕ ಗತವೈಭವ ಈ ಗ್ರಂಥಕ್ಕೆ ಏಕೀಕರಣ ಬೈಬಲ್ ಎಂದು ಕರೆಯುವರು .

ಆಲೂರು ವೆಂಕಟರಾಯರು ವಾಗ್ಯೂಷಣ ಎಂಬ ಪತ್ರಿಕೆ ಹೊರಡಿಸಿದರು .

ಬೆಳಗಾವಿಯಲ್ಲಿ ಏಕೀಕರಣದ ಪ್ರಥಮ ಸಮ್ಮೇಳನ ನಡೆಯಿತು .

ಬೆಳಗಾವಿಯಲ್ಲಿ ಏಕೀಕರಣದ ಪ್ರಥಮ ಅಧ್ಯಕ್ಷ : ಸಿದ್ದಪ್ಪ ಕಂಬ್ಳೆ

ಏಕೀಕರಣದ ಸಲುವಾಗಿ ಮುಂಬೈಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ : ಸರ್ದಾರ ವಲ್ಲಭಾಯಿ ಪಟೇಲ ವಹಿಸಿದ್ದರು .

1947 ರ ಸ್ವಾತಂತ್ರ್ಯ ನಂತರದ ಪ್ರಥಮ ಸಮ್ಮೇಳನ ಕಾಸರಗೂಡನಲ್ಲಿ ನಡೆಯಿತುಅಧ್ಯಕ್ಷತೆ ಆರ್.ಹೆಚ್ . ದಿವಾಕರ ವಹಿಸಿದ್ದರು .

ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣ:

1956 ರಲ್ಲಿ ಭಾರತದ ರಾಜ್ಯಗಳ ಭಾಷಾವಾರು ಮರುಸಂಘಟನೆಯು ಕರ್ನಾಟಕದ ಇತಿಹಾಸದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ. ಈ ಸುಧಾರಣೆಯು ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕೆ ಕಾರಣವಾಯಿತು, ಸಾಮಾನ್ಯ ಭಾಷೆಯನ್ನು ಹಂಚಿಕೊಳ್ಳುವ ವಿಭಿನ್ನ ಪ್ರದೇಶಗಳನ್ನು ಒಂದುಗೂಡಿಸಿತು. ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವು ಅಂದಿನಿಂದ ಸಾಂಸ್ಕೃತಿಕ ಏಕೀಕರಣ ಮತ್ತು ಗುರುತನ್ನು ಉತ್ತೇಜಿಸುವ ಏಕೀಕರಣ ಶಕ್ತಿಯಾಗಿದೆ.

ಏಕೀಕರಣದಲ್ಲಿ ಭಾಗವಹಿಸಿದ ಪ್ರಮುಖ ಪತ್ರಿಕೆಗಳು

1 ) ಸತ್ಯಾಗ್ರಹ – ಉಡುಪಿ

2 ) ಕರ್ನಾಟಕ ವೈಭವ – ವಿಜಯಪುರ ಮತ್ತು ಬೆಳಗಾವಿ

3 ) .ಕರ್ನಾಟಕ ಕೇಸರಿ – ಬಳ್ಳಾರಿ

4 ) ಕರ್ಮವೀರ , ತರುಣ ಕರ್ನಾಟಕ ಸಂಯುಕ್ತ ಕರ್ನಾಟಕ – ಹುಬ್ಬಳ್ಳಿ ಧಾರವಾಡ ,

5 ) ಸಾಧನಾ – ಹೈದರಾಬಾದ ಪ್ರಾಂತ / ಕಲಬುರಗಿ

ಬಳ್ಳಾರಿಯು ಕರ್ನಾಟಕದ ಭಾಗ ಎಂದು ಹೇಳಿದ ಸಮಿತಿ ವಾಂಚೂ ಸಮಿತಿ

ಜಯದೇವಿ ತಾಯಿ ಲಿಗಾಡೆಯವರನ್ನು ಕರ್ನಾಟಕ ಏಕೀಕರಣದ ಉಷಾತಾರೆ ಎನ್ನುವರು .

1973 ನಪ್ಟೆಂಬರ್ 1 ರಂದು ದೇವರಾಜ ಅರಸು ನೇತೃತ್ವದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು .

ಕರ್ನಾಟಕಎಂದು ಹೆಸರು ನೀಡಿದವರು – ಚದುರಂಗ

ಏಕೀಕರಣದ ಸಲುವಾಗಿ ಅತೀ ಹೆಚ್ಚು ಸಭೆಗಳು ಸಮ್ಮೇಳನಗಳು ಬೆಳಗಾವಿಯಲ್ಲಿ ನಡೆದಿವೆ .

ಕೆಳದಿ ಸಂಸ್ಥಾನ

ರಾಜಧಾನಿಗಳು 415 ಇಕ್ಕೇರಿ , ಕೆಳದಿ , ಬಿದನೂರು

ರಾಜಲಾಂಛನ -ಗಂಡ ಬೇರುಂಡ

ಸ್ಥಾಪಕರು – ಚೌಡಪ್ಪ ಮತ್ತು ಭದ್ರಪ್ಪ

ಈ ಮನೆತನದಲ್ಲಿ ಇಲಿಯೊಂದು ಬೆಕ್ಕಿಗೆ ಹೆದರಿಸಿದ ಸ್ಥಳವೆ ಒಂದು ಸಂಸ್ಥಾನವಾಗಿ ಬೆಳೆಯಿತು ಎಂದು ಇತಿಹಾಸವಿದೆ .

ಸದಾಶಿವ ನಾಯಕ

* ಈತ ವಿಜಯನಗರದ ಶ್ರೀಕೃಷ್ಣದೇವರಾಯನಿಂದ ಕೋಟೆ ಕೋಲಾಹಲ ಮತ್ತು ಏಕಾಂಗಿ ವೀರ ಎಂಬ ಬಿರುದು ಧರಿಸಿದ್ದ

ಶಿವಪ್ಪ ನಾಯಕ

* ಈತನ ಆಡಳಿತದಲ್ಲಿ ಕಂದಾಯ ವ್ಯವಸ್ಥೆ ಅತ್ಯಂತ ಶಿಸ್ತಿನಿಂದ ಕೂಡಿತ್ತು .

ಕೆಳದಿ ಚನ್ನಮ್ಮ

* ಇವಳು ಔರಂಗಜೇಬನನ್ನು ಸೋಲಿಸಿ ಮರಾಠರ ರಾಜಾರಾಮನಿಗೆ ಆಶ್ರಯ ನೀಡಿದ್ದಳು .

* ಈ ಮನೆತನದ ಕೊನೆಯ ದೊರೆ 3 ನೇ ಸೋಮಶೇಖರ ನಾಯಕ

ಚಿತ್ರದುರ್ಗದ ಪಾಳೆಗಾರರು

ಸ್ಥಾಪಕ – ಕಾಮಗೇಟಿ ವಂಶಸ್ಥ ತಿಮ್ಮಣ್ಣ ನಾಯಕ

ರಾಜಧಾನಿ – ಹೊಳಲ್ಕೆರೆ , ಚಿತ್ರದುರ್ಗ .

ಪ್ರಸಿದ್ಧ ನಾಯಕ – 5 ನೇ ಮದಕರಿ ನಾಯಕ ಈತನೇ ಕೊನೆಯ ನಾಯಕನಾಗಿದ್ದನು .

ಏಕೀಕರಣಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನ

ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ 25-12-1924ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ. ಎ. ಸಲ್ಡಾನ, ಎ. ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದೂ ತಿರಸ್ಕೃತವಾಯಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು.

ಕೊನೆಗೆ ಮುಹೂರ್ತ ಕೂಡಿ ಬಂದಿದ್ದು 1938ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ. ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ. ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

ಹುಬ್ಬಳ್ಳಿ ಗೋಲಿಬಾರ್

ಈ ಸಂದರ್ಭದಲ್ಲೇ, ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ, ಶಂಕರಗೌಡ ಪಾಟೀಲರು 28-03-1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. 19-04-1953ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದ ವಿಷಯ ತಿಳಿದ ಕರ್ನಾಟಕ ಏಕೀಕರಣ ಕಾರ್ಯಕರ್ತರು ಬೆಳಗಿನಿಂದಲೇ ಗುಳಕವ್ವನ ಕಟ್ಟೆ ಮೈದಾನದಲ್ಲಿ ಗುಂಪುಗೂಡಿದರು. ಮೊದಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆ ಕ್ರಮೇಣ ಉಗ್ರವಾಯಿತು. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಹಚ್ಚಿದರು. ಪೊಲೀಸರ ನಿಯಂತ್ರಣ ತಪ್ಪಿದಾಗ ಲಾಠೀ ಚಾರ್ಜ್ ಅಲ್ಲದೆ, ಗೋಲೀಬಾರ್ ಕೂಡಾ ಮಾಡಲಾಯಿತು. ಗಲಭೆಗೆ ಕಾರಣಕರ್ತರೆಂದು ಬಂಧಿತರಾದವರ ವಿಚಾರಣೆ ನಡೆಯಿತು. ಆಗ ಸ್ಥಾನಬದ್ಧತಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿದ್ದವರ ಪರ ವಾದಿಸಿದವರು ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ.

ಈಡೇರಿದ ಕನಸು

ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕರುನಾಡು ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿ ವಿವಿಧ ಭಾಷೆಗಳ ಪ್ರಾಂತ್ಯಗಳಲ್ಲಿ ಇಲ್ಲವಾಗಿತ್ತು. ಈಗ ಕನ್ನಡಿಗರನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆಂಬ ಸಂತಸದ ಜೊತೆಗೆ, ಇದಕ್ಕಾಗಿ ಹೋರಾಡಿದ ಹಿರಿಯ ಜೀವಗಳು ಹಂಬಲಿಸಿದಂತೆ, ಪೂರ್ತಿ ಏಕೀಕರಣ ಸಾಧ್ಯವಾಗಲಿಲ್ಲ.

ಏಕೆಂದರೆ, ಕಾಸರಗೋಡು ಕೈಬಿಟ್ಟಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೇ ಉಳಿದಿದ್ದವು. ನೀಲಗಿರಿ ಕೂಡಾ ದಕ್ಕಲಿಲ್ಲ. ಏಕೀಕರಣದ ನಂತರವೂ ಪ್ರಾಚೀನ ಕಾಲದಿಂದ ಇದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು. ಕೊನೆಗೂ, ಸಾಕಷ್ಟು ಒತ್ತಡದ ನಂತರ, 1973 ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಏನೇ ಆದರೂ, ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು 1956ರ ನವೆಂಬರ್ 1ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದಿದ್ದು ಒಂದು ಐತಿಹಾಸಿಕ ಹೋರಾಟದ ಫಲ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಶತಮಾನಗಳ ಸಂಕೋಲೆ ಕಳೆದುಕೊಂಡು ಎಲ್ಲ ರೀತಿಯಿಂದ ಒಂದಾಯಿತು. ಏಕೀಕರಣದ ಕನಸು ಈಡೇರುವ ಮೂಲಕ, ಕನ್ನಡಿಗರ ಭಾವನಾತ್ಮಕವಾಗಿಯೂ ಒಂದಾದರು. ಸಾಂಸ್ಕೃತಿಕ ಐಕ್ಯತೆಗೂ ಇಂಬು ದೊರೆಯಿತು.

ಇಂಥದೊಂದು ಕನಸನ್ನು ನನಸು ಮಾಡಲು ಹೋರಾಡಿದ ಎಲ್ಲರ ತ್ಯಾಗ ಮತ್ತು ಬಲಿದಾನದ ಫಲ ಈ ನಮ್ಮ ಹೆಮ್ಮೆಯ ಕರ್ನಾಟಕ. ಆ ಸ್ಫೂರ್ತಿ ಅಳಿಯದಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಬೇಗ ಮೈದಾಳಲಿ.

ತೀರ್ಮಾನ:

ಕರ್ನಾಟಕದ ಏಕೀಕರಣವು ವಿವಿಧತೆಯಲ್ಲಿ ಏಕತೆಗೆ ಜ್ವಲಂತ ಉದಾಹರಣೆಯಾಗಿದೆ. ಶತಮಾನಗಳಿಂದಲೂ, ರಾಜ್ಯವು ವಿಭಿನ್ನವಾದ ಗುರುತನ್ನು ಉಳಿಸಿಕೊಂಡು ವಿವಿಧ ಸಾಂಸ್ಕೃತಿಕ, ಭಾಷಿಕ ಮತ್ತು ಐತಿಹಾಸಿಕ ಪ್ರಭಾವಗಳನ್ನು ಹೀರಿಕೊಳ್ಳುವ ಮೂಲಕ ವಿಕಸನಗೊಂಡಿತು ಮತ್ತು ಬೆಳೆದಿದೆ. ಕರ್ನಾಟಕದಲ್ಲಿ ಏಕೀಕರಣ ಪ್ರಕ್ರಿಯೆಯು ವೈವಿಧ್ಯತೆಯು ಶಕ್ತಿಯ ಮೂಲವಾಗಿದೆ, ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಆರ್ಥಿಕ ಸಮೃದ್ಧಿ ಮತ್ತು ವಿವಿಧ ಹಿನ್ನೆಲೆಗಳ ಜನರ ಸಾಮರಸ್ಯದ ಸಹಬಾಳ್ವೆಗೆ ಕೊಡುಗೆ ನೀಡುತ್ತದೆ ಎಂಬುದನ್ನು ನೆನಪಿಸುತ್ತದೆ. ಕರ್ನಾಟಕವು ಬೆಳೆಯುತ್ತಾ ಮತ್ತು ವಿಕಸನಗೊಳ್ಳುತ್ತಾ ಹೋದಂತೆ, ಇದು ಇತರ ಪ್ರದೇಶಗಳಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಏಕತೆಯನ್ನು ಪೋಷಿಸುವಾಗ ವೈವಿಧ್ಯತೆಯನ್ನು ಆಚರಿಸುವ ಸೌಂದರ್ಯವನ್ನು ಪ್ರದರ್ಶಿಸುತ್ತದೆ.


Leave a Reply

Your email address will not be published. Required fields are marked *