ಇಸ್ರೇಲ್ ಕದನ ವಿರಾಮವನ್ನು ಘೋಷಿಸಿದೆ, ಇದು ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಸಂಭಾವ್ಯ ತಿರುವು ನೀಡುತ್ತದೆ. ಇಸ್ರೇಲಿಗಳು ಮತ್ತು ಪ್ಯಾಲೇಸ್ಟಿನಿಯನ್ನರು ಸಂಘರ್ಷದ ವಿನಾಶಕಾರಿ ಪರಿಣಾಮದ ಭಾರವನ್ನು ಹೊತ್ತುಕೊಳ್ಳುವುದರೊಂದಿಗೆ ವಾರಗಳ ತೀವ್ರ ಹಿಂಸಾಚಾರ ಮತ್ತು ಜೀವಹಾನಿಯ ನಂತರ ಈ ಘೋಷಣೆ ಬಂದಿದೆ.

ಹಮಾಸ್ ಉಗ್ರರ ವಿರುದ್ಧ ಸಮಾರಾ ಸಾರುತ್ತಿರುವ ಇಸ್ರೇಲ್ , ಈಗಾಗಲೇ ದೇಶ ತೊರೆಯಲು ಜನರಿಗೆ 24 ಗಂಟೆಗಳ ಅವಕಾಶ ನೀಡಿದ್ದು, ಇದೀಗ ಇಂದಿನ 9ನೇ ದಿನದ ಯುದ್ಧದಲ್ಲಿ ಜನರ ಸ್ಥಳಾಂತರಕ್ಕಾಗಿ 3 ಗಂಟೆಗಳ ಹೆಚ್ಚುವರಿ ಅವಕಾಶ ನೀಡಿದ್ದು, ಸಣ್ಣ ಕದನ ವಿರಾಮ ನೀಡಿದೆ.
ಇಸ್ರೇಲ್ ಪಡೆಗಳು ಯುದ್ಧ ಆರಂಭವಾಗಿ 9ನೇ ದಿನದ ವೇಳೆಗೆ 2,329 ಪ್ಯಾಲೆಸ್ಟೈನಿಯನ್ನರನ್ನು ಬಲಿ ಪಡೆದಿವೆ. ಇದೇ ವೇಳೆ ಇಸ್ರೇಲ್‌ನ 1,300 ಮಂದಿ ಸಾವಿಗೀಡಾಗಿದ್ದು, ಇದರಲ್ಲಿ ಬಹುಪಾಲು ನಾಗರಿಕರೇ ಇದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಅಮಾನವೀಯ ದಾಳಿ ವೇಳೆ ಸಾವಿಗೀಡಾದವರ ಸಂಖ್ಯೆಯೇ ಹೆಚ್ಚು.
ಇಸ್ರೇಲಿ ರಕ್ಷಣಾ ಪಡೆಗಳು ಉತ್ತರ ಗಾಜಾದಿಂದ ಜನರು ಸ್ಥಳಾಂತರಗೊಳ್ಳಲು 3 ಗಂಟೆಗಳ ಕಾಲಾವಕಾಶ ಘೋಷಿಸಿದೆ. ಈ ಪ್ರದೇಶದಲ್ಲಿ ವಾಸಿಸುವ ಸುಮಾರು 1.1 ಮಿಲಿಯನ್ (10 ಲಕ್ಷಕ್ಕೂ ಅಧಿಕ) ಜನರು ಶೀಘ್ರವೇ ಸ್ಥಳಾಂತರವಾಗಿ ಎಂದು ಸೂಚಿಸಿದೆ. ಈಗಡುವಿನಲ್ಲಿ ಯಾವುದೇ ಸೇನಾ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದಿದೆ.
ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸುವ ನಕ್ಷೆಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಇಸ್ರೇಲ್ ಪಡೆಗಳು, ಉತ್ತರ ಗಾಜಾದ ನಿವಾಸಿಗಳ ಸುರಕ್ಷತೆಗಾಗಿ ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ. ನಮ್ಮ ಪಡೆಗಳು ಈ ಮಾರ್ಗದಲ್ಲಿ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳುವುದಿಲ್ಲ ಎಂದು ಖಚಿತ ಭರವಸೆ ನೀಡುತ್ತೇವೆ. ದಯವಿಟ್ಟು, ಉತ್ತರ ಗಾಜಾದಿಂದ ದಕ್ಷಿಣದ ಕಡೆಗೆ ಶೀಘ್ರವೇ ತೆರಳಿ. ನಿಮ್ಮ ಮತ್ತು ಕುಟುಂಬಗಳ ಸುರಕ್ಷತೆಯೇ ಮುಖ್ಯ. ನಮ್ಮ ಸೂಚನೆಗಳನ್ನು ಅನುಸರಿಸಿ ಎಂದು ಮನವಿ ಮಾಡಲಾಗಿದೆ.
- ಸಮಾಜ ಕಲ್ಯಾಣ ಇಲಾಖೆಯ ನೂತನ ಯೋಜನೆ – ಭೂಮಿ ಖರೀದಿಗೆ ಶೇ. 50% ಸಹಾಯಧನ! - August 31, 2025
- Bele Parihara 2025: ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್ - August 30, 2025
- NextGen Edu Scholarship – ಪಿಯುಸಿ ವಿದ್ಯಾರ್ಥಿಗಳಿಗೆ ನೆಕ್ಸ್ಟ್ಜೆನ್ ₹15,000 ವಿದ್ಯಾರ್ಥಿವೇತನ ಪಡೆಯಲು ಅವಕಾಶ! - August 30, 2025