Abhishek Bachchan Divorce
Abhishek Bachchan Divorce: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮದುವೆಯಾಗಿ 16 ವರ್ಷಗಳು ಕಳೆದಿವೆ ಆದರೆ ಕಳೆದ ಕೆಲವು ವಾರಗಳಲ್ಲಿ, ಅವರ ಪ್ರತ್ಯೇಕತೆಯ ಬಗ್ಗೆ ಹಲವಾರು ವರದಿಗಳು ಮತ್ತು ವದಂತಿಗಳಿವೆ. ಟೈಮ್ಸ್ ನೌ ವರದಿಯ ಪ್ರಕಾರ ನಟಿ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ.
ಸದ್ಯ ಬಾಲಿವುಡ್ ನ ಸ್ಟಾರ್ ನಟ Amitabh Bachchan ಅವರ ಪುತ್ರ Abhishek Bachchan ಹಾಗೂ ಮಾಜಿ ವಿಶ್ವ ಸುಂದರಿ Aishwarya Rai Bachchan ಅವರ ವಿವಾಹ ವಿಚ್ಛೇದನದ ಸುದ್ದಿಗಳು ಸಾಕಷ್ಟು ವೈರಲ್ ಆಗುತ್ತಿದೆ. ಇತ್ತೀಚಿಗೆ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಸೊಸೆ ಐಶ್ವರ್ಯ ರೈ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಎನ್ನುವ ಸಿದ್ದಿ ಕೇಳಿಬಂದಿತ್ತು.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್?
ಅಷ್ಟಕ್ಕೂ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬ ಗೊಂದಲ ಇಂದಿಗೂ ಇದೆ. ಅಂದಹಾಗೆ ಜನವರಿ 2007ರಂದು ನ್ಯೂಯಾರ್ಕ್’ನ ಹೋಟೆಲ್ ಒಂದರಲ್ಲಿ ನಟ ಅಭಿಷೇಕ್ ಬಚ್ಚನ್ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು ಎಂದು ಹೇಳಲಾಗುತ್ತದೆ.
ಇನ್ನು ಓದಿ: ರಾಜ್ಯ ಸರ್ಕಾರದಿಂದ 2024ನೇ ಸಾಲಿನ ಅಧಿಕೃತ ರಜೆಗಳ ಪಟ್ಟಿ ಬಿಡುಗಡೆ.
ಉಮ್ರಾವ್ ಜಾನ್ ಸಿನಿಮಾ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿದ್ದು, ಆ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಅದಾದ ಬಳಿಕ ಅಭಿಷೇಕ್ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು.
ಇನ್ನು 2014 ರಲ್ಲಿ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅಭಿಷೇಕ್ ಬಚ್ಚನ್, ಐಶ್ವರ್ಯಾರನ್ನು ಮದುವೆಯಾಗಲು ಕಾರಣ ಬಹಿರಂಗಪಡಿಸಿದ್ದಾರೆ.
‘ಕಾಫಿ ವಿತ್ ಕರಣ್’ ಶೋನಲ್ಲಿ ಕರಣ್ “ಐಶ್ವರ್ಯಾ ನಿಮ್ಮನ್ನೇ ಯಾಕೆ ಮದುವೆಯಾದ್ರು?” ಎಂದು ಕರಣ್ ಜೋಹರ್ ಅಭಿಷೇಕ್ ಬಳಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, “ನಾನು ಅಮಿತಾಭ್ ಬಚ್ಚನ್ ಮಗ ಎಂದಾಗಲಿ, ನಾನು ಸ್ಟಾರ್ ಎಂಬ ಕಾರಣಕ್ಕಾಗಿ ಐಶ್ವರ್ಯಾ ನನ್ನನ್ನು ಮದುವೆಯಾಗಲಿಲ್ಲ. ಆಕೆ ಜಗತ್ತಿನ ಅತ್ಯಂತ ಸುಂದರ ಹುಡುಗಿ, ಬಿಗ್ ಹೀರೋಯಿನ್ ಎಂಬ ಕಾರಣಕ್ಕೆ ನಾನು ಆಕೆಯನ್ನು ಮದುವೆಯಾಗಿಲ್ಲ. ನಾವು ಪರಸ್ಪರ ಪ್ರೀತಿಸುತ್ತಿದ್ದೆವು ಅದಕ್ಕಾಗಿ ಮದುವೆಯಾದೆವು, ವಿನಃ ಬೇರೆನೂ ಅಲ್ಲ” ಎಂದು ಹೇಳಿದ್ದಾರೆ.
ಅಭಿಷೇಕ್ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ವಿಚ್ಛೇಧನ
ಈ ಸುದ್ದಿ ವೈರಲ್ ಆಗುತ್ತಿದ್ದಂತೆ Abhishek Bachchan ಹಾಗೂ Aishwarya Rai Bachchan ವಿಚ್ಛೇದನದ ಸುದ್ದಿ ಇನ್ನಷ್ಟು ಕುತೂಹಲ ಮೂಡಿಸಿತ್ತು. Abhishek Bachchan ಹಾಗೂ ಮಾಜಿ ವಿಶ್ವ ಸುಂದರಿ Aishwarya Rai Bachchan ಸದ್ಯದಲ್ಲೇ ವಿಚ್ಛೇಧನ ಪಡೆಯುತ್ತಾರೆ ಎಂಬೆಲ್ಲ ಮಾತುಕತೆ ಸಾಕಷ್ಟು ಕೇಳಿಬಂದಿದೆ. ಸದ್ಯ ಅಭಿಷೇಕ್ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ವಿಚ್ಛೇಧನ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.
ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ವಿಚ್ಛೇದನ ಪಡೆದುಕೊಳ್ಳುತ್ತಾರಾ..?
ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದಂತೆ ಈ ಸುದ್ದಿಗೆ ಸ್ಪಷ್ಟನೆ ಎಂಬಂತೆ ಮುಂಬೈನಲ್ಲಿ ನಡೆದ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಶನಲ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಸಮಾರಂಭದಲ್ಲಿ ದಂಪತಿಗಳ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಐಶ್ವರ್ಯಾ ರೈ ತನ್ನ ತಾಯಿ ಬೃಂದ್ಯಾ ರೈ ಜೊತೆ ಕಾರಿನಲ್ಲಿ ಬಂದರು. ಅಭಿಷೇಕ್ ಬಚ್ಚನ್ ತಮ್ಮ ತಂದೆ-ನಟ ಅಮಿತಾಬ್ ಬಚ್ಚನ್ ಮತ್ತು ಸೋದರಳಿಯ ಅಗಸ್ತ್ಯ ನಂದಾ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಕಾರಿನಿಂದ ಇಳಿದ ನಂತರ ಐಶ್ವರ್ಯಾ ಯಾರಿಗೋ ಕೈ ಬೀಸಿ ಮುಗುಳ್ನಕ್ಕಳು. ಐಶ್ವರ್ಯ ರೈ ಅವರ ಜೊತೆ ಅಭಿಷೇಕ್, ಅಗಸ್ತ್ಯ ಮತ್ತು ಅಮಿತಾಬ್ ಅವಳೊಂದಿಗೆ ಸೇರಿಕೊಂಡರು.
ವಿಚ್ಛೇಧನದ ಸುದ್ದಿಗೆ ಬ್ರೇಕ್ ನೀಡಿದ ಐಶ್ವರ್ಯ ಹಾಗೂ ಅಭಿಷೇಕ್ ಜೋಡಿ
ಐಶ್ವರ್ಯಾ ಕಪ್ಪು ಮತ್ತು ಗೋಲ್ಡನ್ ಸೂಟ್ ಮತ್ತು ಹೀಲ್ಸ್ ಧರಿಸಿದ್ದರು. ಅವಳು ಮ್ಯಾಚಿಂಗ್ ಬ್ಯಾಗ್ ಹಾಕಿದ್ದರು. ಅಭಿಷೇಕ್ ನೇವಿ ಬ್ಲೂ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಸ್ನೀಕರ್ಸ್ ನಲ್ಲಿ ಕಾಣಿಸಿಕೊಂಡರು. ಅಮಿತಾಭ್ ಬಣ್ಣಬಣ್ಣದ ಜಾಕೆಟ್, ಪ್ಯಾಂಟ್ ಮತ್ತು ಶೂ ಧರಿಸಿದ್ದರು. ಅಗಸ್ತ್ಯ ನಂದಾ ಬಿಳಿ ಬಣ್ಣದ ಟಿ-ಶರ್ಟ್, ಡೆನಿಮ್ ಗಳು ಮತ್ತು ಬೂಟುಗಳ ಮೇಲೆ ಬೀಜ್ ಜಾಕೆಟ್ ಅನ್ನು ಆರಿಸಿಕೊಂಡರು. ಒಟ್ಟಾಗಿ ಐಶ್ವರ್ಯ ಹಾಗೂ ಅಭಿಷೇಕ್ ಇವೆಂಟ್ ನಲ್ಲಿ ಮಿಂಚಿದ್ದಾರೆ. ಈ ಮೂಲಕ ವಿಚ್ಛೇಧನನದ ಸುದ್ದಿಗೆ ಬ್ರೇಕ್ ನೀಡಿದ್ದಾರೆ.