rtgh

Holiday List 2024 : ರಾಜ್ಯ ಸರ್ಕಾರದಿಂದ 2024ನೇ ಸಾಲಿನ ಅಧಿಕೃತ ರಜೆಗಳ ಪಟ್ಟಿ ಬಿಡುಗಡೆ.


ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ರಾಜ್ಯ ಸರ್ಕಾರವು 2024 ರ ರಜಾದಿನಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಕುತೂಹಲದಿಂದ ನಿರೀಕ್ಷಿತ ಪ್ರಕಟಣೆಯು ನಿವಾಸಿಗಳು ಮತ್ತು ವ್ಯಾಪಾರಗಳಿಗೆ ಕೆಲಸ ಮಾಡದ ದಿನಗಳ ಸ್ಪಷ್ಟ ವೇಳಾಪಟ್ಟಿಯನ್ನು ಒದಗಿಸುತ್ತದೆ, ರಜಾದಿನಗಳು, ಆಚರಣೆಗಳು ಮತ್ತು ಮುಂಚಿತವಾಗಿ ಯೋಜಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಪ್ರಮುಖ ಘಟನೆಗಳು.

List of official holidays for the year 2024 has been released by the state government
List of official holidays for the year 2024 has been released by the state government

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2024ನೇ ಸಾಲಿನ ಸರ್ಕಾರಿ ಸಾರ್ವತ್ರಿಕ, ಪರಿಮಿತ ರಜೆಗಳ ಪಟ್ಟಿಗೆ ಅನುಮೋದನೆ ನೀಡಲಾಗಿತ್ತು. ಆ ಬಳಿಕ ಅಧಿಕೃತವಾಗಿ ಆದೇಶ ಮಾಡಲಾಗಿತ್ತು. ಇಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿವರು ಇಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು ಹಾಗೂ ಪರಿಮಿತ ರಜೆಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಇನ್ನು ಓದಿ : ರಾಜ್ಯದ ಮಹಿಳೆಯರಿಗೆ ಪ್ರೇರಣಾ ಯೋಜನೆಯಲ್ಲಿ ಸಿಗಲಿದೆ ರೂ.2,50,000 ರೂ.ವರೆಗೆ ಸಹಾಯಧನ.

ಹೀಗಿದೆ 2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

 • ದಿನಾಂಕ 15-01-2024, ಸೋಮವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
 • ದಿನಾಂಕ 26-01-2024, ಶುಕ್ರವಾರ – ಗಣರಾಜ್ಯೋತ್ಸವ
 • ದಿನಾಂಕ 08-03-2024, ಶುಕ್ರವಾರ – ಮಹಾಶಿವರಾತ್ರಿ
 • ದಿನಾಂಕ 29-03-2024, ಶುಕ್ರವಾರ – ಗುಡ್ ಫ್ರೈಡೆ
 • ದಿನಾಂಕ 09-04-2024, ಮಂಗಳವಾರ – ಯುಗಾದಿ ಹಬ್ಬ
 • ದಿನಾಂಕ 11-04-2024, ಗುರುವಾರ – ಖುತುಬ್ ಎ ರಂಜಾನ್
 • ದಿನಾಂಕ 01-05-2024, ಬುಧವಾರ – ಕಾರ್ಮಿಕರ ದಿನಾಚರಣೆ
 • ದಿನಾಂಕ 10-05-2024, ಶುಕ್ರವಾರ – ಬಸವಜಯಂತಿ, ಅಕ್ಷಯ ತೃತೀಯ
 • ದಿನಾಂಕ 17-06-2024, ಸೋಮವಾರ – ಬಕ್ರೀದ್
 • ದಿನಾಂಕ 17-07-2024, ಬುಧವಾರ – ಮೋಹರಂ ಕಡೇ ದಿನ
 • ದಿನಾಂಕ 15-08-2024, ಗುರುವಾರ – ಸ್ವಾತಂತ್ರ್ಯ ದಿನಾಚರಣೆ
 • ದಿನಾಂಕ 07-09-2024, ಶನಿವಾರ – ವರಸಿದ್ಧಿ ವಿನಾಯಕ ವ್ರತ
 • ದಿನಾಂಕ 16-09-2024, ಸೋಮವಾರ – ಈದ್ ಮಿಲಾದ್
 • ದಿನಾಂಕ 02-10-2024, ಬುಧವಾರ – ಗಾಂಧಿ ಜಯಂತಿ, ಮಹಾಲಯ ಅಮವಾಸ್ಯೆ
 • ದಿನಾಂಕ 11-10-2024, ಶುಕ್ರವಾರ – ಮಹಾನವಮಿ, ಆಯುಧಪೂಜೆ
 • ದಿನಾಂಕ 17-10-2024, ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ
 • ದಿನಾಂಕ 31-10-2024, ಗುರುವಾರ – ನರಕ ಚತುರ್ದಶಿ
 • ದಿನಾಂಕ 01-11-2024, ಶುಕ್ರವಾರ – ಕನ್ನಡ ರಾಜ್ಯೋತ್ಸವ
 • ದಿನಾಂಕ 02-11-2024, ಶನಿವಾರ – ಬಲಿಪಾಡ್ಯಮಿ, ದೀಪಾವಳಿ
 • ದಿನಾಂಕ 18-11-2024, ಸೋಮವಾರ – ಕನಕದಾಸ ಜಯಂತಿ
 • ದಿನಾಂಕ 25-12-2024, ಬುಧವಾರ – ಕ್ರಿಸ್ ಮಸ್.

ಸೂಚನೆ
1.ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
2.ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3.ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
4.ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
5. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.

6.ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2024ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.

ಹೀಗಿದೆ 2024ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಪರಿಮಿತ ರಜೆಗಳ ಪಟ್ಟಿ

 • ದಿನಾಂಕ 01-01-2024, ಸೋಮವಾರ – ನೂತನ ವರ್ಷಾರಂಭ
 • ದಿನಾಂಕ 25-03-2024, ಸೋಮವಾರ – ಹೋಳಿಹಬ್ಬ
 • ದಿನಾಂಕ 30-03-2024, ಶನಿವಾರ – ಹೋಲಿ ಸ್ಯಾಟರ್ ಡೇ
 • ದಿನಾಂಕ 05-04-2024, ಶುಕ್ರವಾರ – ಜುಮತ್ ಉಲ್ ವಿದಾ
 • ದಿನಾಂಕ 06-04-2024, ಶನಿವಾರ- ಷಬ್ ಎ ಖಾದರ್
 • ದಿನಾಂಕ 17-04-2024, ಬುಧವಾರ – ಶ್ರೀರಾಮನವಮಿ
 • ದಿನಾಂಕ 25-05-2024, ಗುರುವಾರ – ಬುದ್ಧ ಪೂರ್ಣಿಮ
 • ದಿನಾಂಕ 16-08-2024, ಶುಕ್ರವಾರ – ಶ್ರೀ ವರಮಹಾಲಕ್ಷ್ಮಿ ವ್ರತ
 • ದಿನಾಂಕ 19-08-2024, ಸೋಮವಾರ – ಋಗ್ ಉಪಕರ್ಮ, ಯಜುರ್ ಉಪ ಕರ್ಮ
 • ದಿನಾಂಕ 20-08-2024, ಮಂಗಳವಾರ – ಬ್ರಹ್ಮಶ್ರೀ ನಾರಾಯಣಗುರು ಜಯಂತಿ
 • ದಿನಾಂಕ 26-08-2024, ಸೋಮವಾರ- ಶ್ರೀಕೃಷ್ಣ ಜನ್ಮಾಷ್ಟಮಿ
 • ದಿನಾಂಕ 06-09-2024, ಶುಕ್ರವಾರ – ಸ್ವರ್ಣಗೌರಿ ವ್ರತ
 • ದಿನಾಂಕ 17-09-2024, ಮಂಗಳವಾರ – ವಿಶ್ವಕರ್ಮ ಜಯಂತಿ
 • ದಿನಾಂಕ 15-11-2024, ಶುಕ್ರವಾರ – ಗುರುನಾನಕ್ ಜಯಂತಿ
 • ದಿನಾಂಕ 24-12-2024, ಮಂಗಳವಾರ – ಕ್ರಿಸ್ ಮಸ್ ಈವ್

ಸೂಚನೆ:
1.ಮಧ್ವ ನವಮಿ (18.02.2024), ಷಬ್-ಎ-ಬರಾತ್ (25.02.2024), ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ (12.05.2024), ಕನ್ಯಾ ಮರಿಯಮ್ಮ ಜಯಂತಿ (08.09.2024) ಮತ್ತು ತಿರು ಓಣಂ (15.09.2024) ಭಾನುವಾರದಂದು, ಸೌರಮಾನ ಯುಗಾದಿ/ ದೇವರ ದಾಸೀಮಯ್ಯ ಜಯಂತಿ (13.04.2024) ಹಾಗೂ ಹುತ್ತರಿ ಹಬ್ಬ (14.12.2024) ಎರಡನೇ ಶನಿವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
2. ಅನಂತ ಪದ್ಮನಾಭ ವ್ರತ (16.09.2024) ಸೋಮವಾರ ಈದ್-ಮಿಲಾದ್ ಹಾಗೂ ತುಲಾ ಸಂಕ್ರಮಣ (17.10.2024) ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.


Leave a Reply

Your email address will not be published. Required fields are marked *