ಬೆಂಗಳೂರು : ವಿಧಾನ ಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ನೋಂದಣಿ ತಿದ್ದುಪಡಿ ವಿಧೇಯಕ- 2024 ಸೇರಿದಂತೆ 3 ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡವು. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ನೋಂದಣಿ ತಿದ್ದುಪಡಿ ವಿಧೇಯಕಗಳನ್ನು 2024 ಮಂಡಿಸಿದರು.
ಕಡ್ಡಾಯವಾಗಿ ಎಲ್ಲಾ ಆಸ್ತಿ ನೋಂದಣಿಯನ್ನು ಇನ್ಮುಂದೆ ಡಿಜಿಟಲ್ ವೇದಿಕೆಯಲ್ಲಿ ಮಾಡಬೇಕು. ಪೇಪರ್ ಗಳಲ್ಲಿ ನೋಂದಣಿ ಮಾಡುವ ಕಾರ್ಯದಿಂದಾಗಿ ಸರ್ಕಾರಕ್ಕೆ ಹೆಚ್ಚು ನಷ್ಟವಾಗುತ್ತಿದೆ ಎನ್ನಲಾಗಿದ್ದು, ಈ ಹೊಸ ನಿಯಮ ವಿಧಾಸಭೆಯಲ್ಲಿ ಅಂಗೀಕಾರವಾಗಿದೆ.
ಇದನ್ನೂ ಸಹ ಓದಿ: ಭಾರತೀಯ ರೈಲ್ವೆ 622 ಖಾಲಿ ಹುದ್ದೆಗಳಿಗೆ ಭರ್ಜರಿ ನೇಮಕಾತಿ!! ಕೂಡಲೇ ಅರ್ಜಿ ಸಲ್ಲಿಸಿ
ಇನ್ಮುಂದೆ ಪೇಪರ್ಖಾತಾ ಆಧಾರದಲ್ಲಿ ನೋಂದಣಿಯನ್ನು ಮಾಡುವುದು ರದ್ದು ಮಾಡುತ್ತಿದ್ದೇವೆ. ಇನ್ಮುಂದೆ ನೋಂದಣಿ ಮಾಡಲು ಇ-ಆಸ್ತಿ ಕಡ್ಡಾಯ ಮಾಡಲಾಗಿದೆ. ಕಡ್ಡಾಯವಾಗಿ ನೋಂದಾಯಿಸಲಾಗುವ ಆಯ್ದ ದಾಖಲೆಗಳ ಇ- ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಾವಣೆ ಮಾಡಲಾಗುವುದು.
ಗ್ರಾಮೀಣ ಪ್ರದೇಶಕ್ಕೆ ಇ- ಸ್ವತ್ತು, ನಗರ ಪ್ರದೇಶಕ್ಕೆ ಇ- ಆಸ್ತಿ ನೋಂದಣಿ ಆಟೋಮೆಟಿಕ್ ಆಗಿ ಪರಿಶೀಲನೆ ಆಗುತ್ತದೆ. ಕಾನೂನು ಬಾಹಿರವಾದ ನೋಂದಣಿಗಳಿಗೆ ಕಡಿವಾಣ ಹಾಕಲು ಈ ತಿದ್ದುಪಡಿಯನ್ನು ತರಲಾಗುತ್ತಿದೆ. ಬಿಡಿಎ ಖಾತೆ ಅಥವಾ ಇ ಖಾತಾ ಇದ್ದರೆ ಮಾತ್ರ ಈ ನೋಂದಣಿಯು ಆಗಲಿದೆ ಎಂದರು.
ಇತರೆ ವಿಷಯಗಳು:
ಬಡವರ ಬಂಧು ಒಂದು ದಿನದಲ್ಲಿ ಸಾಲ ಯೋಜನೆ!! ಸಿಎಂ ನಿಂದ ಭರ್ಜರಿ ಚಾಲನೆ
ಇನ್ಮುಂದೆ ಪ್ರತಿ ರೈತರ ಖಾತೆಗೆ ₹10,000 ಜಮಾ! ಹೊಸ ಯೋಜನೆ ಘೋಷಿಸಿದ ಮುಖ್ಯಮಂತ್ರಿ