LIC ಪಿಂಚಣಿ ಜೀವವಿಮ ಪಾಲಿಸಿ ಸೇರಿದಂತೆ ಹಲವಾರು ಅವಕಾಶಗಳನ್ನು ಇಂದು ಹೂಡಿಕೆ ಮಾಡಲು ಎಲ್ಐಸಿ ನೀಡಿದೆ. ಅದೇ ರೀತಿ ಹೆಣ್ಣು ಮಕ್ಕಳ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಐಸಿಯು ಹೊಸ ಯೋಜನೆ ಒಂದನ್ನು ಪ್ರಾರಂಭ ಮಾಡಿದೆ ಅದುವೇ ಕನ್ಯಾದಾನ ಪಾಲಿಸಿಯಾಗಿದ್ದು.
ಈ ಯೋಜನೆಯ ಮೂಲಕ ಹುಡುಗಿ ಮಾಡಿರುವಂತಹ ಹಣದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗಾಗಿ ಪೋಷಕರು ಖರ್ಚು ಮಾಡಬಹುದಾಗಿದೆ. ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಕನ್ಯಾ ದಾನ ಯೋಜನೆಯ ಮೂಲಕ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ.
LIC ಕನ್ಯಾದಾನ ಯೋಜನೆಯ ಪ್ರಯೋಜನಗಳು :
ತಿಂಗಳಿಗೆ ಮೂರು ತಿಂಗಳಿಗೆ 6 ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಂ ಕಟ್ಟುವ ಅವಕಾಶವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗಿದ್ದು ಎಲ್ಐಸಿ ಕನ್ಯಾ ಧಾನ ಪಾಲಿಸಿ ಅವಧಿ 25 ವರ್ಷಗಳ ವರೆಗೆ ಇರುತ್ತದೆ.
ಯಾವುದೇ ಮುತ್ತಕ್ಕೂ ಈ ಪಾಲಿಸಿಯಲ್ಲಿ ತೆರಿಗೆ ಇರುವುದಿಲ್ಲ ಒಂದು ವೇಳೆ ಅಪಘಾತದಲ್ಲಿ ಪಾಲಿಸಿಯ ಫಲಾನುಭವಿ ಮೃತಪಟ್ಟರೆ ಆತನ ಕುಟುಂಬದ ಸದಸ್ಯರಿಗೆ 10 ಲಕ್ಷ ರೂಪಾಯಿಗಳ ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಈ ಕನ್ಯಾ ದಾನ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪೋಷಕರು ತಮ್ಮ ಹೆಣ್ಣು ಮಕ್ಕಳ ಮದುವೆ ಖರ್ಚು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ವೆಚ್ಚಗಳಿಗೂ ಹಣವನ್ನು ಖರ್ಚು ಮಾಡಬಹುದಾಗಿದೆ.
31 ಲಕ್ಷ ರೂಪಾಯಿ ಪಡೆಯಬಹುದು :
ದಿನಕ್ಕೆ ಕೇವಲ 151 ರೂಪಾಯಿಗಳನ್ನು ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 4530 ರೂಪಾಯಿಗಳು ಆಗುತ್ತದೆ ಅದೇ ರೀತಿ ಹೆಣ್ಣು ಮಗುವಿಗೆ 25 ವರ್ಷ ಪೂರೈಸಿದ ನಂತರ ಈ ಕನ್ಯಾ ದಾನ ಪಾಲಿಸಿಯಲ್ಲಿ 31 ಲಕ್ಷ ಮೊತ್ತವನ್ನು ಪಡೆಯಬಹುದಾಗಿದೆ. ಅದೇ ರೀತಿ 121 ರೂಪಾಯಿಗಳನ್ನು ದಿನಕ್ಕೆ ಹೂಡಿಕೆ ಮಾಡಿದರೆ 25 ವರ್ಷಗಳಾದ ನಂತರ 27 ಲಕ್ಷವನ್ನು ಕನ್ಯದಾನ ಪಾಲಿಸಿಯಲ್ಲಿ ಪಡೆಯಬಹುದು.
ಕನ್ಯಾದಾನ ಪಾಲಿಸಿಯ ನಿಯಮಗಳು :
ಎಲ್ಐಸಿ ಯಾ ಕನ್ಯಾ ದಾನ ಪಾಲಿಸಿ ಗೆ ಹೂಡಿಕೆ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ಎಲ್ಐಸಿ ಕಂಪನಿಯು ಯೋಜನೆಗೆ ಸಂಬಂಧಿಸಿ ದಂತೆ ವಿಧಿಸಿದೆ.
- ಕನ್ಯಾ ದಾನ ಯೋಜನೆ ಎಲ್ಲಿ ಹೂಡಿಕೆ ಮಾಡಬೇಕೆಂದರೆ ವಿಮೆ ಮಾಡಿಸುವಂತಹ ಮಗುವಿನ ತಂದೆಯ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು.
- ಹೆಣ್ಣು ಮಗುವಿಗೆ ಕನಿಷ್ಠ ಒಂದು ಒಂದು ವರ್ಷಗಳಾದರೂ ಆಗಿರಬೇಕು.
- ಇನ್ನು ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ತಂದೆಯ ಮತ್ತು ಮಗುವಿನ ಆಧಾರ್ ಕಾರ್ಡ್ ಪ್ರತಿ
- ಆದಾಯ ಪ್ರಮಾಣ ಪತ್ರ.
- ವಿಳಾಸ ಪ್ರಮಾಣ ಪತ್ರ
- ಮಗುವಿನ ಜನನ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
ಹೀಗೆ ಕೆಲವೊಂದು ದಾಖಲೆಗಳನ್ನು ಕನ್ಯಾಧನ ಪಾಲಿಸಿ ಮಾಡುವ ಸಂದರ್ಭದಲ್ಲಿ ನೀಡಬೇಕಾಗುತ್ತದೆ.
ಒಟ್ಟಾರೆ ಎಲ್ಐಸಿ ಕಂಪನಿಯು ಇದೀಗ ಹೆಣ್ಣು ಮಗುವಿನ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಆ ಮಗುವಿನ ಪೋಷಕರು ಹೂಡಿಕೆ ಮಾಡಿದರೆ ಸುಮಾರು 31 ಲಕ್ಷ ರೂಪಾಯಿಗಳವರೆಗೆ ಮೊತ್ತವನ್ನು ಪಡೆಯಬಹುದಾಗಿದೆ