ಸ್ನೇಹಿತರೆ ಇನ್ನೇನು ಲೋಕಸಭಾ ಚುನಾವಣೆಯ ಸ್ಟಾರ್ಟಾಗಲಿದ್ದು ಸರ್ಕಾರವು ವೋಟರ್ ಐಡಿ ಇರುವಂತಹ ಪ್ರಜೆಗಳ ಲಿಸ್ಟನ್ನು ರಿಲೀಸ್ ಮಾಡಿದೆ. ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ವಾ ಎಂದು ಪರಿಶೀಲಿಸಿ.
ಇನ್ನೇನು 2024ರಲ್ಲಿ ಲೋಕಸಭಾ ಚುನಾವಣೆಯು ಪ್ರಾರಂಭವಾಗಲಿದ್ದು ಲೋಕಸಭಾ ಚುನಾವಣೆಯ ಸಿದ್ಧತೆಗಳು ಕೂಡ ಭಾರಿ ಬಿರುಸಿನಿಂದ ಸಾಗುತ್ತಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರು ಆಡಳಿತದಲ್ಲಿ ನಿಲ್ಲುತ್ತಾರೆ ಎಂಬ ಕುತೂಹಲ ಸಾಕಷ್ಟ ಜನರನ್ನು ಕಾಡುತ್ತಿದೆ ಅದರ ಜೊತೆಗೆ ಅಭ್ಯರ್ಥಿಗಳು ತಮಗೆ ಬೇಕಾದಂತಹ ಎಲ್ಲಾ ಸಿದ್ಧತೆಗಳನ್ನು ಮತ್ತು ಮತ ಚಲಾಯಿಸಲು ಬೇಕಾದಂತಹ ಎಲ್ಲಾ ವ್ಯವಸ್ಥೆಗಳಲ್ಲಿ ಈಗಾಗಲೇ ಮಾಡಿಕೊಂಡಿದ್ದಾಗಿದೆ.
ಇನ್ನೇನು ಲೋಕಸಭಾ ಚುನಾವಣೆಯು ಕೆಲವೇ ದಿನಗಳಲ್ಲಿ ಜರುಗಲಿದೆ. ಇಂದು ಅದಕ್ಕೆ ಅನೇಕರು ಮತ್ತು ಪಕ್ಷದ ನಾಯಕರುಗಳು ಬಹಳಷ್ಟು ಶ್ರಮಿಸುತ್ತಾ ಬಂದಿದ್ದು ವಿವಿಧ ರೀತಿಯಾದಂತಹ ಆಶ್ವಾಸನೆ ಗಳಿಂದ ನಾಯಕರಗಳು ಮತದಾರರಲ್ಲಿ ಸೆಳೆಯಲು ಮುಂದಾಗಿದ್ದಾರೆ.
ಮೊಬೈಲ್ ನಲ್ಲಿ ಮತದಾರರ ಲಿಸ್ಟ್ ಚೆಕ್ ಮಾಡುವ ವಿಧಾನ :
ಲೋಕಸಭಾ ಚುನಾವಣೆಯ ದಿನಗಳು ಇನ್ನೇನು ಹತ್ತಿರವಾಗುತ್ತಿದ್ದಂತೆ ಮತದಾರರ ಪಟ್ಟಿಯನ್ನು ಇದೀಗ ಸರ್ಕಾರ ಬಿಡುಗಡೆ ಮಾಡಿದೆ. ಹೊಸ ಮೆದದರ ಪಟ್ಟಿಗೆ ಇನ್ನೂ ಹಲವರು ದಾಖಲಾಗಿದ್ದರೆ ವೋಟರ್ ಐಡಿ ಪಡೆಯಲು ಇನ್ನೂ ಕೆಲವರು ಅರ್ಜಿಯನ್ನು ಕೂಡ ಸಲ್ಲಿಸಿದ್ದರು.
ಈ ಬಾರಿ ಮತದಾರರ ಪಟ್ಟಿಯನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದಾಗಿತ್ತು ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ಚುನಾವಣಾ ಆಯೋಗವು ಒಂದು ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದ್ದು ನಮ್ಮ ನೋಂದಣಿ ದಾಖಲೆಗಳನ್ನು ದಾಖಲು ಮಾಡುವುದರ ಮೂಲಕ ಮತದಾರರ ಪಟ್ಟಿಯನ್ನು ಅದರಲ್ಲಿ ಸುಲಭವಾಗಿ ತಿಳಿಯಬಹುದು.
ಮತದಾರರ ಹೆಸರು ಚೆಕ್ ಮಾಡುವ ವಿಧಾನಗಳು :
- ಮತದಾರರ ಹೆಸರನ್ನು ಚೆಕ್ ಮಾಡಬೇಕಾದರೆ ಬದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- https://ceo.karnataka.gov.in
- ಈ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ 2024 ರ ಮತದಾರರ ಪಟ್ಟಿ ಅಥವಾ ಸಾರ್ವತ್ರಿಕ ಚುನಾವಣೆ ಎಂಬ ಪಕ್ಷದಲ್ಲೂ ನೀವು ಆಯ್ಕೆ ಮಾಡಿಕೊಳ್ಳಬೇಕು
- ಅದರಲ್ಲಿ ಕೇಳಲಾಗುವಂತಹ ತಾಲೂಕು ಜಿಲ್ಲೆ ಮತ್ತು ಹೋಬಳಿ ಹಾಗೂ ಗ್ರಾಮಕ್ಕೆ ಸೇರಿದವರಾಗಿದ್ದರೆ ಗ್ರಾಮ ಮತ್ತು ವೋಟರ್ ಐಡಿ ನಂಬರ್ಗಳನ್ನು ದಾಖಲಿಸಬೇಕು.
- ನಂಬರ್ ಗಳನ್ನು ದಾಖಲಿಸಿದ ನಂತರ ನಿಮ್ಮ ವಿಧಾನ ಕ್ಷೇತ್ರ ಯಾವುದು ಎಂಬುದು ಆಯ್ಕೆ ಮಾಡಿಕೊಂಡು ಅದನ್ನು ಕೂಡ ದಾಖಲಿಸಬೇಕು.
- ಅದಾದ ನಂತರ ನಿಮ್ಮ ನೋಂದಣಿ ಯಾಗಿರುವಂತಹ ಮೊಬೈಲ್ ನಂಬರ್ ಅನ್ನು ನಮೂದಿಸಿದರೆ ಆ ಮೊಬೈಲ್ ನಂಬರ್ ಗೆ ನಿಮಗೆ ಓಟಿಪಿ ಎಂದು ಕಳುಹಿಸಲಾಗುತ್ತದೆ.
- ಆ ಓಟಿಪಿ ಎಂದು ನಮೂದಿಸಿದ ನಂತರ ನಮ್ಮ ಹೆಸರು ಬಂದಿದೆಯೇ ಇಲ್ಲವೇ ಎಂಬುದನ್ನು ಅದರಲ್ಲಿ ಪರಿಶೀಲಿಸಬಹುದು.
- ಅಲ್ಲದೇ ಇದೀಗ ಈ ವೆಬ್ ಸೈಟಲ್ಲಿ ಮತದಾರರ ಗುರುತಿನ ಚೀಟಿ ಎಂದು ಹೊಸದಾಗಿ ಪಡೆದುಕೊಳ್ಳಲು ಕೂಡ ಅರ್ಜಿಯನ್ನು ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ.
ಹೊಸ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಹೊಸದಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಚುನಾವಣಾ ಆಯೋಗವು ಈ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಹೊಸದಾಗಿ ಅರ್ಜಿ ಸಲ್ಲಿಸಲು ಬೇಕಾದ ಕೆಲವು ದಾಖಲೆಗಳೆಂದರೆ,
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ರಿಜಿಸ್ಟರ್ ಮಾಡಿದಂತಹ ಮೊಬೈಲ್ ನಂಬರ್
- ಅಡ್ರೆಸ್ ಪ್ರೂಫ್
ಹೀಗೆ ಎಲ್ಲ ಅಗತ್ಯ ದಾಖಲೆಗಳದ್ದು ಅರ್ಜಿಯನ್ನು ಸಲ್ಲಿಸುವುದರ ಮೂಲಕ ಅರ್ಜಿದಾರರು ಹೊಸದಾಗಿ ವೋಟರ್ ಐಡಿಯನ್ನು ಪಡೆಯಬಹುದಾಗಿದೆ.
ಒಟ್ಟಾರೆ ಸುಧಾಮನ ಆಯೋಗವು ಈ ಬಾರಿಯ 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ 2024 ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಹಾಗೂ ಬಿಡುಗಡೆ ಮಾಡಲು ಅಧಿಕೃತ ವೆಬ್ಸೈಟ್ ಅನ್ನು ಕೂಡ ತಿಳಿಸಿದೆ ಅಲ್ಲದೆ ಈ ವೆಬ್ಸೈಟ್ನಲ್ಲಿ ಹೊಸದಾಗಿ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಕೂಡ ಅವಕಾಶವನ್ನು ಕಲ್ಪಿಸಿದೆ.
ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಗುರುತಿನ ಚೀಟಿಯನ್ನು ಹೊಂದಿಲ್ಲದೆ ಇದ್ದರೆ ತಕ್ಷಣವೇ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ತಿಳಿಸಿ ಧನ್ಯವಾದಗಳು.