ನಮಸ್ಕಾರ ಸ್ನೇಹಿತರೆ ಸರ್ಕಾರವು ಚಾಕು ಪ್ರಾಣಿಗಳ ಆಕಸ್ಮಿಕ ಮರಣಕ್ಕೆ 10 ಸಾವಿರ ರೂವನ್ನು ಘೋಷಣೆ ಮಾಡಿದೆ ಆದರೆ ಇದಕ್ಕೆ ಈ ಯೋಜನೆ ಅಡಿ ನೀವು ಅಪ್ಲೈ ಮಾಡಬಹುದಾಗಿದೆ ಸ್ನೇಹಿತರೆ ಈ ಯೋಜನೆಗೆ ನೀವಿನ್ನು ಅಪ್ಲೈ ಮಾಡಿಲ್ಲ ಎಂದರೆ ಈ ಕೂಡಲೇ ಅಪ್ಲೈ ಮಾಡಿ ಮತ್ತು ಈ ಯೋಜನೆಗೆ ಅರ್ಹತೆಗಳು ಮತ್ತು ಹೇಗೆ ಅಪ್ಲೈ ಮಾಡಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ.
ಈ ಯೋಜನೆ ಅಡಿಯಲ್ಲಿ ಅನೇಕ ರೈತರು ಹಾಗೂ ಪಶು ಸಾಕಾಣಿಕೆ ಮಾಡುತ್ತಿರುವವರು ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಇದರಿಂದ ಯಾವುದೇ ವ್ಯಕ್ತಿಗೆ ನಷ್ಟವಾಗುವುದಿಲ್ಲ ಹಾಗೂ ಈ ಯೋಜನೆಯಿಂದ ಜನರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಕುರಿ/ಮೇಕೆಗಳು, ಹಸು, ಎಮ್ಮೆ & ಎತ್ತು ಆಕಸ್ಮಿಕವಾಗಿ ಮರಣ ಹೊಂದಿದರೆ ಅನುಗ್ರಹ ಕೊಡುಗೆ ಯೋಜನೆಯಡಿಯಲ್ಲಿ ಮಾಲೀಕರುಗಳಿಗೆ ಪರಿಹಾರ ಧನವನ್ನು ನೀಡಲಾಗುವುದು. ಸರ್ಕಾರ ಎಷ್ಟು ಪರಿಹಾರವನ್ನು ನೀಡುತ್ತದೆ ಎಂಬ ಎಲ್ಲಾ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಹೌದು ಸರ್ಕಾರವು ಈ ಯೋಜನೆಯ ಮೂಲಕ ಕುರಿ, ಮೇಕೆ, ಹಸು, ಎಮ್ಮೆ & ಎತ್ತುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ. ಅಂತಹ ಸಂದರ್ಭದಲ್ಲಿ ಮಾಲೀಕರುಗಳಿಗೆ ಪರಿಹಾರ ಹಣ ನೀಡಲಾಗುತ್ತದೆ.
ಯಾವುದೇ ರೋಗದಿಂದ ಹಸು, ಎಮ್ಮೆ, ಎತ್ತು, ಕುರಿ, ಮೇಕೆ ಮೃತಪಟ್ಟರೆ ತಕ್ಷಣ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ನಿಧಾನ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಾರೆ.
ಅನುಗ್ರಹ ಕೊಡುಗೆ ಯೋಜನೆ
- ಕುರಿ/ಮೇಕೆಯುನ್ನು ಸಾಕಿದ 3-6 ತಿಂಗಳ ಒಳಗಾಗಿ ಮರಣ ಹೊಂದಿದರೆ ಅಂತಹ ಪ್ರತಿ ಕುರಿ/ಮೇಕೆ ಮರಿಗಳಿಗೆ ತಲಾ 2,500 ರೂ. ಸಹಾಯಧನ ಸರ್ಕಾರ ನೀಡುತ್ತದೆ.
- ಮಾಲೀಕರು ಸಾಕಿರುವ ಕುರಿ/ಮೇಕೆಯು 6 ತಿಂಗಳು ಮೇಲ್ಪಟ್ಟು ಮರಣಿಸಿದರೆ ಪ್ರತಿ ಕುರಿ/ಮೇಕೆಗಳಿಗೆ 5,000 ರೂ. & ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ನೀಡಲಾಗುತ್ತದೆ.
ಅರ್ಹತೆಗಳು:
ಮರಣ ಹೊಂದಿದ ಕುರಿ/ಮೇಕೆ, ಹಸು, ಎಮ್ಮೆ, ಎತ್ತುಗಳ ಶವ ಪರೀಕ್ಷೆಗೆ ಮೊದಲು & ಶವ ಪರೀಕ್ಷೆ ನಂತರದ ಭಾವಚಿತ್ರಗಳಲ್ಲಿ ಫಲಾನುಭವಿ & ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಇರುವ ಜಿ.ಪಿ.ಆರ್.ಎಸ್ ಭಾವಚಿತ್ರಗಳನ್ನು ತೆಗೆದು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ದೃಢೀಕರಿಸುವುದು.
ಮರಣಿಸಿದ ಕುರಿ/ಮೇಕೆ, ಹಸು, ಎಮ್ಮೆ, ಎತ್ತುಗಳ ಭಾವಚಿತ್ರಗಳನ್ನು ಸಂಬಂಧಪಟ್ಟ ಪಶುವೈದ್ಯರು, ಸಹಾಯಕ ನಿರ್ದೇಶಕರು ಪರಿಶೀಲಿಸಿ ಸಲ್ಲಿಸುವುದು ಮತ್ತು ಮರಣೀಸಿದ ಕುರಿ/ಮೇಕೆ, ಹಸು, ಎಮ್ಮೆ, ಎತ್ತುಗಳ ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಶವ ಪರೀಕ್ಷೆ ನಡೆಸಿದ ಪಶುವೈದ್ಯರೇ ವೈಯುಕ್ತಿಕ ಜವಾಬ್ದಾರರಾಗಿರುತ್ತಾರೆ.
ಮರಣೋತ್ತರ ವರದಿ, ಫೋಟೋಗಳು, ಫಲಾನುಭವಿ ಅರ್ಜಿ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ & ಮುಂಗಡ ಹಣ ಸಂದಾಯ ರಶೀದಿಯಲ್ಲಿ ಫಲಾನುಭವಿಗಳ ಸಹಿ, ಪೂರ್ಣ ವಿಳಾಸ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ತಪ್ಪದೇ ವೋಚರಳನ್ನು ದೃಢೀಕರಿಸಿ ಸಲ್ಲಿಸಬೇಕು.