ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಅರಂಭದಲ್ಲಿ ಅನೇಕ ತೊಂದರೆಗಳು ಎದುರಾಗಿದ್ದವು. ಒಂದೆಡೆ ಅಕ್ಕಿ ನೀಡಲು ಕೇಂದ್ರ ನಿರಾಕರಿಸಿದ್ದು ಇನ್ನೊಂದೆಡೆ ಅಕ್ಕಿ ಖರೀದಿಸಲು ರಾಜ್ಯಕ್ಕೆ ಕಷ್ಟವಾಗಿದ್ದು ಹೀಗೆ ಹಲವಾರು ಸಮಸ್ಯೆಗಳ ಬಳಿಕವೂ ಕೂಡ ರಾಜ್ಯ ಸರ್ಕಾರ (State Government) 5 ಕೆಜಿ ಅಕ್ಕಿ ಜೊತೆ ಉಳಿದ ಅಕ್ಕಿ ಬದಲು ಜನರ ಖಾತೆಗೆ ಹಣ ಹಾಕುವ ಕೆಲಸ ಮಾಡಿತ್ತು.

anna bhagya yojana in kannda
ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ
ಇದೀಗ ಈ ಅನ್ನಭಾಗ್ಯ (Anna Bhagya)ಯೋಜನೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಹೌದು ರಾಜ್ಯ ಸರ್ಕಾರ ಅಕ್ಕಿಯನ್ನು ಇದೀಗ ಆಂದ್ರಪ್ರದೇಶದ ಮೂಲಕ ಖರೀದಿಸಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಾಕಿ 5 ಕೆಜಿ ಅಕ್ಕಿಯ ಕೊರತೆ ಇದೀಗ ನೀಗಲಿದ್ದು ಜನರು ಒಟ್ಟಾರೆಯಾಗಿ ಸರ್ಕಾರ ಹೇಳಿದಂತೆ 10 ಕೆಜಿ ಅಕ್ಕಿಯನ್ನೇ ನೀಡಲಿದೆ.
ಇನ್ನು ಆಹಾರ ಸಚಿವ ಮುನಿಯಪ್ಪ ಹಾಗು ಆಂಧ್ರದ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು ಶೀಘ್ರದಲ್ಲೇ ಅನುಮತಿ ನೀಡಿದರೆ ಆಂಧ್ರ ಸರ್ಕಾರ ಅಕ್ಕಿ ರವಾನಿಸುವ ಕೆಲಸ ಮಾಡಲಿದೆ. ಒಟ್ಟಾರೆಯಾಗಿ ಕೊನೆಗೂ ಅನಭಾಗ್ಯಕ್ಕೆ ಎದುರಾಗಿದ್ದ ಸಂಕಟ ಕೊನೆಗೊಳ್ಳಲಿದೆ.
ಈ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲಿದೆ
ಇನ್ನು 4 ಗ್ಯಾರಂಟಿಗಳಲ್ಲಿ ಸದ್ಯ ಈಗ ಬಾಕಿ ಉಳಿದಿರುವುದು ಕೇವಲ ಯುವನಿಧಿ ಮಾತ್ರ. ಈ ಯುವನಿಧಿ ಯೋಜನೆಗೂ ಯಾವುದೇ ಅಂತಿಮ ದಿನಾಂಕ ಇಲ್ಲ ಎಂದು ಸರ್ಕಾರ ಹೇಳಿದೆ. ಡಿಸೇಂಬರ್ ವೇಳೆಯಲ್ಲಿ ಈ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಹಾಗೆಯೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಎಲ್ಲರಿಗು ಗ್ರಹಲಕ್ಷ್ಮಿ ಯೋಜನೆಯ 2000 ರೂ ಖಾತೆಗೆ ಜಮೆ ಆಗಲಿದೆ.
ಸದ್ಯ 5 ಗ್ಯಾರಂಟಿಗಳನ್ನು ಬಹುತೇಕವಾಗಿ ಈಡೇರಿಸುವ ಕಾಂಗ್ರೆಸ್ ಸರ್ಕಾರ ಇದೀಗ ಸಂತಸದಲ್ಲಿದೆ. ಆದರೆ ಪ್ರತಿಪಕ್ಷಗಳು ಇದರ ಬಗ್ಗೆ ಯಾವ ಅಭಿಪ್ರಾಯ ಹೊರಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಬಿಜೆಪಿ 200 ಯೂನಿಟ್ ಕರೆಂಟ್ ಫ್ರೀ ಎಂದು ಎಲ್ಲರಿಗು ನೀಡದಿರುವುದು ಸರಿಯಲ್ಲ ಎಂದು ವಾದಿಸಿದೆ. ಬರಿ ಬೊಗಳೆ ಗ್ಯಾರಂಟಿ ಕೊಟ್ಟು ಆ ಗ್ಯಾರಂಟಿಗಳಿಗೆ ಕಂಡೀಷನ್ ಹಾಕಿ ಜನರಿಗೆ ಮೋಸ ಮಾಡಿದೆ ಎಂದು ಅನೇಕ ನಾಯಕರುಗಳು ತಿಳಿಸಿದ್ದಾರೆ
- ಸಮಾಜ ಕಲ್ಯಾಣ ಇಲಾಖೆಯ ನೂತನ ಯೋಜನೆ – ಭೂಮಿ ಖರೀದಿಗೆ ಶೇ. 50% ಸಹಾಯಧನ! - August 31, 2025
- Bele Parihara 2025: ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್ - August 30, 2025
- NextGen Edu Scholarship – ಪಿಯುಸಿ ವಿದ್ಯಾರ್ಥಿಗಳಿಗೆ ನೆಕ್ಸ್ಟ್ಜೆನ್ ₹15,000 ವಿದ್ಯಾರ್ಥಿವೇತನ ಪಡೆಯಲು ಅವಕಾಶ! - August 30, 2025