ಮೈಕ್ರೋಸಾಫ್ಟ್ ನ ಸ್ಟಾರ್ಟ್ ಅಪ್ ಆಗಿರುವ ಓಪನ್‌ಎಐ(OpenAI) GPT-4 ಅನ್ನು ಪ್ರಾರಂಭಿಸಿದ್ದು, ಟೆಕ್ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಯಾಕೆಂದರೆ ಆರು ತಿಂಗಳ ಹಿಂದೆ ಪರಿಚಯಿಸಲಾಗಿದ್ದ ಚಾಟ್ GPT ಯ ಉತ್ತರಾಧಿಕಾರಿಯಾಗಿರುವ ಇದು ಅಪಾರ ಸಾಮರ್ಥ್ಯವನ್ನು ಪಡೆದುಕೊಂಡಿದೆ.
chat gpt information in kannada
ಹೌದು, ಚಾಟ್ GPT-4 ಅತ್ಯಂತ ಪ್ರಬಲವಾದ ಕೃತಕ ಬುದ್ಧಿಮತ್ತೆಯ ಮಾದರಿಯಾಗಿದ್ದು, ಈ ಮೂಲಕ ಬಳಕೆದಾರರನ್ನು ತಲ್ಲೀನಗೊಳಿಸುವ ಸೌಲಭ್ಯಗಳನ್ನು ಪಡೆದುಕೊಂಡಿದೆ. ಯಾಕೆಂದರೆ ಇದು ಮಲ್ಟಿಮಾಡಲ್ ಆಗಿದ್ದು, ಇದು ಚಿತ್ರ ಮತ್ತು ಪಠ್ಯ ಪ್ರಾಂಪ್ಟ್‌ಗಳಿಂದ ಕಂಟೆಂಟ್‌ಅನ್ನು ಕ್ರಿಯೇಟ್ ಮಾಡುತ್ತದೆ, ಹಾಗಿದ್ರೆ, ಈ GPT-4 ಎಂದರೆ ಏನು?, ಹಳೆಯ ಆವೃತ್ತಿಗೂ ಈ ಹೊಸ GPT-4 ಗೂ ಇರುವ ವ್ಯತ್ಯಾಸ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ. chat gpt information in kannada
ಈ GPT-4 ಎಂದರೆ ಏನು?
ಚಾಟ್ GPT-4 ಅನ್ನು ಪರಿಚಯಿಸಿದಾಗಿನಿಂದ ಬಹಳಷ್ಟು ಮಂದಿಗೆ ಇದರಲ್ಲಿ ಏನೆಲ್ಲಾ ವಿಶೇಷತೆ ಇದೆ?, ಹಳೆಯ ಆವೃತ್ತಿಗೂ ಇದಕ್ಕೂ ಇರುವ ವ್ಯತ್ಯಾದವಾದರೂ ಏನು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಅದರಂತೆ ಚಾಟ್ GPT-4 ಗೂ GPT-3.5 ಗೂ ಹೋಲಿಕೆ ಮಾಡಿದರೆ GPT-3.5 ಟೆಕ್ಸ್ಟ್ ಪ್ರಾಂಪ್ಟ್‌ಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಹಾಗೆಯೇ ಸುಮಾರು 3,000 ಪದಗಳ ಪ್ರತಿಕ್ರಿಯೆಗಳಿಗೆ ಮಾತ್ರ ಇದು ಸೀಮಿತವಾಗಿದೆ. ಆದರೆ, GPT-4 ಬರೋಬ್ಬರಿ 25,000 ಪದಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡಲಿದೆ.
ಹಾಗೆಯೇ ಅನುಮತಿಸದ ವಿಷಯಗಳ ವಿನಂತಿಗಳಿಗೆ ಪ್ರತಿಕ್ರಿಯಿಸುವ ಸಾಧ್ಯತೆ 82% ಕಡಿಮೆಯಾಗಿದೆ. ಇದು ಹಳೆ ಆವೃತ್ತಿಗಿಂತ ತುಂಬಾ ಕಡಿಮೆಯಾಗಿದ್ದು, ಈ ಪರೀಕ್ಷೆಯಲ್ಲಿ GPT-4 40% ಗೂ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದೆ. ಜೊತೆಗೆ GPT-4 ಸಂಭಾಷಣೆ ಸಾಕ್ರಟಿಕ್ ಶೈಲಿಯನ್ನು ಕಂಡುಬರಲಿದ್ದು, ಪ್ರಶ್ನೆಗಳಿಗೆ ಇದು ಪ್ರತಿಕ್ರಿಯಿಸಲಿದೆ ಹಾಗೂ ಪ್ರಶ್ನೆಗಳನ್ನೂ ನೀಡಲಿದೆ. ಇನ್ನು ಚಾಟ್ GPT ಈ ಹಿಂದೆ ಸ್ಥಿರವಾದ ಟೋನ್ ಮತ್ತು ಶೈಲಿಯನ್ನು ಹೊಂದಿತ್ತು. ಆದರೆ, ಶೀಘ್ರದಲ್ಲೇ ಬಳಕೆದಾರರು ಇದನ್ನು ಬದಲಾಯಿಸುವ ಆಯ್ಕೆಯನ್ನು ಪಡೆಯಲಿದ್ದಾರೆ.
GPT-4 ನ ಸಾಮರ್ಥ್ಯ
ಹೊಸದಾಗಿ ಪರಿಚಯಿಸಲಾದ GPT-4 ನ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಇದು ಯುಎಸ್ ಬಾರ್ ಪರೀಕ್ಷೆ ಮತ್ತು ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಯಲ್ಲಿ (GRE) ಪಾಸ್ ಮಾಡಿದೆ. ಅದರಲ್ಲೂ ಈ ಹಿಂದಿನ ಚಾಟ್ GPT ಗಿಂತಲೂ ಅತ್ಯುತ್ತಮವಾದ ಉತ್ತರಗಳನ್ನು ನೀಡಿದೆಯಂತೆ. ಜೊತೆಗೆ ಜನರು ತಮ್ಮ ತೆರಿಗೆಗಳನ್ನು ಲೆಕ್ಕಹಾಕಲು ಸಹಾಯ ಮಾಡಲಿದ್ದು, ಬಹುಪಾಲು ನಿಖರವಾದ ಉತ್ತರವನ್ನು ನೀಡಲಿದೆ ಎಂದು ಓಪನ್‌ಎಐನ ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ರಿಂದ ತಿಳಿದುಬಂದಿದೆ.
ಅದಾಗ್ಯೂ ಇದು ಎಲ್ಲಾ ಕಾರ್ಯವನ್ನು ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಈ ಹಿಂದೆ ಪರಿಚಯಿಸಲಾದ ಚಾಟ್ GPT ರೀತಿಯಲ್ಲಿಯೇ ಕೆಲವು ಮಿತಿಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ ಮಾನವರಿಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಜೊತೆಗೆ ಅನೇಕ ಡೊಮೇನ್‌ಗಳಲ್ಲಿ ಮಾನವ ಪ್ರಚಾರಕರಿಗೆ ಪ್ರತಿಸ್ಪರ್ಧಿಯಾಗಬಲ್ಲದು ಎಂದೂ ಸಹ ಸಂಸ್ಥೆ ತಿಳಿಸಿದ್ದು, ಎರಡು ಪಕ್ಷಗಳು ಪರಸ್ಪರ ಭಿನ್ನಾಭಿಪ್ರಾಯ ಹೊಂದುವಂತೆ ಮಾಡುವುದು ಹೇಗೆ ಎಂದು ಕೇಳಿದಾಗ ಕೆಲವು ಸಲಹೆಗಳೊಂದಿಗೆ ಉದಾಹರಣೆಯನ್ನು ಸಹ ಅದು ಉಲ್ಲೇಖಿಸಿದೆ.
ಇನ್ನುಳಿದಂತೆ ಇದು ಸಣ್ಣ ಪುಟ್ಟ ದೋಷಗಳನ್ನು ಹೊಂದಿದ್ದು, ಅದರಲ್ಲಿ ಸೆಪ್ಟೆಂಬರ್ 2021 ರ ನಂತರ ಸಂಭವಿಸಿದ ಘಟನೆಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಇದು ಹೊಂದಿಲ್ಲ. ಯಾಕೆಂದರೆ ಈ ಇಸವಿಯಿಂದ ಘಟಿಸಿದ ಮಾಹಿತಿಯನ್ನು ಕೇಳಿದರೆ ಕಡಿಮೆ ಮಟ್ಟದ ಮಾಹಿತಿಯನ್ನು ನೀಡಿದೆ. ಅದಾಗ್ಯೂ ಓಪನ್ ಎಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮ್ಯಾನ್ ಪ್ರತಿಕ್ರಿಯಿಸಿ, GPT-4 ಮಾನವೀಯ ಮೌಲ್ಯಗಳು ಮತ್ತು ಉದ್ದೇಶಗಳೊಂದಿಗೆ ಅತ್ಯಂತ ಸಮರ್ಥವಾಗಿದೆ ಮತ್ತು ರಚಿಸಲ್ಪಟ್ಟಿದೆ ಎಂದಿದ್ದಾರೆ.
ಖಾತೆಗೆ ಲಾಗ್ ಇನ್
ಇದರ ಬಳಕೆ ವಿಚಾರಕ್ಕೆ ಬರುವುದಾರೆ ಹಿಂದಿನ ಚಾಟ್ GPT AI ಚಾಟ್‌ಬಾಟ್‌ನಂತೆಯೇ ಈ ಚಾಟ್ GPT4 ಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಡಿವೈಸ್‌ನಲ್ಲಿ ಓಪನ್ ಎಐ ಖಾತೆಗೆ ಲಾಗ್ ಇನ್ ಮಾಡಿ. ಆ ಬಳಿಕ ಚಾಟ್ GPT ತೆರೆಯಿರಿ.ಅದರಲ್ಲಿ ನೀವು ಚಾಟ್ GPT ಪ್ಲಸ್‌ಗೆ ಅಪ್‌ಗ್ರೇಡ್ ಮಾಡಲು ಎಡಭಾಗದ ಮೆನುವಿನಲ್ಲಿ ಅಪ್‌ಗ್ರೇಡ್ ಟು ಪ್ಲಸ್ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಸಾಕು.