ಹಳೆಯ ವಾಹನ ಸವಾರಕರಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಹಳೆಯ ವಾಹನಗಳಿಗೆ ಶಾಕ್ ಕೊಡಲು ಸರ್ಕಾರ ಸಿದ್ಧವಾಗಿದೆ. ರಾಜ್ಯದಲ್ಲಿ ಗುಜರಿ ನೀತಿ ಕೆಲವು ದಿನಗಳಲ್ಲಿಯೇ ಜಾರಿ ಆಗಲಿದೆ. ಹಳೆಯ ವಾಹನಗಳ ರಿನೀವಲ್ ಸ್ಟಾರ್ಟ್ ಮಾಡಲಾಗುತ್ತಿದೆಯಂತೆ.
ರಾಜ್ಯದಲ್ಲಿ ಗುಜರಿ ನೀತಿ ಜಾರಿ
ಬೆಂಗಳೂರು ಬೆಳೆದಂತೆ ವಾಹನ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಸದ್ಯ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಹೆಚ್ಚಾಗಿ ಕಾಣಿಸುತ್ತಿದೆ. ಇನ್ನು ಟ್ರಾಫಿಕ್ ನ ನಿಯಂತ್ರಣ ಮಾಡುವುದಕ್ಕೆ ಸರ್ಕಾರ ಸಾಕಷ್ಟು ಕಸರತ್ತು ಮಾಡುತ್ತಿದೆ. ಇನ್ನೊಂದೆಡೆ ಹಳೆಯ ವಾಹನಗಳು ನಗರದಲ್ಲಿ ಸಿಕ್ಕಾಪಟ್ಟೆ ಮಾಲಿನ್ಯವನ್ನು ಉಂಟು ಮಾಡುತ್ತಿವೆ.
ಹೀಗಾಗಿ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಭೀತಿಯಲ್ಲಿ ರಾಜ್ಯ ಸರ್ಕಾರ ಗುಜರಿ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ.
ಪ್ರಮುಖ ಲಿಂಕ್‌ಗಳು:
ಇತ್ತೀಚಿನ ಸುದ್ದಿ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು | APPLY HERE ಕ್ಲಿಕ್ |
ಉದ್ದೇಶಗಳು ಮತ್ತು ದೃಷ್ಟಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ 1.2 ಕೋಟಿ ಎಂಡ್-ಆಫ್ ಲೈಫ್
ವಾಹನಗಳು ಮಾನ್ಯವಾದ ನೋಂದಣಿ ಪ್ರಮಾಣಪತ್ರಗಳು ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳಿಲ್ಲ ಎಂದು ಅಂದಾಜಿಸಲಾಗಿದೆ.
ಭಾರತದಾದ್ಯಂತ ಸ್ಕ್ರ್ಯಾಪ್ ಆಗಲಿರುವ 1.2 ಕೋಟಿ ವಾಹನಗಳಲ್ಲಿ, ಸರಿಸುಮಾರು 14.3 ಲಕ್ಷ ವಾಹನಗಳು (14
ಕರ್ನಾಟಕ ರಾಜ್ಯದಲ್ಲಿ ಒಟ್ಟು ಶೇ.
ಮುಂದಿನ 5 ವರ್ಷಗಳಲ್ಲಿ ಕರ್ನಾಟಕದಲ್ಲಿ 66 ಲಕ್ಷ ಹೆಚ್ಚುವರಿ ವಾಹನಗಳು ನೋಂದಣಿಯಾಗಲಿವೆ
15 ವರ್ಷವನ್ನು ದಾಟುತ್ತದೆ ಮತ್ತು ಈ ಎಂಡ್-ಆಫ್ ಲೈಫ್ ವೆಹಿಕಲ್‌ಗಳ (ELV) ಗಣನೀಯ ಸಂಖ್ಯೆಯ
ವಾಣಿಜ್ಯ ವರ್ಗದಿಂದ ಬಂದವರು.
ಕೆಳಗಿನ ಉದ್ದೇಶಗಳೊಂದಿಗೆ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ
i. ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಿ.
ii ರಸ್ತೆ, ಪ್ರಯಾಣಿಕರು ಮತ್ತು ವಾಹನ ಸುರಕ್ಷತೆಯನ್ನು ಸುಧಾರಿಸಿ.
iii. ಆಟೋ ವಲಯವನ್ನು ಉತ್ತೇಜಿಸಿ ಮತ್ತು ಉದ್ಯೋಗವನ್ನು ಸೃಷ್ಟಿಸಿ.
iv. ಇಂಧನ ದಕ್ಷತೆಯನ್ನು ಸುಧಾರಿಸುವುದು ಮತ್ತು ವಾಹನ ಮಾಲೀಕರಿಗೆ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು.
v. ಕರ್ನಾಟಕದಲ್ಲಿ ಪ್ರಸ್ತುತ ಅನೌಪಚಾರಿಕ ವಾಹನ ಸ್ಕ್ರ್ಯಾಪೇಜ್ ಉದ್ಯಮವನ್ನು ಔಪಚಾರಿಕಗೊಳಿಸಿ.
vi.ವಾಹನ, ಉಕ್ಕು ಮತ್ತು ವಿದ್ಯುನ್ಮಾನಕ್ಕೆ ಕಡಿಮೆ ಬೆಲೆಯ ಕಚ್ಚಾ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಿ
ಉದ್ಯಮ.
vii. ವೈಜ್ಞಾನಿಕ ರೀತಿಯಲ್ಲಿ ವಾಹನದ ಅವಶೇಷಗಳ ಮರುಬಳಕೆಯನ್ನು ಉತ್ತೇಜಿಸುವುದು,
viii. ಪರಿಸರ ಸ್ನೇಹಿ ರೀತಿಯಲ್ಲಿ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುವುದು.
ಗುಜರಿ ವಾಹನಗಳ ಸಂಚಾರಕ್ಕೆ ನಿಷೇಧ
ಸದ್ಯ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಮೂರೂ ಕೋಟಿ ವಾಹನಗಳು ನೋಂದಣಿ ಆಗಿವೆ. ಇದರಲ್ಲಿ 15 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟ ವಾಹನಗಳು ಆಗಿವೆ.
ಹಳೆಯ ವಾಹನಗಳು ಹೆಚ್ಚು ಹೋಗೆ ಬಿಡುವುದರಿಂದ ಪರಿಸರ ಹಾಳಾಗುತ್ತಿವೆ. ಗುಜರಿ ನೀತಿ ಅನುಷ್ಠಾನ ಅಂದರೆ ಲಕ್ಷಾಂತರ ಗುಜರಿ ವಾಹನಗಳು ರಸ್ತೆಯಲ್ಲಿ ಓಡಾಡುವಂತೆ ಇಲ್ಲ. 15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನ, 20 ವರ್ಷ ಮೇಲ್ಟಟ್ಟ ಪರ್ಸನಲ್ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಗುಜರಿ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಹಳೆಯ ವಾಹನಗಳಿಂದ ಹೆಚ್ಚುತ್ತಿದೆ ಪರಿಸರ ಮಾಲಿನ್ಯ
ಇನ್ನು ಬೆಂಗಳೂರು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಅಂದರೆ ಅದು ಪರಿಸರ ಮಾಲಿನ್ಯ, ಪ್ರತಿ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ನಗರದ ಪರಿಸರವನ್ನು ಹಾಳು ಮಾಡುತ್ತಿದೆ.
ನಗರದಲ್ಲಿ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಯು ವಿಷಕಾರಿಯಾಗುವ ಆತಂಕ ಇದೆ. ಹೀಗಾಗಿ ಇದಕ್ಕೆ ಕಡಿವಾಣ ಮಾಡಲು ಕಾಂಗ್ರೆಸ್ ಸಿದ್ಧತೆ ಮಾಡಿದೆ. ಜನ ಎಷ್ಟರ ಮಟ್ಟಿಗೆ ಗುಜರಿಗೆ ಹಾಕುವುದಕ್ಕೆ ಮುಂದಾಗ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.