rtgh

ನಿಮ್ಮ Aadhaar Card ಮಾಹಿತಿ ಲೀಕ್ ಆಗಿದ್ಯಾ? ಕೆಲವೇ ಕ್ಷಣಗಳಲ್ಲಿ ಈ ರೀತಿ ಲಾಕ್ ಮತ್ತು ಅನ್ಲಾಕ್ ಮಾಡಿ.


Aadhaar Card Information Leaked Lock and unlock like this in seconds
Aadhaar Card Information Leaked Lock and unlock like this in seconds

ಭಾರತದ ವಿಶಿಷ್ಟ ಗುರುತಿನ ವ್ಯವಸ್ಥೆಯಾದ ಆಧಾರ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ವಿವಿಧ ವಹಿವಾಟುಗಳಿಗೆ ಗುರುತು ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಈ ಅನುಕೂಲಕ್ಕಾಗಿ ಹೆಚ್ಚಿನ ಭದ್ರತೆಯ ಅಗತ್ಯವು ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಆಧಾರ್ ಕಾರ್ಡ್ ಮಾಹಿತಿಯ ಸೋರಿಕೆಗೆ ಸಂಬಂಧಿಸಿದಂತೆ ಆತಂಕಗಳು ಹುಟ್ಟಿಕೊಂಡಿವೆ. ಈ ಕಾಳಜಿಗಳನ್ನು ಪರಿಹರಿಸಲು ಮತ್ತು ನಿಮ್ಮ ಗುರುತನ್ನು ರಕ್ಷಿಸಲು, ನೀವು ಇದೀಗ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಲಾಕ್ ಮಾಡಬಹುದು ಮತ್ತು ಅನ್‌ಲಾಕ್ ಮಾಡಬಹುದು.

ಇಂದಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳನ್ನು ಪ್ರತಿದಿನ ನ್ಯೂಸ್, ಪೇಪರ್ ಅಥವಾ ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಹಾಹಾಗಿ ಈ ಆನ್ಲೈನ್ ಪ್ರಕರಣಗಳು (Online Scam) ಮತ್ತಷ್ಟು ಹೆಚ್ಚಿವೆ. ಪ್ರತಿದಿನ ಜನರು ಆನ್‌ಲೈನ್ ವಂಚನೆಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇನ್ನು ಓದಿ : ಅಪ್ಪು ಹೃದಯ ಜ್ಯೋತಿ ಯೋಜನೆಗೆ ಚಾಲನೆ.APL ಮತ್ತು BPL ಕಾರ್ಡ್ ಇದ್ದವರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ.

ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು. ನಿಮಗೆ ತಿಳಿದಿರುವಂತೆ ಭಾರತ ಸರ್ಕಾರವು ಜನರನ್ನು ಗುರುತಿಸಲು 12 ಅಂಕೆಗಳ ವಿಶಿಷ್ಟ ಆಧಾರ್ ಕಾರ್ಡ್(Aadhaar Card) ಗುರುತಿನ ಚೀಟಿಯನ್ನು ಒದಗಿಸುತ್ತದೆ.

Aadhaar Card ಆನ್ಲೈನ್ ಪ್ರಕರಣಗಳು (Online Scam) ಹೆಚ್ಚುತ್ತಿವೆ

ಈ ಡಾಕ್ಯುಮೆಂಟ್ ಜನರು ತಮ್ಮ ಗುರುತನ್ನು ಸಾಬೀತುಪಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದನ್ನು ಬಹುತೇಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಬಳಸಲಾಗುತ್ತದೆ. ಜನರ ಆಧಾರ್ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಹಲವು ವರದಿಗಳು ಹೊರಹೊಮ್ಮಿವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ಡೇಟಾವನ್ನು ತಪ್ಪು ಉದ್ದೇಶಗಳಿಗಾಗಿ ಬಳಸಲಾಗಿದೆಯೇ ಎಂಬುದನ್ನು ನೀವು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಇನ್ನು ಓದಿ : ರಾಜ್ಯದಲ್ಲಿ ಜಾರಿಗೆ ಬಂತು ಸೋಲಾರ್ ಯೋಜನೆ.ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ.

Aadhaar Card ಹಿಸ್ಟರಿಯನ್ನು ತಿಳಿಯುವುದು ಹೇಗೆ?

  • ಮೊದಲನೆಯದಾಗಿ UIDAI ನ ಅಧಿಕೃತ ವೆಬ್‌ಸೈಟ್ uidai.gov.in ವೆಬ್‌ಸೈಟ್‌ಗೆ ಹೋಗಿ ನಿಮ್ಮ ಭಾಷೆಯನ್ನು ಆಯ್ಕೆಮಾಡಿ.
  • ಇದರ ನಂತರ ಸ್ಕ್ರಿನ್ ಮೇಲಿನ ಎಡ ಮೂಲೆಯಲ್ಲಿ ಗೋಚರಿಸುವ ‘myAadhaar’ ವಿಭಾಗಕ್ಕೆ ಹೋಗಿ ಇಲ್ಲಿ ನೀವು ಡ್ರಾಪ್-ಡೌನ್ ಮೆನುವನ್ನು ನೋಡುತ್ತೀರಿ.
  • ಈಗ ‘ಆಧಾರ್ ಅಥೆಂಟಿಕೇಶನ್ ಹಿಸ್ಟರಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮನ್ನು ಹೊಸ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.
  • ನಂತರ ಸ್ಕ್ರೀನ್ ಮೇಲೆ ಗೋಚರಿಸುವ ಲಾಗಿನ್ ಅನ್ನು ಕ್ಲಿಕ್ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ OTP ಪಡೆಯಿರಿ.
  • ಇದರ ನಂತರ ಪರಿಶೀಲನೆಗಾಗಿ OTP ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ ಅಷ್ಟೇ.
  • ಈಗ ನಿಮ್ಮ ಮುಂದೆ ನಿಮ್ಮ ಆಧಾರ್ ಕಾರ್ಡ್ ಮತ್ತು ಎಲ್ಲೆಲ್ಲಿ ಯಾವ ಕಾರಣಕ್ಕಾಗಿ ಬಳಕೆಯಾಗಿದೆ ಎನ್ನುವುದನ್ನು ತಿಳಿಯಿರಿ.
  • ಇದರಲ್ಲಿ ನೀವು ಅನಧಿಕೃತವಾದ ಬಳಕೆಯನ್ನು ಗಮನಿಸದರೆ ತಕ್ಷಣ ಹೆಚ್ಚೆತ್ತುಕೊಂಡು ಇದರ ವಿರುದ್ಧ ದೂರು ನೀಡಬಹುದು.

Lock and unlock aadhaar card

ಆಧಾರ್ ಕಾರ್ಡ್ ಲಾಕ್ ಮತ್ತು ಅನ್ಲಾಕ್ ಮಾಡುವುದು ಹೇಗೆ?

ಜನ ಸಾಮಾನ್ಯರ ಸುರಕ್ಷತೆಯನ್ನು ಹೆಚ್ಚಿಸಲು UIDAI ವೆಬ್‌ಸೈಟ್ ಮೂಲಕ ಅಥವಾ mAadhaar ಅಪ್ಲಿಕೇಶನ್ ಮೂಲಕ ತಮ್ಮ ಆಧಾರ್ (UID) ಮಾಹಿತಿಯನ್ನ ಲಾಕ್ / ಅನ್ಲಾಕ್ ಮಾಡಬಹುದು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅನ್ಲಾಕ್ ಮಾಡಲು ಬಯಸಿದರೆ ನಿಯುವ UIDAI ವೆಬ್‌ಸೈಟ್ ಅಥವಾ mAadhaar ಅಪ್ಲಿಕೇಶನ್ ಮೂಲಕ ನಿಮ್ಮ ಇತ್ತೀಚಿನ VID ರಚಿಸಿದ್ದರೆ ಅದನ್ನು ಬಳಸಿಕೊಂಡು ಈ ಪ್ರಕ್ರಿಯೆಯನ್ನು ಮಾಡಬಹುದು. ಏನಂದ್ರೆ ಈ ನಿಮ್ಮ ಆಧಾರ್ ಲಾಕ್ / ಅನ್ಲಾಕ್ ಮಾಡಲು ವರ್ಚುಯಲ್ ಐಡಿಯಿಂದ ಮಾತ್ರ ಸಾಧ್ಯವಾಗುತ್ತದೆ.

ಇನ್ನು ಓದಿ : ರೈತರೇ ಗಮನಿಸಿ: Solar ಪಂಪ್‌ಸೆಟ್‌ಗೆ 1.5 ಲಕ್ಷ ‘ಸಹಾಯಧನ’ ಪಡೆದುಕೊಳ್ಳುವುದಕ್ಕೆ ಈ ರೀತಿ ಅರ್ಜಿ ಸಲ್ಲಿಸಿ.

ಆಧಾರ್ ವರ್ಚುಯಲ್ ಐಡಿ ಪಡೆಯುವುದು ಹೇಗೆ?

ನಿಮ್ಮ ಆಧಾರ್‌ಗಾಗಿ ಹೊಸ ವರ್ಚುಯಲ್ ಐಡಿ ಕ್ರಿಯೇಟ್ ಮಾಡಲು https://myaadhaar.uidai.gov.in/genericGenerateOrRetriveVID ಮೇಲೆ ಕ್ಲಿಕ್ ಮಾಡಿ ರಚಿಸಿಕೊಳ್ಳಬಹುದು. ಇದರ ನಂತರ ನೀವು ಬಯೋಮೆಟ್ರಿಕ್ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ಬಯೋಮೆಟ್ರಿಕ್ ಲಾಕ್ / ಅನ್ಲಾಕ್ ಅನ್ನು ಸಕ್ರಿಯಗೊಳಿಸುವ ಆಯ್ಕೆಯ ಮೇಲೆ ಟಿಕ್ ಮಾಡಿ ‘ಸರಿ’ ಎನ್ನುವುದರ ಮೇಲೆ ಟ್ಯಾಪ್ ಮಾಡಿ. ಇದರ ನಂತರ ನಿಮ್ಮ ಆಧಾರ್‌ನ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಂದು OTP ಕಳುಹಿಸಲಾಗುತ್ತದೆ. ಈ OTP ನಮೂದಿಸಿದ ತಕ್ಷಣ ಬಯೋಮೆಟ್ರಿಕ್ ವಿವರಗಳು ತಕ್ಷಣವೇ ಲಾಕ್ / ಅನ್ಲಾಕ್ ಮಾಡಬಹುದು.


Leave a Reply

Your email address will not be published. Required fields are marked *